ಭಾರತ ಒಲಿಂಪಿಕ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾಗಿರುವ ಅಭಯ್ ಸಿಂಗ್ ಚೌತಾಲ ಅವರು ಭಾರತ ಹವ್ಯಾಸಿ ಬಾಕ್ಸಿಂಗ್ ಫೆಡರೇಷನ್ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಭಾವಿಸಿದೆ. ಹೀಗಾಗಿ ಡಿಸೆಂಬರ್ 6ರಿಂದ ಜಾರಿಗೆ ಬರುವಂತೆ ಭಾರತ ಹವ್ಯಾಸಿ ಬಾಕ್ಸಿಂಗ್ ಫೆಡರೇಷನ್ ಅನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ.