ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಬಳಿ ಸಾಗಿದ ಇರೊಸ್

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭೂಮಿಗೆ ಸಮೀಪವಿರುವ ಎರಡನೇ ಅತಿ ದೊಡ್ಡ ಕ್ಷುದ್ರಗ್ರಹವಾದ 34 ಕಿ.ಮೀ. ವ್ಯಾಸದ `ಇರೊಸ್~ ಅತಿ ಹತ್ತಿರದಲ್ಲಿ ಹಾದು ಹೋಗಿದ್ದು, ಇದೀಗ ಅದನ್ನು ಸಿಂಹ, ಸೆಕ್ಸ್‌ಟನ್ಸ್ ಹಾಗೂ ಹೈಡ್ರಾ ತಾರಾಪುಂಜಗಳಲ್ಲಿ ಕಾಣಬಹುದಾಗಿದೆ. ಈ ಕ್ಷುದ್ರಗ್ರಹ ಮಂಗಳವಾರ ಸಂಜೆ 4.30ಕ್ಕೆ ಭೂಮಿಗೆ ಅತಿ ಸಮೀಪದಲ್ಲಿ ಹಾದು ಹೋಯಿತು ಎಂದು ಪ್ಲಾನೆಟರಿ ಸೊಸೈಟಿ ಆಫ್ ಇಂಡಿಯಾ ನಿರ್ದೇಶಕ ಎನ್.ರಘುನಂದನ್ ಕುಮಾರ್ ಹೇಳಿದ್ದಾರೆ.

ಮೆಗ್ನೀಷಿಯಂ ಸಿಲಿಕೇಟ್ ಮತ್ತು ಕಬ್ಬಿಣದ ಅಂಶಗಳನ್ನು ಒಳಗೊಂಡ ಬಂಡೆ ರೂಪದ ಈ ಕ್ಷುದ್ರಗ್ರಹವು ಭೂಮಿ- ಚಂದ್ರನ ನಡುವಿನ ಅಂತರದ 70 ಪಟ್ಟು ದೂರದಲ್ಲಿ, ಅಂದರೆ 2,67,29,000 (ಎರಡು ಕೋಟಿ 67 ಲಕ್ಷ 29 ಸಾವಿರ) ಕಿ.ಮೀ. ದೂರದಲ್ಲಿ ಹಾದುಹೋಗಿದೆ.

ಪೂರ್ವ ದಿಕ್ಕಿನ ಆಗಸದಲ್ಲಿ ರಾತ್ರಿ 10ರ ನಂತರ ಸೆಕ್ಸ್‌ಟಂಟ್ಸ್ ಮತ್ತು ಹೈಡ್ರಾ ತಾರಾಗುಚ್ಛಗಳಿಡೆಗೆ ಕಣ್ಣು ನೆಟ್ಟರೆ ಫೆ.10ರವರೆಗೆ ಈ ಕ್ಷುದ್ರಗ್ರಹವನ್ನು ಕಾಣಬಹುದಾಗಿದೆ ಎಂದು ಅವರು ತಿಳಿಸಿದ್ದರೆ.

ಈ ಮುನ್ನ 37 ವರ್ಷಗಳ ಹಿಂದೆ, 1975ರಲ್ಲಿ  ಈ ಕಾಯ ಭೂಮಿಗೆ ಅತಿ ಸಮೀಪದಲ್ಲಿ ಹಾದು ಹೋಗಿತ್ತು. ಮುಂದೆ ಪುನಃ 2056ರಲ್ಲಿ ಇದು ಸನಿಹದಲ್ಲಿ ಹಾದು ಹೋಗಲಿದೆ.

642.9 ದಿನಗಳಿಗೊಮ್ಮೆ ಸೂರ್ಯನನ್ನು ಸುತ್ತುವ ಈ ಕಾಯ ತನ್ನ ಅಕ್ಷದ ಸುತ್ತ ಪ್ರತಿ 5 ಗಂಟೆ 16 ನಿಮಿಷಗಳಿಗೊಮ್ಮೆ ಗಿರಕಿ ಹೊಡೆಯುತ್ತದೆ.

ಗ್ರೀಕ್ ಪ್ರಣಯ ದೇವತೆ `ಇರೊಸ್~ ಹೆಸರಿನಿಂದ ನಾಮಕರಣಗೊಂಡಿರುವ ಈ ಕಾಯವನ್ನು 1898ರ ಆ.13ರಂದು ಮೊತ್ತಮೊದಲಿಗೆ ಪತ್ತೆಹಚ್ಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT