ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿನಗರಕ್ಕೆ ಇನ್ನೊಂದು ನೇರ ಬಸ್ ಆರಂಭಿಸಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿದ್ಯಾಮಾನ್ಯನಗರದಿಂದ ಶಿವಾಜಿನಗರಕ್ಕೆ ಈಗಾಗಲೇ ಮಾರ್ಗಸಂಖ್ಯೆ 243ಇ ಚಲಿಸುತ್ತಿದೆ. ಇದನ್ನು ನೌಕರರ ಸಲುವಾಗಿ ಹಾಕಲಾಗಿದೆ. ಹೊರಡುವ ಸ್ಥಳದಲ್ಲೇ ಈ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುವುದರಿಂದ ನಡುದಾರಿಯಲ್ಲಿ ಹತ್ತುವ ಮಹಿಳೆಯರು, ಶಾಲಾಮಕ್ಕಳು ವಯೋವೃದ್ಧರು ಹಾಗೂ ರೋಗ ರುಜಿನಗಳಿಂದ ನರಳುತ್ತಿರುವವರು ವಿಧಿಯಿಲ್ಲದೆ ಹತ್ತಿದ ಸ್ಥಳದಿಂದ ಇಳಿಯುವ ಸ್ಥಳದವರೆಗೂ ನಿಂತೇ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ.

(ಇತ್ತೀಚಿನ ದಿನಗಳಲ್ಲಿ ಕಿರಿಯ ನಾಗರಿಕರಿಗೆ ಇರುವ ಬೆಲೆ ಹಿರಿಯ ನಾಗರಿಕರಿಗೆ ಸಿಕ್ಕರೆ ಅದು ಅವರ ಅದೃಷ್ಟವೋ ಅದೃಷ್ಟ). ಈ ವಿಷಯದಲ್ಲಿ ಅನೇಕ ಸಲ ಸಂಬಂಧಪಟ್ಟವರ ಗಮನಸೆಳೆದರೂ ಏನು ಪ್ರಯೋಜನವಾಗದಿರುವುದು ವಿಷಾದಕರ.

ಸಂಪಾದನೆಯೊಂದೇ ಮುಖ್ಯವಲ್ಲ ಸಾರ್ವಜನಿಕರ ಹಿತಾಸಕ್ತಿ ಅತಿಮುಖ್ಯ.  ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ದಯವಿಟ್ಟು ಈಗಿರುವ ಮಾರ್ಗಸಂಖ್ಯೆ 243/ಇ ವೇಳೆಗೆ ಹತ್ತು ನಿಮಿಷ ಮೊದಲು ಅಥವಾ ನಂತರ ಒಂದು ಪಿಎಚ್‌ಎಸ್ ಬಸ್‌ನ ಅಗತ್ಯ ಹೆಚ್ಚಿನದಾಗಿದೆ. ಒಂದು ಬಸ್ಸಿನಲ್ಲಿ ನಾಲ್ಕು ಬಸ್ಸಿನ ಜನ ಕುರಿಗಳಂತೆ ತುಂಬಿ ಪ್ರಯಾಣಿಸುವುದನ್ನು ತಪ್ಪಿಸಿ ಸೂಕ್ತ ಸೌಲಭ್ಯಕ್ಕಾಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT