ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿದ ಜಯಘೋಷ

Last Updated 12 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಕೈರೊ (ಐಎಎನ್‌ಎಸ್): ಮುಬಾರಕ್ ಅವರ ವಿರುದ್ಧದ ಪ್ರತಿಭಟನೆಗೆ ಪ್ರಮುಖ ವೇದಿಕೆಯಾಗಿದ್ದ ಇಲ್ಲಿನ ‘ತಹ್ರೀರ್ ಚೌಕ’ದಲ್ಲಿ ಶುಕ್ರವಾರ ರಾತ್ರಿ ಮೊಳಗಿದ್ದು ‘ಈಜಿಪ್ಟ್ ಮುಕ್ತವಾಗಿದೆ’ ‘ಈಜಿಪ್ಟ್ ಮುಕ್ತವಾಗಿದೆ’ ಎಂಬ ಒಂದೇ ಘೋಷಣೆ.

 ‘ಸರ್ವಾಧಿಕಾರಿ’ಯನ್ನು ಕೆಳಗಿಳಿಸೇ ತೀರುವ ಛಲದೊಂದಿಗೆ ಕಳೆದ ಹಲವು ದಿನಗಳಿಂದ ಇಲ್ಲಿ ಬೀಡುಬಿಟ್ಟಿದ್ದ ಸಾವಿರಾರು ಪ್ರತಿಭಟನಾಕಾರರ ಜಯಘೋಷದಿಂದ ಚೌಕವಿರುವ ಇಡೀ ಪ್ರದೇಶ ಮುಳುಗಿಹೋಯಿತು. ಬ್ಯಾನರ್‌ಗಳು, ಭಿತ್ತಿಚಿತ್ರಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಬೇಡಿಕೆ ಈಡೇರಿದ ಸಂತಸದಲ್ಲಿ ಹರ್ಷೋದ್ಗಾರದಿಂದ ಬೀಗಿದರು.

ಜನವರಿ 25ರಿಂದ ಚೌಕದಲ್ಲಿ ಆರಂಭವಾಗಿದ್ದ ಪ್ರತಿಭಟನೆ, ಮತ್ತಷ್ಟು ಮಗದಷ್ಟು ಜನ ಬಂದು ಸೇರುವುದರೊಂದಿಗೆ ದಿನೇ ದಿನೇ ಕಾವು ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT