ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವಕ್ಕೆ ಹಾಲೆಂಡ್ ಕುಟುಂಬ

Last Updated 16 ಆಗಸ್ಟ್ 2011, 10:40 IST
ಅಕ್ಷರ ಗಾತ್ರ

ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಹಾಲೆಂಡ್‌ನ ಪ್ರವಾಸಿ ಕುಟುಂಬ ಎಲ್ಲರ ಗಮನ ಸೆಳೆಯಿತು. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಸನಿಹ ತ್ರಿವರ್ಣ ಧ್ವಜ ಹಿಡಿದು ಕುಳಿದಿದ್ದ ನಾಲ್ವರು ಕುಟುಂಬದ ಸದಸ್ಯರು ತಮ್ಮನ್ನು ಕಂಡು ಮುಗುಳ್ನಕ್ಕ ಎಲ್ಲರಿಗೂ `ಹಾಯ್...~ ಎಂದು ಸ್ನೇಹಹಸ್ತ ಚಾಚುತ್ತಿದ್ದರು.

ಹಾಲೆಂಡ್‌ನಲ್ಲಿ ಸೌರ ವಿದ್ಯುತ್ ಘಟಕ ಹೊಂದಿರುವ ಕಾರ್ಪೊರೇಟ್ ಉದ್ಯಮಿ ಮ್ಯಾಟ್ ತನ್ನ ಪತ್ನಿ ಮೆಯಾನ್, ಪುತ್ರರಾದ ಹೂಟರ್ ಮತ್ತು ಥ್ಯಾಷ್ ಜತೆಗೂಡಿ ಭಾರತ ಪ್ರವಾಸ ಮಾಡುತ್ತಿದ್ದಾರೆ. ಶನಿವಾರವೇ ಸ್ವದೇಶಕ್ಕೆ ಹಿಂದಿರುಗುವ ಆಲೋಚನೆಯಲ್ಲಿದ್ದ ಮ್ಯಾಟ್ ಕುಟುಂಬಕ್ಕೆ ಸೋಮವಾರದ ಸ್ವಾತಂತ್ರ್ಯ ದಿನಾಚರಣೆ ಸವಿಯುವ ಅವಕಾಶ ತಪ್ಪಿಸಿಕೊಳ್ಳಲು ಮನಸ್ಸಾಗಲಿಲ್ಲ.

ಬೆಂಗಳೂರಿನಂಥ ಮಹಾನಗರದ ಬದಲು ಮಧ್ಯಮ ಪ್ರಮಾಣದ ನಗರಗಳ ಸಂಭ್ರಮ ನೋಡುವ ಇಚ್ಛೆಯನ್ನು ತಮ್ಮ ಮಾರ್ಗದರ್ಶಿ ಗೆಳೆಯ ಸುರೇಶ್ ಬೋರ್ಕರ್ ಬಳಿ ಮ್ಯಾಟ್ ಹಂಚಿಕೊಂಡರು. ಸುರೇಶ್ ಮರು ಯೋಚನೆ ಮಾಡದೆ ಮ್ಯಾಟ್ ಕುಟುಂಬವನ್ನು ತುಮಕೂರಿಗೆ ಕರೆ ತಂದರು.

`ನಮ್ಮಲ್ಲಿ ಏಪ್ರಿಲ್ 30 ಕ್ವೀನ್ಸ್ ಡೇ (ರಾಷ್ಟ್ರೀಯ ಹಬ್ಬ). ಇಡೀ ದೇಶ ಕಿತ್ತಳೆ ಬಣ್ಣದಿಂದ ಸಿಂಗಾರಗೊಂಡಿರುತ್ತದೆ. ಕಿತ್ತಳೆ ನಮ್ಮ ರಾಷ್ಟ್ರದ ಪವಿತ್ರ ವರ್ಣ. ನಿಮ್ಮಲ್ಲಿ ತ್ರಿವರ್ಣವಿದ್ದಂತೆ. ಇಷ್ಟೊಂದು ಜನರನ್ನು ಒಮ್ಮೆಲೆ ನೋಡುವುದು ನಿಜಕ್ಕೂ ಸಂತಸದ ವಿಷಯ~ ಎಂದು ಮ್ಯಾಟ್ `ಪ್ರಜಾವಾಣಿ~ಯೊಂದಿಗೆ ಸಂಭ್ರಮ ಹಂಚಿಕೊಂಡರು.

`ಪ್ರತಿ ವರ್ಷ ಜುಲೈ 4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯ ದಿನಾಚರಣೆ. ನಾನು ಆ ಸಮಾರಂಭವನ್ನೂ ನೋಡಿದ್ದೇನೆ. ಇಲ್ಲಿನ ಚಿಕ್ಕಮಕ್ಕಳ ಉತ್ಸಾಹ, ಸಾಮೂಹಿಕ ನೃತ್ಯ ಹೆಚ್ಚು ಇಷ್ಟವಾಗುತ್ತದೆ~ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT