ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತನ್ ಮತ್ತೆ ಯುದ್ಧ ವಿಮಾನ ಏರುವರೇ?

Last Updated 9 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ಉದ್ಯಮಿ ರತನ್ ಟಾಟಾ ಅವರು ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆಯೇ? ಎನ್ನುವ ಕುತೂಹಲದ ಪ್ರಶ್ನೆ ಯಲಹಂಕ ವಾಯುನೆಲೆಯಲ್ಲಿ ಬುಧವಾರ ಕೇಳಿಬಂದಿತು. 

ಪ್ರದರ್ಶನದ ಉದ್ಘಾಟನಾ ವೇದಿಕೆಯಲ್ಲಿ ಸರಿಯಾಗಿ 10 ಗಂಟೆಗೆ ಹಾಜರಾದ ಟಾಟಾ ಅವರು ಪ್ರೇಕ್ಷಕರ ಗಮನ ಸೆಳೆದರು. ಯುದ್ಧವಿಮಾನಗಳ ಹೊರತಾಗಿ ಜನರನ್ನು ಕಾಡಿದ ಪ್ರಶ್ನೆ ಎಂದರೆ ‘ಈ ಬಾರಿಯೂ ಟಾಟಾ ಎಫ್- 16 ಯುದ್ಧವಿಮಾನ ಹಾರಿಸುವರೇ?’ ಎನ್ನುವುದಾಗಿತ್ತು.

ಉತ್ತರ ಪಡೆಯಲು ಮಾಧ್ಯಮಗಳು ಹಲವು ಬಾರಿ ಪ್ರಯತ್ನಿಸಿದರೂ ಟಾಟಾ ಅವರು ಪ್ರತಿಬಾರಿಯೂ  ನುಣುಚಿಕೊಂಡರು. ಕಳೆದ ಬಾರಿ ನಡೆದ ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಟಾಟಾ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನವನ್ನು ಹಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT