ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪರಿಚಯ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

1) ಸೌರವ್ಯೂಹದಲ್ಲಿ ನಮ್ಮ ಧರೆಯ ನೆರೆಯ ಪ್ರಸಿದ್ಧ ಗ್ರಹ ‘ಮಂಗಳ’ದ ಒಂದು ಚಿತ್ರ ಇಲ್ಲಿದೆ (ಚಿತ್ರ-–1). ಮಂಗಳ ಗ್ರಹವನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿ ಅಲ್ಲ?
ಅ) ಮಂಗಳ ಸೂರ್ಯನಿಂದ ಭೂಮಿಗಿಂತ ಹೆಚ್ಚು ದೂರದಲ್ಲಿದೆ
ಬ) ಮಂಗಳ ಭೂಮಿಗಿಂತ ದೊಡ್ಡ ಗಾತ್ರದ ಗ್ರಹ
ಕ) ಈ ಗ್ರಹ ಎರಡು ಚಂದ್ರರನ್ನು ಪಡೆದಿದೆ
ಡ) ಮಂಗಳ ತುಂಬ ಶೀತಲ ಗ್ರಹ

2) ಕಡಲ ತಡಿಯಲ್ಲಿ ಶಿಥಿಲೀಕರಣಗೊಂಡು ವಿಚಿತ್ರ- ವಿಸ್ಮಯಕರ ರೂಪ ತಳೆದಿರುವ ಬಂಡೆಯೊಂದು ಚಿತ್ರ- –2ರಲ್ಲಿದೆ. ಈ ಬಂಡೆಯನ್ನು ಹೀಗೆ ಕಡೆದಿರುವ ಶಿಥಿಲಕಾರಕ ಯಾವುದು?
ಅ) ಬೀಸುವ ಗಾಳಿ
ಬ) ಕಡಲಿನ ಕ್ಷಾರ ಜಲ
ಕ) ತೀಕ್ಷ್ಣ ಬಿಸಿಲು
ಡ) ಕಡಲ ಅಲೆಗಳು

3) ‘ಭೂಖಂಡಗಳ ನೆಲೆ ಸ್ಥಿರವಲ್ಲ; ಅವು ಕಾಲದಿಂದ ಕಾಲಕ್ಕೆ ಸ್ಥಾನಾಂತರ ಹೊಂದುತ್ತವೆ’ –ಅದು ನಿಮಗೂ ಗೊತ್ತಲ್ಲ? (ಚಿತ್ರ–3, 4).
ಅ) ಈ ವಿದ್ಯಮಾನವನ್ನು ನಿರೂಪಿಸುವ ಸಿದ್ಧಾಂತದ ಹೆಸರೇನು?
ಬ) ಈ ಸಿದ್ಧಾಂತವನ್ನು ರೂಪಿಸಿದ ವಿಜ್ಞಾನಿ ಯಾರು?

4) ಪುರಾತನ ಜನರ ಒಂದು ಜಗತ್ಪ್ರಸಿದ್ಧ ನಿರ್ಮಾಣ ‘ಸ್ಟೋನ್ ಹೆಂಜ್’ ಚಿತ್ರ-–5ರಲ್ಲಿದೆ. ಶಿಲಾಯುಗದ ಈ ಸೋಜಿಗದ ನಿರ್ಮಿತಿ ಯಾವ ದೇಶದಲ್ಲಿದೆ?
ಅ) ಇಂಗ್ಲೆಂಡ್
ಬ) ಫ್ರಾನ್ಸ್
ಕ) ಮೆಕ್ಸಿಕೋ
ಡ) ಈಜಿಪ್ಟ್

5) ಧರೆಯ ಅತಿ ವಿಶಿಷ್ಟ ಲಕ್ಷಣಗಳಲ್ಲೊಂದಾದ ‘ವಾಯುಮಂಡಲ’ ಪದರ ಪದರ ಹಾಳೆಯಂತೆ ಧರೆಯನ್ನು ಆವರಿಸಿದೆ, ಹೌದಲ್ಲ?
(ಚಿತ್ರ-–6). ಭೂ ವಾತಾವರಣದಲ್ಲಿ-–

ಅ) ಅತ್ಯಧಿಕ ಪ್ರಮಾಣದಲ್ಲಿರುವ ಅನಿಲ ಯಾವುದು?
ಬ) ಆಮ್ಲಜನಕದ ಶೇಕಡ ಅಂಶ ಎಷ್ಟು?
ಕ) ಅತಿ ನೇರಳೆ ಕಿರಣಗಳನ್ನು ತಡೆಹಿಡಿಯುತ್ತಿರುವ ‘ಪದರ’ ಯಾವುದು?
ಡ) ಯಾವ ಪದರ ಹವಾ ವಿದ್ಯಮಾನಗಳ ನೆಲೆ?

6) ವೈಜ್ಞಾನಿಕ ಸಂಶೋಧನಾ ‘ಜಲಾಂತರ್ಗಾಮಿ’ಯೊಂದು ಚಿತ್ರ-–7ರಲ್ಲಿದೆ. ಮಿಲಿಟರಿ ಕಾರ್ಯಾಚರಣೆಯಲ್ಲೂ ಜಲಾಂತರ್ಗಾಮಿಗಳದು ಬಹು ಮಹತ್ವದ ಪಾತ್ರ.
ಅ) ಇದೀಗ ಸಿದ್ಧಗೊಂಡಿರುವ ಭಾರತದ ಪ್ರಥಮ ಪರಮಾಣು ಶಕ್ತಿ ಚಾಲಿತ ಜಲಾಂತರ್ಗಾಮಿಯ ಹೆಸರೇನು?
ಬ) ಇತ್ತೀಚೆಗೆ ಸ್ಫೋಟಗೊಂಡು ದುರಂತಕ್ಕೊಳಗಾದ ಭಾರತದ ಜಲಾಂತರ್ಗಾಮಿ ಯಾವುದು?

7) ಜಗತ್ಪ್ರಸಿದ್ಧ ಪುರಾತನ ನಾಗರಿಕತೆಯೊಂದರ ಸುಪ್ರಸಿದ್ಧ ಅವಶೇಷವೊಂದು ಚಿತ್ರ-–8ರಲ್ಲಿದೆ. ಯಾವ ನಾಗರಿಕತೆಗೆ ಇದು ಸಂಬಂಧಿಸಿದ್ದು ಗೊತ್ತೇ?
ಅ) ಬ್ಯಾಬಿಲೋನಿಯನ್ ನಾಗರಿಕತೆ
ಬ) ಈಜಿಪ್ಷಿಯನ್ ನಾಗರಿಕತೆ
ಕ) ಮಾಯನ್ ನಾಗರಿಕತೆ
ಡ) ಸಿಂಧೂ ಕಣಿವೆಯ ನಾಗರಿಕತೆ

8) ವಿಶೇಷ ಅತ್ಯಾಧುನಿಕ ‘ಸಾಧನ’ವೊಂದನ್ನು ಬಳಸಿ ಉಕ್ಕಿನ ಹಾಳೆಯೊಂದನ್ನು ಕತ್ತರಿಸುತ್ತಿರುವ ದೃಶ್ಯ ಚಿತ್ರ- –9ರಲ್ಲಿದೆ. ಯಾವುದು ಈ ಸಾಧನ?
ಅ) ವಿದ್ಯುತ್ ಗರಗಸ
ಬ) ಒತ್ತಡದ ನೀರು
ಕ) ಲೇಸರ್
ಡ) ಅಸಿಟಲೀನ್ ಅನಿಲ

9) ನದಿಯೊಂದು ಕಡಲನ್ನು ಸೇರುತ್ತಿರುವ ದೃಶ್ಯ ಚಿತ್ರ- –10ರಲ್ಲಿದೆ. ಈ ಕೆಳಗೆ ಪಟ್ಟಿ ಮಾಡಿರುವ ನದಿಗಳು ಮತ್ತು ಕೊನೆಗೆ ಸೇರುವ ಸಮುದ್ರ/ ಸಾಗರಗಳನ್ನು ಸರಿ ಹೊಂದಿಸಿ:
1) ಗೋದಾವರಿ           ಅ) ಅರಬ್ಬೀ ಸಮುದ್ರ
2) ಸಿಂಧೂ (ಇಂಡಸ್) ಬ) ಶಾಂತ ಸಾಗರ
3) ನೈಲ್  ಕ) ಅಟ್ಲಾಂಟಿಕ್ ಸಾಗರ
4) ಅಮೆಜಾನ್ ಡ) ಬಂಗಾಳ ಕೊಲ್ಲಿ
5) ಕಾಲರೆಡೋ ಇ) ಮೆಡಿಟರೇನಿಯನ್
        ಸಮುದ್ರ

10) ‘ಸೂರ್ಯ- ಭೂಮಿ- ಚಂದ್ರ’ ಚಿತ್ರ– 11ರಲ್ಲಿದೆ. ಈ ಕಾಯಗಳನ್ನು ಕುರಿತ ಮೂರು ಪ್ರಶ್ನೆಗಳು:
ಅ) ಸೂರ್ಯ- ಭೂಮಿ ನಡುವಣ ಸರಾಸರಿ ದೂರದ ಹೆಸರು ಏನು?
ಬ) ಭೂಮಿ- ಚಂದ್ರ ನಡುವಣ ಸರಾಸರಿ ಅಂತರ ಎಷ್ಟು?
ಕ) ಈ ಮೂರೂ ಕಾಯಗಳ ಸಹಯೋಗದಿಂದ ಉಂಟಾಗುವ ಎರಡು ಅಂತರಿಕ್ಷ ವಿದ್ಯಮಾನಗಳು ಯಾವುವು?

11) ವಿಧ ವಿಧ ಕುಸುಮಗಳ ಗುಚ್ಛವೊಂದು ಚಿತ್ರ-–12ರಲ್ಲಿದೆ. ಧರೆಯಲ್ಲಿರುವ ಸರ್ವ ಹೂ-ಗಿಡ ಪ್ರಭೇದಗಳ ಒಟ್ಟು ಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ಸಮೀಪ?
ಅ) 85,000
ಬ) 1,18,500
ಕ) 2,35,000
ಡ) 2,70,000

12) ಸುಂದರ ಚಿತ್ತಾರದ ಖನಿಜವೊಂದು ಚಿತ್ರ-– 13ರಲ್ಲಿದೆ. ಅದಿರು ಮತ್ತು ಖನಿಜಗಳ ಈ ಪಟ್ಟಿಯಲ್ಲಿ ಖನಿಜಗಳನ್ನು ಪ್ರತ್ಯೇಕಿಸಿ:
ಅ) ಹಾರ್ನ್‌ಬ್ಲೆಂಡ್ ಇ) ಕೋರಂಡಂ
ಬ) ಟಾಲ್ಕ್  ಈ) ಹೀಮಟೈಟ್
ಕ) ಕ್ವಾರ್ಟ್ಜ್  ಉ) ಮ್ಯಾಲಕೈಟ್
ಡ) ಗೆಲೀನಾ  ಟ) ಟೋಪಾಜ್

ಉತ್ತರಗಳು:

1) ‘ಬ’ ತಪ್ಪು ಹೇಳಿಕೆ
2) ಡ. - ಕಡಲಿನ ಅಲೆಗಳು
3) ಅ. ‘ಭೂಖಂಡ ಅಲೆತ ಸಿದ್ಧಾಂತ’; ಬ. ಆಲ್‌ಫ್ರೆಡ್ ವಿಜೆನರ್
4) ಅ-. ಇಂಗ್ಲೆಂಡ್
5) ಅ. ಸಾರಜನಕ; ಬ. ಶೇ 21; ಕ. ಓಜೋನ್ ಪದರ; ಡ. ಹವಾಗೋಳ
6) ಅ.- ಐಎನ್‌ಎಸ್ ಅರಿಹಂತ್; ಬ. ಸಿಂಧುರಕ್ಷಕ್
7) ಡ. ಸಿಂಧೂ ಕಣಿವೆಯ ನಾಗರಿಕತೆ
8) ಕ. ಲೇಸರ್
9) 1– ಡ; 2– ಅ; 3– ಇ; 4– ಕ; 5– ಬ
10) ಅ. ಖಗೋಳಯಾನ; ಬ. 3,84,000 ಕಿ.ಮೀ; ಕ. ಗ್ರಹಣಗಳು
11) ಕ. 2,35,000
12) ಖನಿಜಗಳು; ಬ, ಕ, ಇ ಮತ್ತು ಟ

– ಎನ್. ವಾಸುದೇವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT