ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠನ್‌ಗೆ ಸಂಗೀತ ರತ್ನ ಪ್ರಶಸ್ತಿ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ವೀಯೆಲ್ಲೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾನವು ಕಳೆದ ಮೂರು ವರ್ಷಗಳಿಂದ ಸಂಗೀತ ರತ್ನ ಪ್ರಶಸ್ತಿ ನೀಡುತ್ತಿದ್ದು, 2012ನೇ ಸಾಲಿನ ಪ್ರಶಸ್ತಿಯನ್ನು ಸಂಗೀತ ವಿದ್ವಾಂಸ ಆರ್.ಕೆ.ಶ್ರೀಕಂಠನ್ ಅವರಿಗೆ ನೀಡಲಾಗಿದೆ.

ಪ್ರಶಸ್ತಿಯು ಸ್ವರ್ಣಫಲಕ ಹಾಗೂ 25,000 ರೂ. ನಗದನ್ನು ಹೊಂದಿದೆ.  ಈ ಮೊದಲು ಸಂಗೀತ ವಿದ್ವಾಂಸ ವಿದ್ಯಾಭೂಷಣ್ ಹಾಗೂ ಅನಂತ ಕುಲಕರ್ಣಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 23 ರಂದು ಸಂಜೆ 6.30ಕ್ಕೆ ನಿಸರ್ಗ ಬಡಾವಣೆಯಲ್ಲಿರುವ ಪುರಂದರ ಮಂಟಪದಲ್ಲಿ ನಡೆಯುವುದು ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ವಿ.ಲಕ್ಷ್ಮಿ ನಾರಾಯಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂಟೀರಿಯರ್ ಡಿಸೈನ್ ಡಿಪ್ಲೊಮಾ

ನಗರದ ಕ್ರಿಯೇಟಿವ್ ಅಂಡ್ ಡಿಸೈನರ್ಸ್‌ ಸಂಸ್ಥೆಯು ಜ.22ರಿಂದ 1 ವರ್ಷದ ಅವಧಿಯ ಒಳಾಂಗಣ ವಿನ್ಯಾಸದ ಡಿಪ್ಲೊಮಾ ತರಗತಿ ಆರಂಭಿಸಲಿದೆ.
 ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತರಗತಿ ನಡೆಯಲಿದ್ದು, ಗೃಹಿಣಿಯರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಪುರುಷರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

ತರಗತಿಯಲ್ಲಿ ವಾಸ್ತು, ಬಣ್ಣಗಳು, ಮರಗೆಲಸ, ನೆಲವಿನ್ಯಾಸ, ದೀಪಾಲಂಕಾರ, ಹವಾ ನಿಯಂತ್ರಣ, ಕೊಳಾಯಿ ಮತ್ತು ಒಳಚರಂಡಿ, ಅನೃತ ಒಳಮಾಳಿಗೆ, ಮಳೆ ನೀರಿನ ಸಂಗ್ರಹಣೆ, ಸೋಲಾರ್ ಪವರ್ ಸಿಸ್ಟಮ್‌ನ ಉಪಯುಕ್ತತೆ, ಸಂರಕ್ಷಣೆ ಇವುಗಳ ಬಗ್ಗೆ ತಿಳಿಸಿಕೊಡಲಾಗುವುದು.

ತರಗತಿಯ ಅಂಗವಾಗಿ ಸ್ಥಳಗಳ ಭೇಟಿ, ಅಧ್ಯಯನ, ಪ್ರಾಯೋಗಿಕ ತರಗತಿ, ಸಮಾವೇಶ ಕೂಡ ಇರುವುದು. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನೂ ಒದಗಿಸಿಕೊಡಲಿದೆ.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 12ನೇ ಜನವರಿ. ಪ್ರವೇಶ ಮತ್ತು ಅರ್ಜಿಗಳಿಗಾಗಿ: ಕ್ರಿಯೇಟರ್ಸ್‌ ಅಂಡ್ ಡಿಸೈನರ್ಸ್‌ ರಾಯಲ್ ಕಾರ್ನರ್, 102, 1ನೇ ಮಹಡಿ, 1 ಮತ್ತು 2 ಲಾಲ್ ಬಾಗ್‌ರಸ್ತೆ. ಸಮಯ: ಬೆಳಗ್ಗೆ 10 ರಿಂದ ಸಂಜೆ 5. 
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 22248254/22248255.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT