ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಳಕಳಿಗೆ `ಮನದ ಮಾತು'

Last Updated 6 ಏಪ್ರಿಲ್ 2013, 5:58 IST
ಅಕ್ಷರ ಗಾತ್ರ

ಬಾಣಾವರ: ಸಮಾಜದಲ್ಲಿ ತಾವು ಕಂಡು ಕೇಳಿದ ವಿಚಾರಗಳ ಬಗ್ಗೆ ತಾವೇ ವಿಚಾರ ಮಾಡಿ ಅವುಗಳ ಬಗ್ಗೆ ತಮ್ಮ ನಿಲುವನ್ನು ವ್ಯಕ್ತ ಪಡಿಸಲು ಸೂಕ್ತ ವೇದಿಕೆಯನ್ನು ನಿರ್ಮಿಸಿದರೆ ವಿದ್ಯಾರ್ಥಿ ಗಳ ವ್ಯಕ್ತಿತ್ವ ಹೇಗೆ ಅನಾವರಣವಾ ಗುತ್ತದೆ ಎಂಬುದಕ್ಕೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಮನದ ಮಾತು ಕಾರ್ಯಕ್ರಮ ಸಾಕ್ಷಿಯಾಯಿತು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಗ್ರಂಥಾಲಯ ವಿಭಾಗಗಳು ಈಚೆಗೆ ಹಮ್ಮಿಕೊಂಡಿದ್ದ  `ಮನದ ಮಾತು' ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯ ಜತೆಗೆ ಇತರ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಅಂತಿಮ ಬಿ.ಎ.ವಿದ್ಯಾರ್ಥಿ ನಗ್ಮಾಬಾನು ಕನ್ನಡ ಭಾಷೆ, ಸಾಹಿತ್ಯ, ರಾಜಕೀಯ, ಕಲೆ, ಕ್ರೀಡೆ, ಇತರ ಕ್ಷೇತ್ರ ದಲ್ಲಿ ಪ್ರಥಮವಾಗಿ ಸಾಧನೆ ಮಾಡಿದ ಕನ್ನಡಿಗರ ಕಾಲ, ಹೆಸರುಗಳನ್ನು ವಿವರ ವಾಗಿ ತಿಳಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿ ಬಿ.ಆರ್. ಪವಿತ್ರಾ `ನಾವು ಸ್ವತಂತ್ರರೇ ? ಯಾವು ದರಲ್ಲಿ' ಎಂಬ ವಿಷಯದ ಬಗ್ಗೆ ಮಾತನಾಡಿ ನಮ್ಮದು ಸಂಪತ್ಭರಿತ ರಾಷ್ಟ್ರ, ಶ್ರೀಮಂತ ಸಂಸ್ಕೃತಿ ಹೊಂದಿ ರುವ ನಮ್ಮ ದೇಶದ ಇಂದಿನ ಆಧೋಗತಿಗೆ ಕಾರಣವೇನು ಎಂಬ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬಳಿಕ  `ಗಾಂಧಿ ನೆನಪು' ಕವನದ ಮೂಲಕ ಇಂದಿನ ಸ್ಥಿತಿಗತಿ ವಿವರಿಸಿದರು.

`ಬುಡಕಟ್ಟು ಜನಾಂಗ' ವಿಷಯದ ಬಗ್ಗೆ ಮಾತನಾಡಿದ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ನಿರ್ಮಲಾ, ಈ ಜನರ ಬದುಕು, ಜೀವನ ಶೈಲಿ, ಉಡುಗೆ, ತೊಡುಗೆಗಳ ಬಗ್ಗೆ ವಿವರಿಸಿದರು.

ಗಿರೀಶ್ ಎಂಬ ವಿದ್ಯಾರ್ಥಿ ತನ್ನೂರಿ ನಲ್ಲಿ ನಡೆಯುವ ಕನ್ನಡ ರಾಜ್ಯೋ ತ್ಸವದ ಬಗ್ಗೆ ಮಾತನಾಡಿದರು.
ಪ್ರಥಮ ಬಿ.ಎ.ವಿದ್ಯಾರ್ಥಿನಿ ವಿದ್ಯಾ ಏಕಾಗ್ರತೆ ಬಗ್ಗೆ ಮಾತನಾಡಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತಿಳಿಸಿದರು. ಜತೆಗೆ ನಾಡಿನ ಪ್ರಥಮ ರಾಷ್ಟ್ರಕವಿ ಎಂ.ಗೊವಿಂದ ಪೈಯವರ ವ್ಯಕ್ತಿತ್ವ ಹಾಗೂ ಕೃತಿಗಳ ಪರಿಚಯ ಮಾಡಿಕೊಟ್ಟರು

ಪಠ್ಯ ವಿಷಯಗಳಿಗೆ ಪೂರಕವಾದ ಇತರೆ ವಿಷಯಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಬೆಳವಣಿಗೆಯನ್ನು ಹೆಚ್ಚಿಸಿ ಕೊಳ್ಳವ ಜೊತೆಗೆ ಪ್ರಚಲಿತ ಜಗತ್ತಿನ ಅರಿವು ಮೂಡಿಸುವ ಇಂಥ ಕಾರ್ಯ ಕ್ರಮಗಳು ಸ್ವಾಗತರ್ಹ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಎಸ್. ನಾಗರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT