ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಸಿಗ್ನಲ್ ಟವರ್‌

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಎಚ್‌ಎಸ್‌ಆರ್ ಬಡಾವಣೆಯ ಒಂದನೇ ಸೆಕ್ಟರ್‌ನ ನಿವಾಸಿಯಾದ ಕೃಷ್ಣಾ ರೆಡ್ಡಿ (ನಂ. 1161/11ನೇ ಅಡ್ಡರಸ್ತೆ/22 ಬಿ ಮುಖ್ಯರಸ್ತೆ) ಎಂಬವರು ತಮ್ಮ ಕಟ್ಟಡದ ಮೇಲೆ ಮೊಬೈಲ್ ಸಿಗ್ನಲ್ ಟವರ್ ಸ್ಥಾಪಿಸಲು ಅಗತ್ಯವಾದ ಪರವಾನಗಿಯನ್ನು ಪಾಲಿಕೆ ಮತ್ತು ಇತರ ಸಂಬಂಧಪಟ್ಟವರಿಂದ ಪಡೆದಿರುತ್ತಾರೆ.

ಮೊಬೈಲ್ ಸಿಗ್ನಲ್ ಟವರ್‌ಗಳಿಂದ ಹೊರಹೊಮ್ಮುವ ಹೈ ಪವರ್ ರೇಡಿಯೇಶನ್ ಆಸುಪಾಸಿನ ನಿವಾಸಿಗಳಿಗೆ ಅಪಾಯಕಾರಿಯಾಗಿರುತ್ತದೆ ಮತ್ತು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ನಾವೆಲ್ಲ ತಿಳಿದಿದ್ದೇವೆ. ಈ ಕಾರಣದಿಂದ ಈ ಪ್ರದೇಶದ ನಿವಾಸಿಗಳಾದ ನಾವೆಲ್ಲರೂ ಮೊಬೈಲ್ ಸಿಗ್ನಲ್ ಟವರ್ ಸ್ಥಾಪಿಸುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ.

ಇದೇ ಸೆಕ್ಟರ್‌ನ 11ನೇ ಅಡ್ಡರಸ್ತೆಯ ಮನೆ ಸಂಖ್ಯೆ 1210ರಲ್ಲಿ ಕೆಲವರ್ಷಗಳ ಹಿಂದೆ ಇಂತಹುದೇ ಮೊಬೈಲ್ ಸಿಗ್ನಲ್ ಟವರ್ ಸ್ಥಾಪಿಸಿರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಇಲ್ಲಿನ ನಿವಾಸಿಗಳು ಎದುರಿಸುವಂತಾಗಿದೆ. ಹೀಗಾಗಿ ಮತ್ತೊಂದು ಟವರ್ ಸ್ಥಾಪಿಸುವುದನ್ನು ನಾವು ಒಪ್ಪುವುದಿಲ್ಲ.

ಸಂಬಂಧಪಟ್ಟವರು ತಕ್ಷಣ ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿ.
-ಎಚ್‌ಎಸ್‌ಆರ್ ಬಡಾವಣೆಯ ಒಂದನೇ ಸೆಕ್ಟರ್‌ನ ನಿವಾಸಿಗಳು.
(28 ಮಂದಿಯ ಸಹಿಯಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT