ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯ ಮೇಲೆ ಬೆಳಕು ಚೆಲ್ಲಿದ ನಾಟಕ

Last Updated 6 ಫೆಬ್ರುವರಿ 2012, 9:15 IST
ಅಕ್ಷರ ಗಾತ್ರ

ಇಳಕಲ್: ನಗರದ ಆರ್.ವೀರಮಣಿ ಸಾಂಸ್ಕೃತಿಕ ಭವನದಲ್ಲಿ ಸಾದತ್ ಹಸನ್ ಮಾಂಟೋ ಅವರ ರೇಡಿಯೊ ನಾಟಕ ಹಾಗೂ ಕಥೆಗಳನ್ನು ಆಧರಿಸಿ, ಆರ್.ಪಿ. ಹಗಡೆ ರಚಿಸಿದ `ಸೀರೆ~ ನಾಟಕವನ್ನು ಧಾರವಾಡದ ಆಟ-ಮಾಟ ಸಾಂಸ್ಕೃತಿಕ ಪಥ~ ತಂಡವು ಪ್ರದರ್ಶಿಸಿತು.

ಸ್ವಾತಂತ್ರ್ಯ ನಂತರ ದೇಶ ವಿಭಜನೆಯಿಂದ ಘಾಸಿಗೊಂಡ ಮಾಂಟೋ ಆ ಸಂದರ್ಭದಲ್ಲಿ ನಡೆದ ಧಾರ್ಮಿಕ ದ್ವೇಷದ ಕೋಮು ದಳ್ಳುರಿಯಲ್ಲಿ ಕಂಡು ನಲುಗಿದರು. ಧಾರ್ಮಿಕ ಅಸಹಿಷ್ಣುತೆ ಪರಾಕಾಷ್ಠೆ ತಲುಪಿದಾಗ ನಡೆದ ಹಿಂಸೆಯಲ್ಲಿ ನಾಶವಾಗಿದ್ದು, ಹಿಂದೂ ಧರ್ಮನೂ ಅಲ್ಲ, ಇಸ್ಲಾಂ ಧರ್ಮವೂ ಅಲ್ಲ. ನಾಶವಾಗಿದ್ದು ಮಾನವೀಯತೆ ಹಾಗೂ ಮನುಷ್ಯತ್ವ ಎಂದು ಮಾಂಟೋನ ದೇಶ ವಿಭಜನೆಯ ಕಹಿ ನೆನಪುಗಳೊಂದಿಗೆ ನಾಟಕ ಆರಂಭವಾಗುತ್ತದೆ.
 
ದೇಶ ವಿಭಜನೆ, ಆ ಮೂಲಕ ಹೊತ್ತಿದ ಕೋಮುದಳ್ಳುರಿಯಿಂದ ನಾಶವಾದ ಮನುಷ್ಯತ್ವದ ಹುಡುಕಾಟದಲ್ಲಿ ಮಾಂಟೋ ಎರಡು ದೇಶಗಳಿಗೂ ಬೇಡದವನಾಗಿ ಪರಕೀಯನಾಗುತ್ತಾನೆ. ಮಾಂಟೋನ ನೆನಪುಗಳು ನಾಟಕದ ಉದ್ದಕ್ಕೂ ವಿಷಾದದ ಭಾವವನ್ನು ಮೂಡಿಸುತ್ತವೆ.

`ಸೀರೆ~ ಹೊಂದುವ ಬಡ ತರುಣಿ ಯೊಬ್ಬಳ ಬಯಕೆ, ಬಯಕೆ ಈಡೇರಿ ಕೆಯ ಹಂತದಲ್ಲಿ ಅವಳಲ್ಲಿ ಉಂಟಾಗುವ ಗೊಂದಲ, ಸಂತೋಷ, ದ್ವಂದ್ವಗಳು ಚುರುಕಾದ ಸಂಭಾಷಣೆಯಲ್ಲಿ ಚೆನ್ನಾಗಿ ಮೂಡಿಬಂದಿವೆ. ತ್ರಿಕೋನ ಪ್ರೇಮದ ಮೂಲಕ ಬದುಕಿನ ವಾಸ್ತವ ಹಾಗೂ  ಆದರ್ಶಗಳನ್ನು ಮುಖಾಮುಖಿ ಯಾಗಿಸುತ್ತದೆ.

ಸೀರೆ ಹೊಂದುವ ಬಯಕೆಯನ್ನು ಬಳಸಿಕೊಂಡು ಒಲಿಸಿಕೊಳ್ಳುವ ಶ್ರೀಮಂತ ಒಂದೆಡೆಗೆ, ಸುಂದರ ಕವನ ಗಳ ಮೂಲಕ ಮನಗೆದ್ದ ಕವಿ ಇನ್ನೊಂದೆಡೆ. ಪ್ರೀತಿಯ ಹುಡುಗಿಯ ಸೀರೆಯ ಬಯಕೆಯನ್ನು ಈಡೇರಿಸಲು ಒದ್ದಾಡುವ ಕವಿ, ಕವನಗಳನ್ನು ಮಾರಿ ಬಂದ ಹಣದಲ್ಲಿ ಸೀರೆ ಕೊಂಡು ತರುವ ಹೊತ್ತಿಗೆ ಯುವತಿ ಶ್ರೀಮಂತನೊಬ್ಬನ ಸೀರೆ ಉಟ್ಟುಕೊಂಡಿರುತ್ತಾಳೆ.

ಸೀರೆ ಒಡವೆ, ಬಂಗ್ಲೆ ಎಲ್ಲ ಇದ್ದರೂ ಕವಿಯ ಹಗೆ ಅವಳನ್ನು ವರ್ಣಿಸಲು ಸಾಧ್ಯವಾಗದ ಶ್ರೀಮಂತನಿಗೆ ಇದೊಂದು ಕೊರತೆ ಎನಿಸುತ್ತದೆ. ಅದನ್ನು ನೀಗಿಸಿಕೊಳ್ಳಲು ಅವಳ ಕವನದ ಆಸಕ್ತಿಯನ್ನು ಪೂರೈಸಲು ಶ್ರೀಮಂತ ಕವಿಯಿಂದ ಕವನ ಖರೀದಿಸುತ್ತಾನೆ. ಶ್ರೀಮಂತ ಕೊಟ್ಟ ಕವನಗಳನ್ನು ಓದುತ್ತಿದ್ದಂತೆ ಯುವತಿಗೆ ತನ್ನ ಕವಿ ಕಾಡ ಲಾರಂಭಿಸ್ತುತಾನೆ. ಏಕೆಂದರೆ ಆ ಕವನಗಳು ಅವಳನ್ನು ಕುರಿತು ಕವಿ ಬರೆದದ್ದು ಎಂದು ಅವಳಿಗೆ ಗೊತ್ತಾಗುತ್ತದೆ.

ಯುವತಿಯ ಬಡತನ ಹಾಗೂ ಬಯಕೆ, ಕವಿಯ ಅಸಹಾಯಕತೆಯಂತಹ ಬದುಕಿನ ವಾಸ್ತವಗಳನ್ನು ಎದುರಿಸಲಾಗದೇ ಹಣದ ಎದುರು ಸೋಲುತ್ತಾರೆ. ಆದರೆ ಹಣವೊಂದು ಮನಸ್ಸಿನ ಸಂತೋಷಕ್ಕೆ ಕಾರಣವಾಗು ವುದಿಲ್ಲ. ಶ್ರೀಮಂತಿಕೆಯ ನಡುವಿದ್ದಾಗಲೂ ಕವನಗಳ ಮೂಲಕ ಕವಿ ನೆನಪಾಗುವುದು ಇದನ್ನು ಸಮರ್ಥಿ ಸುತ್ತದೆ.
 
ಯುವತಿಯ ಪಾತ್ರದಲ್ಲಿ ನಟಿಸಿದ ಕೋಲಾರದ ಧನುಳ ಅಭಿನಯ ಅದ್ಭುತ. ಮಿತ ಸೌಲಭ್ಯಗಳ ನಡುವೆಯೂ ಆಡಬಹುದಾದ ನಾಟಕದಲ್ಲಿ `ಆಟ-ಮಾಟ~ ದವರ ಅಭಿ ನಯಕ್ಕೆ ಮಿತಿ ಇರಲಿಲ್ಲ. ಸೀರೆಯ ಆಟವು ಪ್ರೇಕ್ಷರಿಗೆ ಮಾಟ ಮಾಡಿಸಿದಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT