ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಯಿಂದ ಹಿಂದುಳಿದವರಿಗೆ ಅಧಿಕಾರ

Last Updated 15 ಏಪ್ರಿಲ್ 2011, 6:20 IST
ಅಕ್ಷರ ಗಾತ್ರ

ಹೊಳೆನರಸೀಪುರ: ಅಂಬೇಡ್ಕರ್ ರಚಿಸಿದ ಸವಿಂಧಾನದಿಂದ ದೇಶದಲ್ಲಿ ಅಸಮಾನತೆಯನ್ನು ಹೋಗ ಲಾಡಿಸಲು ಸಾಧ್ಯವಾಯಿತು ಎಂದು ಶಾಸಕ ಎಚ್.ಡಿ. ರೇವಣ್ಣ ನುಡಿದರು.

ಅಂಬೇಡ್ಕರ್ ಅವರ 120 ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಲಿತರು ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ನಡೆದು ಬದುಕು ಹಸನುಗೊಳಿಸಿ ಕೊಳ್ಳಬೇಕು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಮೀಸಲಾತಿ ನೀತಿಯಿಂದ ಹಿಂದುಳಿದ ಜನಾಂಗಗಳ ಜನರು ಅಧಿಕಾರ ಹಿಡಿಯಲು ಸಾಧ್ಯವಾಯಿತು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಅಂತರಜಾತಿ ವಿವಾಹಿತರಿಗೆ ಹಾಗೂ ಅಂಗವಿಕಲರಿಗೆ ಪ್ರೋತ್ಸಾಹದ ಚೆಕ್ ವಿತರಿಸಿದರು. ರಾಷ್ಟ್ರಮಟ್ಟದ ಕ್ರೀಡಾಪಟು ಎಚ್.ಆರ್. ರಾಮಸ್ವಾಮಿ ಅವರನ್ನು ಸನ್ಮಾನಿಸಿದರು. ಪುರಸಭಾಧ್ಯಕ್ಷೆ ವಿನೋದಾ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಶಶಿಕಲಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್. ಮಂಜುನಾಥ್, ದಲಿತ ಸಂಘಟನೆಗಳ ಮುಖಂಡರಾದ ಎಚ್.ವೈ. ಚಂದ್ರಶೇಖರ್, ಕುಪ್ಪೆ ಉಮೇಶ್, ಸೋಮಶೇಖರ್, ಗೋವಿಂದರಾಜು, ಲಕ್ಷ್ಮಣ, ಡಾ. ರಂಗಸ್ವಾಮಿ, ಉಪನ್ಯಾಸಕ ರತ್ನಾಕರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಂಗರಾಜು, ಪುರಸಭೆ ಮುಖ್ಯಾಧಿಕಾರಿ ಶಾಂತಶೆಟ್ಟಿ, ಬಿ.ಇ.ಓ. ಡಿ.ಟಿ. ಪುಟ್ಟರಾಜು, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಬೈರಾಜು ಇದ್ದರು.

ಪಿ. ಚನ್ನರಾಯಿ  ನಿರೂಪಿಸಿದರು. ಶಿಕ್ಷಕ ರಂಗಸ್ವಾಮಿ ಸ್ವಾಗತಿಸಿದರು. ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಲ್ಲೂಕಿನ ಕಾಮಸಮುದ್ರ ಸರ್ಕಾರಿ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು. ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಅಂಬೇಡ್ಕರ್ ನುಡಿದಂತೆ ಎಲ್ಲರೂ ವಿದ್ಯಾವಂತರಾಗಿ ಎಂದು ನುಡಿದರು.

ಮುಖ್ಯ ಶಿಕ್ಷಕ ಟಿ. ರಾಮಕೃಷ್ಣಯ್ಯ, ನಿವೃತ್ತ ಶಿಕ್ಷಕ ಶಿವರಾಜು, ಕಲಾವಿದ ಪಿ. ಚನ್ನರಾಯಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT