ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಜನಾಂಗದಿಂದ ಮನವಿ

Last Updated 2 ಜನವರಿ 2014, 7:02 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಮಡಿವಾಳ ಜನಾಂಗ­ವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಮಡಿವಾಳರ ಸಂಘದ ಪದಾಧಿ­ಕಾರಿಗಳು ಮತ್ತು ಸದಸ್ಯರು ಬುಧವಾರ  ತಹ­ಶೀಲ್ದಾರ ಹನು­ಮಂತಪ್ಪ ಬಡಿದಾಳ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ­ದರು.

ಮಡಿವಾಳ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಮಡಿ­ವಾಳರ ಮಾತನಾಡಿ, ಮಡಿವಾಳ ಜನಾಂಗ ಎಲ್ಲಾ ಕ್ಷೇತ್ರಗಳಲ್ಲಿ ಅತೀ ಹಿಂದು­­ಳಿದ ಜನಾಂಗವಾಗಿದೆ. ರಾಷ್ಟ್ರದ ಇತರೆ ೧೭ ರಾಜ್ಯಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ­­ಗೊಳಿ­ಸಿವೆ. ಕರ್ನಾಟಕ ರಾಜ್ಯ­ದಲ್ಲಿ ಪ್ರೊ.ಅನ್ನ­ಪೂರ್ಣಾ ವರದಿಯ ಅನುಸಾರ ಮಡಿ­ವಾಳ ಜನಾಂಗವನ್ನು ಪಜಾಗೆ ಸೇರಿಸ­ಬೇಕೆಂದು ಒತ್ತಾಯಿ­ಸಿದರು.

ಮಡಿವಾಳ ಮಾಚಿದೇವರ ಜನ್ಮ ದಿನ­ವನ್ನು ಸಂವಿಧಾನಾತ್ಮಕವಾಗಿ ಮಾಚಿ­ದೇವ ಜಯಂತಿ ಎಂದು ಸರ್ಕಾರವೇ ಆಚರಿಸಲು ಘೋಷಣೆ ಮಾಡಬೇಕು, ಮಾಚಿದೇವರ ಜನ್ಮಸ್ಥಳ ಸಿಂಧಗಿ ತಾಲ್ಲೂ­­ಕಿನ ದೇವರಹಿಪ್ಪರಗಿ­ಯನ್ನು ಅಭಿ­­­ವೃದ್ಧಿಪಡಿಸಬೇಕು, ಮಾಚಿದೇವ ಪ್ರಾಧಿ­ಕಾರ ಮತ್ತು ಅಧ್ಯಯನ ಪೀಠ ಸ್ಥಾಪಿಸ­ಬೇಕು ಎಂದು ಆಗ್ರಹಿಸಿದರು.

ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ೫ರಂದು ಬೆಳಿಗ್ಗೆ ೯.೩೦ಕ್ಕೆ ಬೆಂಗಳೂರಿನ ಬಸವನಗುಡಿ ಹತ್ತಿರ ಇರುವ ನ್ಯಾಷ­ನಲ್ ಕಾಲೇಜು ಮೈದಾನದಲ್ಲಿ ಸಮಾ­ವೇಶ ನಡೆಸಲಾಗುವುದು, ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾ­ಗುವುದು ಎಂದರು.

ಹನುಮಂತಪ್ಪ. ಫಕ್ಕೀರಪ್ಪ. ಮಡಿ­ವಾಳರ, ಕುಮಾರ ಡಿ.ಮಡಿ­ವಾಳರ, ಎಂ.ಚಿರಂಜೀವಿ, ಅನಿಲ ಮಡಿವಾಳರ, ಅಶೋಕ­ಸ್ವಾಮಿ ಮಡಿವಾಳರ, ದೇವೇಂದ್ರ ಮಡಿವಾಳರ,­ ಮಧು­ಕುಮಾರ ಮಡಿವಾಳರ, ಸಂತೋಷ ಮಡಿ­ವಾಳರ, ಜಿ,ಜಿ,ಮಡಿವಾಳರ, ಮನೋಹರ ಮಡಿವಾಳರ, ಎ.ಡಿ ಮಡಿವಾಳರ, ಕೆ.ಡಿ ಮಡಿವಾಳರ, ನಿಂಗಪ್ಪ ಮಡಿವಾಳರ, ಮಹೇಶಪ್ಪ ಮಡಿವಾಳರ, ಈರಣ್ಣ ದೊಡ್ಡಮನಿ, ವಿಜಯ ಮಡಿವಾಳರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT