ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಸ್‌ ಖಾನ್‌ ಅಜೇಯ ದ್ವಿಶತಕ

ಕ್ರಿಕೆಟ್: ಜಿಂಬಾಬ್ವೆ ಗೆಲುವಿಗೆ ಸವಾಲಿನ ಗುರಿ ನೀಡಿದ ಪಾಕ್‌
Last Updated 6 ಸೆಪ್ಟೆಂಬರ್ 2013, 19:42 IST
ಅಕ್ಷರ ಗಾತ್ರ

ಹರಾರೆ (ಎಎಫ್‌ಪಿ): ಯೂನಿಸ್‌ ಖಾನ್‌ (200) ಗಳಿಸಿದ ಅಜೇಯ ದ್ವಿಶತಕದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವಿಗೆ    342 ರನ್‌ಗಳ ಸವಾಲಿನ ಗುರಿ ನೀಡಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆ­ಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಶುಕ್ರ­ವಾರ ಪಾಕ್‌ ತಂಡ 9 ವಿಕೆಟ್‌ಗೆ 419 ರನ್‌ ಗಳಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಗೆಲುವಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ದಿನದಾಟದ ಅಂತ್ಯಕ್ಕೆ 7.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 13 ರನ್‌ ಗಳಿಸಿತ್ತು. ಟಿನೊ ಮವೊಯೊ (2) ವಿಕೆಟ್‌ ಪಡೆದ ಸಯೀದ್‌ ಅಜ್ಮಲ್‌ ಪಾಕ್‌ ತಂಡಕ್ಕೆ ಮೇಲುಗೈ ತಂದಿತ್ತರು. ಇದೀಗ ಹ್ಯಾಮಿಲ್ಟನ್‌ ಮಸಕಜ ನೇತೃತ್ವದ ತಂಡ ಗೆಲುವು      ಪಡೆಯಲು ಅಂತಿಮ ದಿನ 329 ರನ್‌ ಗಳಿಸಬೇಕಿದೆ.

ಡ್ರಾ ಸಾಧಿಸಲು ದಿನವಿಡೀ ಬ್ಯಾಟ್‌ ಮಾಡುವ ಸವಾಲು ತಂಡದ ಮುಂದಿದೆ. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದ ಅಜ್ಮಲ್‌ ಆತಿಥೇಯ ತಂಡಕ್ಕೆ    ಪ್ರಮುಖ ‘ಬೆದರಿಕೆ’ಯಾಗಿ ಪರಿಣಮಿಸಿದ್ದಾರೆ.

ಯೂನಿಸ್‌ ಆಸರೆ: ಮಿಸ್ಬಾ ಉಲ್‌ ಹಕ್‌ ನೇತೃತ್ವದ ಪಾಕಿಸ್ತಾನ ನಾಲ್ಕು ವಿಕೆಟ್‌ಗೆ 168 ರನ್‌ಗಳಿಂದ  ಆಟ ಮುಂದುವರಿಸಿತ್ತು. ಯೂನಿಸ್‌ ಖಾನ್‌ 76 ರನ್‌ಗಳಿಂದ ಆಟ ಮುಂದುವರಿಸಿದ್ದರು. ಈ ಅನುಭವಿ ಬ್ಯಾಟ್ಸ್‌ಮನ್‌ 404 ಎಸೆತಗಳನ್ನು ಎದುರಿಸಿದ­ರಲ್ಲದೆ, 15 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.

ವಿಕೆಟ್‌ ಕೀಪರ್‌ ಅದ್ನಾನ್‌ ಅಕ್ಮಲ್‌ (64) ಜೊತೆ ಶತಕದ ಜೊತೆಯಾಟ ನೀಡಿದ ಯೂನಿಸ್‌ ಅವರು ರಾಹತ್‌ ಅಲಿ ಜೊತೆ ಮುರಿಯದ ಒಂಬತ್ತನೇ ವಿಕೆಟ್‌ಗೆ 88 ರನ್‌ಗಳನ್ನು ಸೇರಿಸಿದರು. ಯೂನಿಸ್‌ ದ್ವಿಶತಕ ಪೂರೈಸಿ­ದೊಡನೆಯೇ ಮಿಸ್ಬಾ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ ಮೊದಲ ಇನಿಂಗ್ಸ್‌ 249 ಮತ್ತು ಎರಡನೇ ಇನಿಂಗ್ಸ್‌ 9 ವಿಕೆಟ್‌ಗೆ 419 ಡಿಕ್ಲೇರ್ಡ್‌ (ಯೂನಿಸ್‌ ಖಾನ್‌ ಔಟಾಗದೆ 200, ಅದ್ನಾನ್‌ ಅಕ್ಮಲ್‌ 64, ರಾಹತ್‌ ಅಲಿ ಔಟಾಗದೆ 35, ಪ್ರಾಸ್ಪರ್‌ ಉತ್ಸೆಯಾ 137ಕ್ಕೆ 3,  ಟೆಂಡಾಯ್‌ ಚಟಾರ 99ಕ್ಕೆ 2, ತಿನೇಶ್‌ ಪನ್ಯಂಗರ 42ಕ್ಕೆ 2);  ಜಿಂಬಾಬ್ವೆ: ಮೊದಲ ಇನಿಂಗ್ಸ್‌ 327 ಮತ್ತು ಎರಡನೇ ಇನಿಂಗ್ಸ್‌ 7.3 ಓವರ್‌ಗಳಲ್ಲಿ 1      ವಿಕೆಟ್‌ಗೆ 13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT