ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ಉತ್ಸವ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿ, ಪರಂಪರೆಯನ್ನು ನೆನಪಿಸುವ ವಿಶಿಷ್ಟ ಕಾರ್ಯಕ್ರಮವೇ `ಗುಡ್‌ನೈಟ್ ಸೂರ್ಯ ಫೆಸ್ಟಿವಲ್~. ಇದು 35 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ಸಲದ ಆವೃತ್ತಿಗೆ ಸೆ. 1ರಂದು ಚೆನ್ನೈನಲ್ಲಿ ಚಾಲನೆ ದೊರೆತಿದೆ.

ದೇಶದ ವಿವಿಧ ನಗರಗಳಲ್ಲಿ, ವರ್ಷದ 365 ದಿನ ಸ್ಥಳೀಯ ಹಾಗೂ ರಾಷ್ಟ್ರಮಟ್ಟದ ಪ್ರಖ್ಯಾತ ಸಿನಿಮಾ, ಕಿರುತೆರೆ ಕಲಾವಿದರು, ಸಾಂಸ್ಕೃತಿಕ ಪಟುಗಳ ನೃತ್ಯ, ಅಭಿನಯದ ಝಲಕ್ ಇದರ ಪ್ರಮುಖ ಆಕರ್ಷಣೆ.

ಹೆಸರಾಂತ ಕಲಾವಿದರಾದ ಶೋಭನಾ, ಕೆ.ಜೆ. ಯೇಸುದಾಸ್, ಪಂಡಿತ್ ರಮೇಶ್ ನಾರಾಯಣ್ ಅವರು ಈ ಬಾರಿಯ ಉತ್ಸವದಲ್ಲಿ ಪ್ರದರ್ಶನ ನೀಡಲಿರುವ ಪ್ರಮುಖರು.
ಗುಡ್ ನೈಟ್ ಸೂರ್ಯ ಫೆಸ್ಟಿವಲ್  `ಅತಿ ಹೆಚ್ಚು ಸಮಯ ನಡೆದ ಸಾಂಸ್ಕೃತಿಕ ಕಾರ್ಯಕ್ರಮ~ ಎಂದೇ ಲಿಮ್ಕೋ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ. ಈ ಹಿಂದೆ ನಿರಂತರ 111 ದಿನ ಕಾರ್ಯಕ್ರಮ ನಡೆದಿದ್ದು ಈ ಹೆಗ್ಗಳಿಕೆಗೆ ಕಾರಣವಾಗಿತ್ತು. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 365 ದಿನಗಳ ದೇಶದ 44 ನಗರಗಳಲ್ಲಿ ಆಯೋಜಿಸಲಾಗಿದೆ.

ಭರತನಾಟ್ಯದಿಂದ ಹಿಡಿದು ಒಡಿಸ್ಸಿವರೆಗೆ ವೈವಿಧ್ಯಮಯ ಶೈಲಿಯ ನೃತ್ಯ, ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಹೀಗೆ ಬಗೆಬಗೆಯ ಕಲಾಪ್ರಕಾರಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.

ಮಲ್ಲೆೀಶ್ವರದ 14ನೇ ಕ್ರಾಸ್‌ನ ಸೇವಾಸದನದಲ್ಲಿ ಗುರುವಾರದಿಂದ ಸೆ. 20ರ ವರೆಗೆ ನಿತ್ಯ ಸಂಜೆ 6.45ಕ್ಕೆ ವಿವಿಧ ಕಾರ್ಯಕ್ರಮ.
ಗುರುವಾರ ದೆಹಲಿಯ ರಮಾ ವೈದ್ಯನಾಥನ್ (ಭರತನಾಟ್ಯ).
ಶುಕ್ರವಾರ ಪಂಡಿತ್ ರಮೇಶ್ ನಾರಾಯಣ್ (ಹಿಂದುಸ್ತಾನಿ ಗಾಯನ). ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT