ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚನಗೊಳಿಸಿದ ಮಲ್ಲಕಂಬ

Last Updated 4 ಅಕ್ಟೋಬರ್ 2011, 6:05 IST
ಅಕ್ಷರ ಗಾತ್ರ

ಬಾಗಲಕೋಟೆ: ಯಾವುದರ ಆಸರೆಯೂ ಇಲ್ಲದೆ  ಕೇವಲ ಹಗ್ಗ  ಮತ್ತು ಕಂಬದ ಮೇಲೆ ಯೋಗಾಸನ ಮಾಡುವ ಮೂಲಕ ವಿದ್ಯಾರ್ಥಿಗಳು ನಗರದಲ್ಲಿ ನೋಡುಗರನ್ನು ಚಕಿತಗೊಳಿಸಿದರು. ನಗರದ ವಿದ್ಯಾಪ್ರಸಾರಕ ಮಂಡಳದ ಎಸ್.ಆರ್.ಎನ್. ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಪುರುಷರ ಜಿಮ್ನೋಸ್ಟಿಕ್ ಮತ್ತು ಮಲ್ಲಕಂಬ ಸ್ಪರ್ಧೆಯಲ್ಲಿ ಮಲ್ಲಕಂಬ ಗಮನ ಸೆಳೆಯಿತು.

ಅಪ್ಪಟ ಗ್ರಾಮೀಣ ಕ್ರೀಡೆಯಾದ ಮಲ್ಲಕಂಬದಲ್ಲಿ ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಹಲವು ಭಂಗಿಗಳನ್ನು ಯೋಗಾಸನ ಮಾಡಿದರು. ಒಂದೇ ಕಂಬದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಸನ ಮಾಡಿದಾಗ ನೋಡುಗರು ಗಣ್ಯರು  ಚಪ್ಪಾಳೆ ತಟ್ಟಿ ಹುರುದುಂಬಿಸಿದರು.

ಇದಕ್ಕೂ ಮುನ್ನ ನಗರದ ಎಸ್.ಆರ್. ನರಸಾಪುರ ಮತ್ತು ಎಂ.ಬಿ. ಶಿರೂರ ವಾಣಿಜ್ಯ ಕಾಲೇಜಿನಲ್ಲಿ ನಡೆದ ರಾಣಿ ಚೆನ್ನಮ್ಮ ವಿವಿ ಏಕವಲಯ ಪುರುಷರ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾಪ್ರಸಾರಕ ಮಂಡಳಿ ಅಧ್ಯಕ್ಷ ಕೆ.ಎಸ್.ದೇಶ ಪಾಂಡೆ, ಗ್ರಾಮೀಣ ಭಾಗದ ಕ್ರೀಡೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಇಂದು ಎಲ್ಲರು ಹೆಚ್ಚು ಕ್ರಿಕೆಟ್‌ನತ್ತ ಆಕರ್ಷಿತ ರಾಗಿದ್ದು ಗ್ರಾಮೀಣ ಭಾಗದ ಕ್ರೀಡೆಗಳು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅವುಗಳನ್ನು ಉಳಿಸಿ ಬೆಳೆಸಬೇಕಾದ ಕೆಲಸ ನಡೆಯಬೇಕಿದೆ ಎಂದರು.

ಶಂಕ್ರಮ್ಮ ಎಲಿಗಾರ ಪ್ರಾರ್ಥಿಸಿದರು. ಪ್ರಾಂಶು ಪಾಲರಾದ ಎಸ್.ಆರ್.ಮಿರ್ಜಿ ಸ್ವಾಗತಿಸಿದರು. ಪ್ರೊ.ಶ್ರೀನಿವಾಸ ನರಗುಂದ ಪರಿಚಯಿಸಿದರು. ಡಾ.ಎಸ್.ಎಸ್.ಹಂಗರಗಿ ನಿರೂಪಿಸಿದರು.  ಕಾಲೇಜಿನ ಪ್ರಧಾನ ಕಾಂುರ್ುದರ್ಶಿ ಆರ್.ವಿ.ಅಳ್ಳೀಕಟ್ಟಿ ವಂದಿಸಿದರು.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT