ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆಗೆ ಆಧುನಿಕ ಜೀವನಶೈಲಿ ಕಾರಣ

Last Updated 9 ಜನವರಿ 2012, 10:05 IST
ಅಕ್ಷರ ಗಾತ್ರ

ನ್ಯಾಮತಿ: ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಸಮಾಜದಲ್ಲಿನ ಅತಿ ನಾಗರಿಕ ರೀತಿ-ನೀತಿ ಮತ್ತು ಸರ್ಕಾರ ಸೇರಿ  ರೈತನನ್ನು ಕೊಂದು ಹಾಕುತ್ತಿದೆ ಎಂದು ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಗ್ರಾಮದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ 2011-12ನೇ ಸಾಲಿನ `ವಿಕಸನ~ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಸಿಗಳಿದ್ದಂತೆ, ಅವರು ಬೃಹದಾಕರವಾಗಿ, ಹೆಮ್ಮೆರವಾಗಿ ಬೆಳೆಯಬೇಕು, ವಿದ್ಯಾರ್ಥಿಗಳ ಕನಸು ನನಸಾಗಲು ಸಮಾಜದ ದುಷ್ಟ ಶಕ್ತಿಯಿಂದ ಕಾಯುವ ಶಿಕ್ಷಕ, ತಾಯಿ-ತಂದೆ ನಿಜವಾದ ದೇವರು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರುದ್ರಮುನಿ ಕಾರ್ಯಕ್ರಮ ಉದ್ಘಾಟಸಿದರು.

ಪ್ರಾಂಶುಪಾಲ ಕೆ. ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಉಪಾಧ್ಯಕ್ಷ ಸಿದ್ದಲಿಂಗಪ್ಪ, ಸದಸ್ಯರಾದ ಎನ್.ಎಸ್. ರವೀಂದ್ರನಾಥ್, ಎಸ್.ಪಿ. ರವಿಕುಮಾರ, ಅನಸೂಯಮ್ಮ, ಬಾಬು, ಹಿರಿಯ ಶಿಕ್ಷಕ ಕೆ. ರುದ್ರಪ್ಪ, ಪ್ರಾಚಾರ್ಯ ಸಿ.ಎಂ. ಮಹಾದೇವ ರಾವ್, ಎಸ್.ಆರ್. ಬಸವರಾಜಪ್ಪ ಇದ್ದರು. ತೇಜಸ್ವಿನಿ ಪ್ರಾರ್ಥಿಸಿದರು. ಎಸ್.ಪಿ. ವಿದ್ಯಾ ಸ್ವಾಗತಿಸಿದರು. ಎನ್.ಎಸ್. ತನುಜಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT