ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಹೂವಿಗೆ ರೋಗ?

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಾತಾವರಣ ವೈಪರೀತ್ಯದಿಂದಾಗಿ ಈ ವರ್ಷ  ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವಿನ ಮರಗಳು ಒಂದು ತಿಂಗಳು ತಡವಾಗಿ  ಹೂ ಬಿಟ್ಟಿವೆ. ಹೂಗಳ ಪ್ರಮಾಣ ಸಮೃದ್ಧವಾಗಿದೆ.  ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಾವಿನ ಹೂವಿಗೆ ಬೂದುರೋಗ, ಅಂಟು ನೊಣಗಳ ಹಾವಳಿ ಮತ್ತು ಜಿಗಿ ಹುಳುವಿನ ಬಾಧೆ ಕಂಡುಬಂದಿದೆ. 

ಹೂಗಳ ಸಂರಕ್ಷಣೆಗೆ ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೋಗ ತೀವ್ರವಾಗಿ ಇಳುವರಿ ಕಡಿಮೆಯಾಗುತ್ತದೆ ಎಂದು ಶ್ರೀನಿವಾಸಪುರ ತಾಲ್ಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು ಸಲಹೆ ಮಾಡಿದ್ದಾರೆ.

ಬೂದುರೋಗ, ಅಂಟು ನೊಣಗಳ ಹಾವಳಿ ಮತ್ತು ಜಿಗಿ ಹುಳುಗಳನ್ನು ನಿಯಂತ್ರಿಸದಿದ್ದರೆ ಕಾಯಿಗಳು  ಕಪ್ಪಾಗುತ್ತವೆ. ಜಿಗಿ ಹುಳುಗಳಿಂದ ಅಂಟುರೋಗ ಬಂದು ಹೂ ಹಾಳಾಗುವ ಸಂಭವ ಇದೆ. ಮೊದಲ ಹಂತದಲ್ಲಿ  ರೋಗ ಹಾಗೂ ಕೀಟಗಳಿಂದ ಹೂಗಳನ್ನು ರಕ್ಷಿಸಲು ಒಂದು ಲೀಟರ್ ನೀರಿಗೆ 4 ಗ್ರಾಂ ಕಾರ್ಬೊರಿಲ್ ಮತ್ತು 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಬೆರೆಸಿ ದ್ರಾವಣ ತಯಾರಿಸಿಕೊಂಡು ಹೂಗಳ ಮೇಲೆ ಬೀಳುವಂತೆ ಸಿಂಪರಣೆ ಮಾಡಬೇಕು.

ಬಾದಾಮಿ ಜಾತಿಯ ಮಾವಿನ ಮರಗಳಿಗೆ 20 ದಿನಗಳ ಅಂತರದಲ್ಲಿ  4ರಿಂದ 6 ಸಲ ಔಷಧ ದ್ರಾವಣ ಸಿಂಪಡಿಸಬೇಕು.ಬಾದಾಮಿ ಮತ್ತು ಬೇನಿಶಾ ತಳಿಯ  ಹಣ್ಣುಗಳು ವಿದೇಶಗಳಿಗೆ ರಫ್ತಾಗುತ್ತವೆ. ಈ ಮರಗಳ ಹೂಗಳ ಸಂರಕ್ಷಣೆಗೆ ಯಾವುದೇ ಕಾರಣಕ್ಕೂ ಅಂತರ್‌ವ್ಯಾಪಿ  ಕೀಟನಾಶಕಗಳನ್ನು ಬಳಸಬಾರದು. ಬಳಸಿದರೆ ಹಣ್ಣುಗಳು ರಫ್ತು ಮಾಡಲು ಅನರ್ಹವಾಗುತ್ತವೆ.

ಸಾವಯವ ಪದ್ಧತಿಯಲ್ಲಿ ಮಾವು ಬೆಳೆದು ಫಸಲು ರಕ್ಷಣೆಗೆ ಜೈವಿಕ ಕೀಟನಾಶಕಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ  ಅನೇಕ ರೈತರು ಇಂತಹ ಕ್ರಮ ಅನುಸರಿಸುತ್ತಿದ್ದಾರೆ. ಜೈವಿಕ ತೋಟಗಾರಿಕೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT