ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯಿಂದ ಮೌಲ್ಯ ರಕ್ಷಣೆ: ಪಿಟಿಪಿ

Last Updated 5 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ಹರಪನಹಳ್ಳಿ: ಆರೋಗ್ಯಪೂರ್ಣ ಸಾಮಾಜಿಕ ವ್ಯವಸ್ಥೆ ರೂಪಿಸುವ ಹಾಗೂ ನೈತಿಕ ಮೌಲ್ಯಗಳನ್ನು ಗರ್ಭೀಕರಿಸಿಕೊಂಡಿರುವ ರಂಗಭೂಮಿ ಸ್ವಾಸ್ಥ್ಯ ಸಮಾಜದ ಸಂದೇಶ ವಾಹಕವಾಗಿದೆ ಎಂದು ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅಭಿವ್ಯಕ್ತಪಡಿಸಿದರು.

ಸ್ಥಳೀಯ ನಟರಾಜ ಕಲಾಭವನದಲ್ಲಿ ದಾವಣಗೆರೆಯ ರಾಜ್ಯ ವೃತ್ತಿರಂಗಭೂಮಿ ಕಲಾವಿದರ ಸಂಘ 17ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ರಂಗಯಾತ್ರೆ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನುದ್ದಕ್ಕೂ ರಂಗಸಜ್ಜಿಕೆಯ ಮೇಲೆ ಅಭಿನಯಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸುತ್ತಿರುವ ಕಲಾವಿದರ ಅಂತ್ಯದ ಬದುಕು ಶೋಚನೀಯವಾಗಿದೆ. ಆಕಸ್ಮಿಕ ಘಟನೆಗಳು ಹಾಗೂ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾದ ಸಂದರ್ಭದಲ್ಲಿ ಕಲಾವಿದ ಚಟಪಡಿಕೆ ಊಹಿಸಲು ಅಸಾಧ್ಯವಾದ ಸಂಗತಿ. ಹೀಗಾಗಿ, ವೃತ್ತಿ ರಂಗಭೂಮಿ ಕಲಾವಿದರಿಗೆ ಸರ್ಕಾರ ಹಾಗೂ ಸಹೃದಯಿಗಳು ಪ್ರೋತ್ಸಾಹ, ಪ್ರೇರಣೆ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು. ಜತೆಗೆ, ರಂಗಭೂಮಿಯನ್ನು ಜೀವಂತ ವಾಗಿಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ ಎಂದರು.

ಸರ್ಕಾರ, ಅಕಾಡೆಮಿ ಹಾಗೂ ರಂಗಭೂಮಿಯಿಂದಲೇ ಬದುಕಿನ ಎತ್ತರಕ್ಕೆ ಬೆಳೆದಿರುವ ಕಲಾವಿದರು, ರಂಗಭೂಮಿ ಕಲಾವಿದರ ನಿಧಿ ಸ್ಥಾಪಿಸುವ ಮೂಲಕ ಕಲಾವಿದನ ಸಂಧ್ಯಾಕಾಲಕ್ಕೆ ನೆರವು ನೀಡಲು ಮುಂದಾಬೇಕಿದೆ ಎಂದು ಆಶಿಸಿದರು.

ತೆಗ್ಗಿನಮಠದ ವ್ಯವಸ್ಥಾಪಕ ಟಿ.ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ರಾಮಪ್ರಸಾದ್ ಗಾಂಧಿ, ನಾಟಕ ಅಕಾಡೆಮಿ ಪುರಸ್ಕೃತ ರಂಗಕರ್ಮಿ ಬಿ. ಪರಶುರಾಮ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರುಂಡಿ ನಾಗರಾಜ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬೇಲೂರು ಅಂಜಪ್ಪ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ. ಭದ್ರಪ್ಪ, ಗೌರವಾಧ್ಯಕ್ಷ ತಿಪ್ಪೇಶ್ ಚವಾಣ್, ಕೆ. ತಿಮ್ಮಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೃತ್ತಿ ರಂಗಭೂಮಿ ಕಲಾವಿದರಾದ ಚೇತನಾ ಬನಹಟ್ಟಿ, ಕಲ್ಪನಾ ನಾಕೋಡ, ಲತಾಶ್ರೀ ರಮೇಶ್, ರೇಖಾ, ರೇಣುಕಾ, ಶಾಂತಮ್ಮ, ಉಮಾಶ್ರೀ ಅವರನ್ನು ಸನ್ಮಾನಿಸಲಾಯಿತು. ಬಳಿಕ ವೃತ್ತಿ ರಂಗಭೂಮಿ ಮಹಿಳಾ ಕಲಾವಿದರು ತಂಡದ ಸದಸ್ಯರಿಂದ, ರಂಗಕರ್ಮಿ ಪಿ.ಬಿ. ಧುತ್ತರಗಿ ಅವರ `ಮುದುಕನ ಮದುವೆ~ ನಾಟಕದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT