ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಗೆದ್ದಿದೆ, ಶುಭಕಾಲ ಬರುತ್ತಿದೆ

ಜಯಗಳಿಸಿದ ಬಳಿಕ ನರೇಂದ್ರ ಮೋದಿ ಮೊದಲ ಟ್ವೀಟ್‌
Last Updated 16 ಮೇ 2014, 19:30 IST
ಅಕ್ಷರ ಗಾತ್ರ

ಗಾಂಧಿನಗರ (ಐಎಎಎನ್‌ಎಸ್‌): ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ‘ ಭಾರತ ಗೆದ್ದಿದೆ. ಒಳ್ಳೆಯ ದಿನಗಳು ಬರುತ್ತಿವೆ ( ಭಾರತ್‌ ಕಿ ವಿಜಯ್‌. ಅಛ್ಛಾ ದಿನ್‌ ಆನೆ ವಾಲಾ  ಹೈ’ ಎಂದು ಟ್ವೀಟ್‌ ಮಾಡಿದರು.

ಬಸು ದಾಖಲೆ ಮುರಿಯಲು ವಿಫಲ (ಅಹಮದಾಬಾದ್ ವರದಿ): ನರೇಂದ್ರ ಮೋದಿ ಅವರು ವಡೋದರಾದಲ್ಲಿ ತಮ್ಮ ಎದುರಾಳಿ, ಕಾಂಗ್ರೆಸ್‌ನ ಮಧುಸೂದನ್‌ ಮಿಸ್ತ್ರಿ ಅವರನ್ನು 5,70,128 ಮತಗಳಿಂದ ಸೋಲಿಸಿದ್ದಾರೆ. ಆದರೆ 2004ರಲ್ಲಿ ಭಾರಿ ಅಂತರದಲ್ಲಿ ಗೆದ್ದಿದ್ದ ಸಿಪಿಎಂ ಅನಿಲ್‌ ಬಸು ದಾಖಲೆ ಮುರಿಯಲು ಮೋದಿ ಸೋತಿದ್ದಾರೆ.

2004ರ ಚುನಾವಣೆಯಲ್ಲಿ ಪಶ್ಚಿಮ­ಬಂಗಾಳದ ಅಮರ್‌ಬಾಗ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸು, 5,92,502 ಮತಗಳ ಭಾರಿ ಅಂತರದಿಂದ ವಿಜೇತರಾಗಿದ್ದರು.

1989ರ ಚುನಾವಣೆಯಲ್ಲಿ ಜನತಾ­ದಳ­ದಿಂದ ಸ್ಪರ್ಧಿಸಿದ್ದ ರಾಮ್‌ವಿಲಾಸ್‌ ಪಾಸ್ವಾನ್‌, 5,04,448 ಮತಗಳಿಂದ ಗೆದ್ದು 1977ರಲ್ಲಿ ತಾವೇ ಮಾಡಿದ್ದ ದಾಖಲೆ ಮುರಿದಿದ್ದರು. 77ರಲ್ಲಿ  ಭಾರ­ತೀಯ ಲೋಕದಳದ ಅಭ್ಯರ್ಥಿಯಾಗಿ ಸ್ವರ್ಧಿ­ಸಿದ್ದ   ಪಾಸ್ವಾನ್‌್, 4,24,545 ಮತಗಳಿಂದ ಗೆದ್ದಿದ್ದರು.

ಅಮ್ಮನ ಆಶೀರ್ವಾದ
ಮೋದಿ ಶುಕ್ರವಾರ ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶಿರಬಾಗಿ ವಂದಿಸಿದ ಮಗನಿಗೆ ತಾಯಿ ಹೀರಾಬೆನ್‌ ಮನದುಂಬಿ ಆಶೀರ್ವದಿಸಿದರು.

‘ಅವನಿಗೆ ನನ್ನ ಆಶೀರ್ವಾದ ಇದೆ. ಆತ ದೇಶ ಅಭಿವೃದ್ಧಿಯತ್ತ ಕೊಂಡೊ­ಯ್ಯಲ್ಲಿದ್ದಾನೆ’ ಎಂದು ತಿಳಿಸಿದರು. ತಾಯಿ ಆಶೀರ್ವಾದ ಪಡೆದ ಮೋದಿ ತಮ್ಮ ಕುಟುಂಬದ ಸದಸ್ಯರು ಹಾಗೂ ಸಹೋದರ ಪಂಕಜ್‌ ಮೋದಿ ಮಕ್ಕಳ ಜತೆ ಸ್ವಲ್ಪ ಹೊತ್ತು ಕಾಲ ಕಳೆದರು.

ಎರಡೂ ಕ್ಷೇತ್ರದಲ್ಲೂ ಭಾರಿ ಅಂತರದ ಗೆಲುವು
ನವದೆಹಲಿ:
ಗುಜರಾತ್‌ನ ವಡೋದರಾದಲ್ಲಿ ನರೇಂದ್ರ ಮೋದಿ  8,45,464 ಮತಗಳನ್ನು ಪಡೆದಿದ್ದರೆ ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಧುಸೂದನ ಮಿಸ್ತ್ರಿ 2,75,336 ಮತಗಳನ್ನು ಪಡೆದಿದ್ದಾರೆ.

ಗೆಲುವಿನ ಅಂತರ 5,70,128. ವಡೋದರಾದಲ್ಲಿ ಆಮ್‌ ಆದ್ಮಿ ಪಕ್ಷದ ಸುನೀಲ್‌ ದಿಗಂಬರ ಕುಲಕರ್ಣಿ ಮೂರನೇ ಸ್ಥಾನದಲ್ಲಿದ್ದು, 10,101 ಮತಗಳನ್ನು ಪಡೆದಿದ್ದಾರೆ. 

ಮೋದಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲೂ ಬಿಜೆಪಿ 5,69, 890 ಮತಗಳನ್ನು ಪಡೆದಿದ್ದರೆ ಆಮ್‌ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್‌ 2,04,720 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಗೆಲುವಿನ ಅಂತರ 3,65,170 ಮತಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT