ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಕ್ಕೆ ಪ್ರಣವ್ ಮುಖರ್ಜಿ ರಾಜೀನಾಮೆ

Last Updated 26 ಜೂನ್ 2012, 12:15 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾಗಿ ಆಯ್ಕೆಯಾದ ಕಾರಣ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಲು ನಾರ್ಥ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಯಿಂದ ತೆರಳುವ ಮುನ್ನ ಹೊರಗಡೆ ನೆರೆದಿದ್ದ ಸುದ್ದಿಗಾರರನ್ನು ಕುರಿತು ಮಾತನಾಡಿದ ಅವರು  `ಹೊಸದೊಂದು ಪ್ರಯಾಣಕ್ಕಾಗಿ ನಾನಿಂದು ಸಿದ್ಧನಾಗಿ ನಿಂತಿದ್ದೇನೆ. ಅದಕ್ಕಾಗಿ ನಾನು ನಾಲ್ಕು ದಶಕಗಳ ಸುಧೀರ್ಘ ರಾಜಕೀಯ ಜೀವನಕ್ಕೆ ವಿದಾಯ ಹೇಳುತ್ತೇನೆ~ ಎಂದು ಹೇಳಿದರು.

ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಸಂಯುಕ್ತ ಜನತಾದಳ ಸೇರಿದಂತೆ ಯುಪಿಎ ಮೈತ್ರಿಕೂಟದಲ್ಲಿರುವ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲ ತಮಗಿದೆ ಎಂದು ಹೇಳಿದ ಅವರು `ಅವರೇಲ್ಲರ ಬೆಂಬಲದಿಂದ ನಾನು ವಿನೀತನಾಗಿದ್ದೇನೆ~ ಎಂದು ಹೇಳಿದರು.

`ಪ್ರತಿಯೊಬ್ಬರ ಮನೋಭಾವದಂತೆ ನಾನು ಬಲವಾದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದನ್ನು ಬಲ್ಲೆ. ಆದರೆ ಜನತೆ ಹಿತದೃಷ್ಟಿಯಿಂದ ನಾನು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ~ ಎಂದು ಅವರು ಹೇಳಿದರು.

ಪ್ರಣವ್ ಅವರಿಂದ ತೆರವಾಗುವ ಹಣಕಾಸು ಖಾತೆಯನ್ನು ಪ್ರಧಾನಿಯವರು ತಮ್ಮ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆ ಇದೆ.

ಜಲೈ 19ರಂದು ರಾಷ್ಟ್ರಪತಿ ಚುನಾವಣೆ  ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT