ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ ಗಜಲ್ ಗಾರುಡಿಯ ಗಾನ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

`ಶಿಕ್ಷಣದ ಮೂಲಕ ಸ್ವಾತಂತ್ರ್ಯ~ ಎಂಬ ಧ್ಯೇಯ ಹೊಂದಿರುವ ಬೆಂಗಳೂರು ರೌಂಡ್ ಟೇಬಲ್ 7 ಹಾಗೂ ಬೆಂಗಳೂರು ಲೇಡೀಸ್ ಸರ್ಕಲ್ 19ನೇ ಘಟಕಗಳು ನಗರದ ಸರ್ಕಾರಿ ಶಾಲೆಗಳ ಸಹಾಯಾರ್ಥ ಶನಿವಾರ (ಜೂನ್ 18) ಗಜಲ್ ಮಾಂತ್ರಿಕ ಜಗಜಿತ್ ಸಿಂಗ್ ಅವರ `ಗಜಲ್ ಸಂಗೀತ ಸಂಜೆ~ ಆಯೋಜಿಸಿವೆ.

ಉಸ್ತಾದ್ ಜಮಲ್ ಖಾನ್ ಅವರ ಸೆನಿಯಾ ಘರಾಣದಲ್ಲಿ ತರಬೇತಿ ಪಡೆದಿರುವ ಸಿಂಗ್ ಅವರು ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಿಆರ್‌ವೈ, ಸೇವ್ ದ ಚಿಲ್ಡ್ರನ್, ದ ನ್ಯಾಷನಲ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಸೇರಿದಂತೆ ಅನೇಕ ಸಂಸ್ಥೆಗಳ ಜೊತೆ ಗುರುತಿಸಿಕೊಂಡಿದ್ದಾರೆ.

ಕಾರ್ಯಕ್ರಮದಿಂದ ಸಂಗ್ರಹವಾಗುವ ಪೂರ್ಣ ಹಣವನ್ನು ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಹೇಳುತ್ತಾರೆ ಕಾರ್ಯಕ್ರಮದ ಸಂಯೋಜಕಿ ಶಾಲಿನಿ ರಹೇಜ.

ರೌಂಡ್ ಟೇಬಲ್ ಹಾಗೂ ಲೇಡೀಸ್ ಸರ್ಕಲ್ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಪಣ ತೊಟ್ಟಿವೆ. 18 ರಿಂದ 40 ವರ್ಷದವರ ಈ ರಾಜಕೀಯೇತರ ಸಂಘಟನೆಯ ಮುಖ್ಯ ಉದ್ದೇಶವೇ ಸಮಾಜ ಸೇವೆ ಎನ್ನುತ್ತಾರೆ ಬೆಂಗಳೂರು ರೌಂಡ್ ಟೇಬಲ್ ಅಧ್ಯಕ್ಷ ಪ್ರಶಾಂತ್ ಷಾ.

1993 ರಲ್ಲಿ ಪ್ರಾರಂಭವಾದ ರೌಂಡ್ ಟೇಬಲ್ 1 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದೆ. 10 ಲಕ್ಷ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದೆ. ಕಳೆದ 12 ವರ್ಷಗಳಲ್ಲಿ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ 1200ಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಿಸಿದೆ.

ಇದರ ವಿಶೇಷ ಎಂದರೆ ಸಂಸ್ಥೆಯ ನಿರ್ವಹಣಾ ವೆಚ್ಚವನ್ನು ಸದಸ್ಯರೇ ಸಂಪೂರ್ಣವಾಗಿ ಭರಿಸುತ್ತಾರೆ. ವಿವಿಧ ಕಾರ್ಯಕ್ರಮಗಳ ಮೂಲಕ ಸಂಗ್ರಹವಾದ ಮೊತ್ತವನ್ನು ಪೂರ್ಣವಾಗಿ ಆಯಾ ಉದ್ದೇಶಕ್ಕೇ ಬಳಸಲಾಗುತ್ತದೆ ಎನ್ನುವುದು ಅವರ ವಿವರಣೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಟಿಕೆಟ್ ಮತ್ತು ಇತರ ಮಾಹಿತಿಗೆ: 97408 49955, 98451 65366. ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT