ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ. ಹಗರಣ: ತನಿಖೆಗೆ ಒತ್ತಾಯ

Last Updated 6 ಜನವರಿ 2014, 6:50 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯಗಳು ಜ್ಞಾನ ಕೇಂದ್ರಗಳಾಗುವ ಬದಲು ಜಾತಿ ಕೇಂದ್ರಗಳಾಗುತ್ತಿವೆ. ತುಮಕೂರು ವಿ.ವಿ. ನಿರ್ಗಮಿತ  ಕುಲಪತಿ ಎಸ್‌.ಸಿ.­ಶರ್ಮಾ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪ್ರೊ.ಕಾಳೇಗೌಡ ನಾಗವಾರ ಒತ್ತಾಯಿಸಿದರು.

ನಗರದ ಜಿಲ್ಲಾಸ್ಪತ್ರೆ ಸಭಾಂಗಣ­ದಲ್ಲಿ ಕೂಡು ಜನವೇದಿಕೆ ಭಾನುವಾರ ಆಯೋಜಿಸಿದ್ದ ‘ಹೊರಬೀಡು’ ಕೃತಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶರ್ಮಾ ಅವರಂತಹ ಲಜ್ಜೆಗೇಡಿ ಕುಲಪತಿಗಳು ವಿ.ವಿ.ಗಳ ಮರ್ಯಾದೆ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.

ಕುವೆಂಪು, ಜಿಎಸ್‌ಎಸ್‌ ವಿದ್ಯಾರ್ಥಿ­ಯಾಗಿ, ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿರುವ ಡಾ. ಚಿದಾನಂದಮೂರ್ತಿ ಸಹ ಕೋಮು­ವಾದಿ ರೀತಿ ಮಾತನಾಡುತ್ತಿದ್ದಾರೆ. ಕೋಮುವಾದಿಗಳ ರೀತಿ ಜಾತಿಯೇ ದೊಡ್ಡದು ಎನ್ನುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮನುಷ್ಯ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ದೇವರನ್ನು ಸೃಷ್ಟಿಸಿಕೊಂಡಿ­ದ್ದಾನೆ. ಭಾರತದಲ್ಲಿನ ಬುದ್ಧನ ಮೂರ್ತಿ, ಚೀನಾದಲ್ಲಿನ ಬುದ್ಧನ ಮೂರ್ತಿಗೆ ವೈರುಧ್ಯವಿದ್ದರೂ ಜನರು ಸತ್ಯವನ್ನು ಒಪ್ಪುವುದಿಲ್ಲ. ಮೊದಲಿನಿಂದ ದೇವರ ಬಗ್ಗೆ ಕಲ್ಪಿತ ಕತೆಗಳನ್ನು ಸತ್ಯವೆಂದು ಜನರನ್ನು ನಂಬಿಸಿದ್ದಾರೆ. ಅರಮನೆ, ಗುರುಮನೆ ಜನರ ಶತ್ರುಗಳು ಎಂದರು.

ತುಮಕೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.­ನಿತ್ಯಾನಂದ ಬಿ. ಶೆಟ್ಟಿ ಮಾತನಾಡಿ,  ಪ್ರಕೃತಿಯಲ್ಲಿನ ಒಂದೇ ವಸ್ತು ಹಲವು ರೀತಿ ಕಾಣಿಸಿದರೆ ಸಮಸ್ಯೆಗಳಿಗೆ ಕಾರಣ­ವಾಗುತ್ತದೆ. ಗೋವು ಹಲವರಿಗೆ ಭೋಜ್ಯ, ಕೆಲವರಿಗೆ ವರ್ಜ್ಯ. ಹಲವರಿಗೆ ಪೂಜ್ಯ. ಗೋವನ್ನು ಇಂದು ರಾಜ­ಕೀಯ, ಸಾಮಾಜಿಕ, ಸಾಂಸ್ಕೃತಿಕ ರೂಪ­ವಾಗಿ ಬಿಂಬಿಸಲಾಗುತ್ತಿದೆ ಎಂದರು.

ಫ್ರೆಂಚ್‌ ಸಮಾಜ ಶಾಸ್ತ್ರಜ್ಞ ಲೂಯಿ­­ದೊನೊ ಭಾರತ ಸಾಮಾಜಿಕ, ಆರ್ಥಿಕ ವ್ಯವಸ್ಥೆ ನಿಂತಿರುವುದು ಗೋವಿನ ಮೇಲೆ ಎಂದು ಹೇಳಿದ್ದಾನೆ. ಪೂಜ್ಯ ಭಾವನೆಯುಳ್ಳವರು ಆಹಾರ ತತ್ವವನ್ನು ಅಳವಡಿಸಲು ಕಲ್ಪಿತ ರೂಪಕಗಳನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಸಮ್ಮತಿಯನ್ನು  ನಿರೂ­ಪಿಸಿ­ದರು. ನಾಗರಿಕ ಸಮಾಜ ಬದಲಾಗುತ್ತಿದ್ದರು ಜಾತಿಯ ಅಂಧಶ್ರದ್ಧೆ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.

ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಡಾ.­ರವಿ­ಕುಮಾರ್‌ ನೀಹ, ಮೇ.ನ.­ತರಂಗಿಣಿ, ಗುರುಪ್ರಸಾದ್‌ ಕಂಟಲಗೆರೆ, ವಿಜಯಾ ಮೋಹನ್‌, ಡಾ.ಜಿ.­ಹನುಮಂತರಾಯ, ಎನ್‌.ನಾಗಪ್ಪ, ಬಂದಕುಂಟೆ ನಾಗರಾಜಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT