ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಸ್ಥರ ಪ್ರಯಾಣಕ್ಕೆ ಅಡ್ಡಿ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪರ್ತ್ (ಐಎಎನ್‌ಎಸ್): ಆಸ್ಟ್ರೇಲಿಯಾ ವಿಮಾನಯಾನ ಸಂಸ್ಥೆ ಕ್ವಾಂಟಾಸ್ ದಿಢೀರ್ ಮುಷ್ಕರದ ಕಾರಣ ಕಾಮನ್‌ವೆಲ್ತ್ ಮುಖ್ಯಸ್ಥರು ಹಾಗೂ ಮಾಧ್ಯಮ ಪ್ರತಿನಿಧಿಗಳು ಶನಿವಾರ ಅನಿವಾರ್ಯವಾಗಿ ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು.

ಮುಷ್ಕರದಿಂದಾಗಿ 600 ವಿಮಾನಗಳು ಹಾರಾಟ ನಡೆಸದ್ದರಿಂದ ಸುಮಾರು 70,000 ಪ್ರಯಾಣಿಕರು ತೊಂದರೆಗೆ ಒಳಗಾದರು. ಏಕಾಏಕಿ ಉಂಟಾದ ಈ ಪರಿಸ್ಥಿತಿಯಿಂದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ.

ವೇತನ ಹಾಗೂ ಇತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕ್ವಾಂಟಾಸ್ ಆಡಳಿತ ಮಂಡಳಿ ಹಾಗೂ ನೌಕರರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿಕ್ಕಟ್ಟು ಶಮನಕ್ಕೆ ಮಧ್ಯ ಪ್ರವೇಶಿಸುವಂತೆ ಗಿಲ್ಲಾರ್ಡ್ `ಫೇರ್ ವರ್ಕ್ ಆಸ್ಟ್ರೇಲಿಯಾ~ದ (ರಾಷ್ಟ್ರೀಯ ಕಾರ್ಯಸ್ಥಳ ಸಂಬಂಧಿ ನ್ಯಾಯಮಂಡಳಿ) ಮೊರೆ ಹೋಗಬೇಕಾಯಿತು.

ಕಾಮನ್‌ವೆಲ್ತ್ ರಾಷ್ಟ್ರಗಳ 17 ಮುಖ್ಯಸ್ಥರು ಹಾಗೂ ಸುಮಾರು 700 ಮಾಧ್ಯಮಪ್ರತಿನಿಧಿಗಳು ಕ್ವಾಂಟಾಸ್ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು.

ದ್ವಿಪಕ್ಷೀಯ ಮಾತುಕತೆ ರದ್ದು: ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಜೂಲಿಯಾ ಗಿಲ್ಲಾರ್ಡ್ ಮಧ್ಯೆ ಭಾನುವಾರ ನಡೆಯಬೇಕಿದ್ದ ದ್ವಿಪಕ್ಷೀಯ ಸಭೆ ಮುಷ್ಕರದ ಹಿನ್ನೆಲೆಯಲ್ಲಿ ರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT