ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮರು ಜ್ಞಾನ-ವಿಜ್ಞಾನದ ಹರಿಕಾರರು

Last Updated 9 ಜುಲೈ 2012, 6:10 IST
ಅಕ್ಷರ ಗಾತ್ರ

ಲಿಂಗಸುಗೂರ: ಹಿಂದೂ ಧರ್ಮದ ವೇದ, ಉಪನಿಷತ್ತುಗಳ ಸಾರವನ್ನೆಲ್ಲ ಭಟ್ಟಿ ಇಳಿಸಿ ಸೃಷ್ಠಿಯ ಸೂತ್ರಗಳನ್ನು ಶಿಲ್ಪ ಕಲೆಯಲ್ಲಿ ಕ್ರೂಢಿ ಕರಿಸಿ, ಧರ್ಮದ ಧ್ವನಿಯಾಗಿ ಬೆಳೆದು ನಿಂತವರು ಶಿಲ್ಪಿಗಳು. ಈ ಶಿಲ್ಪಿಗಳು ಬೆಳೆದು ಬಂದಿರುವುದು ವಿಶ್ವಕರ್ಮರಾಗಿ. ವಿಶ್ವಕರ್ಮರು ಹರಿಕಥಾಮೃತಸಾರ ಬರುವ ಮುಂಚೆಯೆ ಸೃಷ್ಠಿಯ ಜ್ಞಾನ, ವಿಜ್ಞಾನದವನ್ನೆಲ್ಲ ಜೀರ್ಣಿಸಿಕೊಂಡದವರಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ವಸಂತ ಕುಷ್ಟಗಿ ಅಭಿಮತ ವ್ಯಕ್ತಪಡಿಸಿದರು.

ಭಾನುವಾರ ಕಸಬಾಲಿಂಗಸುಗೂರದಲ್ಲಿ ರಥಶಿಲ್ಪಿ ಈಶ್ವರಪ್ಪ ಸಹಸ್ರ ಚಂದ್ರದರ್ಶನ ಸಮಾರಂಭದಲ್ಲಿ ವಿಶ್ವರಥ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಹರಿಕಥಾಮೃತಸಾರವನ್ನು ಅಂಗೈಗನ್ನಡಿಯಾಗಿ ಅಂತರಂಗದ ದರ್ಶನದಲ್ಲಿ ಹರಿಯ ಸಾನಿಧ್ಯವನ್ನು ಕಾಣುವ ಮಹಾನ್ ಶಕ್ತಿ ಶಿಲ್ಪಿಗಳು ಹೊಂದಿದ್ದಾರೆ.

ಶಿಲ್ಪಿಗಳಾದ ಈರಪ್ಪ ಮತ್ತು ಈಶ್ವರಪ್ಪ ಅವರ ಶಿಲ್ಪಕಲೆ ಈ ಭಾಗಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ ಎಂದು ದಾಸಸಾಹಿತ್ಯದಲ್ಲಿ ಉಲ್ಲೇಖಗಳಿವೆ ಎಂದು ವಿವರಣೆ ನೀಡಿದರು.

ಶಹಪುರದ ಅಜೇಂದ್ರ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ದೇವದುರ್ಗದ ಮೌನೇಶ್ವರ ಮಹಾಸ್ವಾಮೀಜಿ, ಲೇಬಗಿರಿಯ ನಾಗಮಾತೇಂದ್ರ ಸ್ವಾಮೀಜಿ, ಲೆಕ್ಕಿಹಾಳದ ಶಿರಸಪ್ಪಯ್ಯ ಸ್ವಾಮಿ, ಮುರನಾಳದ ವಿಶ್ವನಾಥ ಮಹಾಪುರುಷ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಉಮೇಶ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಿದ್ಧನಗೌಡ ಪೊಲೀಸ್ ಪಾಟೀಲ, ಡಾ. ಶಶಿಕಾಂತ ಕಾಡ್ಲೂರು, ಶಿವನಗೌಡ ಪೊಲೀಸ್ ಪಾಟೀಲ.

ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದಪ್ಪ, ಮುಖಂಡರಾದ ಡಾ. ವಿ.ಕೆ. ಜೋಷಿ, ಡಾ. ನಿರಂಜನಾಚಾರ್ಯ, ಪಿ.ಬಿ. ಬಡಿಗೇರ, ನರಸಿಂಗ್‌ರಾವ್ ಹೇಮನೂರು, ಪಾ.ವಿ. ಅರಕೇರಿ, ಮೌನೇಶ್ವರ ಆಚಾರ್ಯ, ಡಾ. ವೃಷಬೇಂದ್ರಾಚಾರ್ಯ, ವೀರಣ್ಣ ಪತ್ತಾರ, ಚಿನ್ನಪ್ಪ ಗುರುಗುಂಟಾ, ನಾಗಮೂರ್ತಿ, ರಾಜೇಂದ್ರ, ನರಸಿಂಹಾಚಾರ್ಯ ಕಟ್ಟಿ ಸೇರಿದಂತೆ ಗಣ್ಯಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT