ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೀಡನ್ ಕವಿಗೆ ಒಲಿದ ಸಾಹಿತ್ಯ ನೊಬೆಲ್

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್, (ಎಪಿ):   ಮನುಷ್ಯನ ಮನಸ್ಸಿನ ನಿಗೂಢತೆಯ ಬಗ್ಗೆ ಅತಿ ವಾಸ್ತವಿಕವಾದ ಕೃತಿಯ ಮೂಲಕ ಹೆಸರಾದ ಸ್ವೀಡನ್‌ನ ಪ್ರಮುಖ ಕವಿ ಥಾಮಸ್ ಟ್ರಾನ್ಸ್‌ಟ್ರೋಮರ್ ಅವರಿಗೆ 2011ನೇ ಸಾಲಿನ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತಿದೆ.

ವಾಸ್ತವಕ್ಕೆ ತಾಜಾ ಪ್ರವೇಶ ಸಿಗುವಂತೆ ದಟ್ಟವಾದ ಪಾರದರ್ಶಕ ಪ್ರತಿಮೆಗಳನ್ನು ಬಳಸಿದ್ದಕ್ಕಾಗಿ 80 ವರ್ಷ ವಯಸ್ಸಿನ  ಥಾಮಸ್ ಅವರನ್ನು ಈ  ಬಹುಮಾನಕ್ಕೆ ಆಯ್ಕೆ ಮಾಡಿರುವುದಾಗಿ ಸ್ವೀಡನ್‌ನ ಅಕಾಡೆಮಿ ಹೇಳಿದೆ.

ಟ್ರಾನ್ಸ್‌ಟ್ರೋಮರ್ 1990ರಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದರು. ಇದರಿಂದಾಗಿ ಅವರು ಮಾತನಾಡಲು ಅಸಮರ್ಥರಾಗಿದ್ದರು. ಆದರೆ ಬರೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ. 2004ರಲ್ಲಿ  `ದಿ ಗ್ರೇಟ್ ಎನಿಗ್ಮಾ~ ಕವನ ಸಂಕಲ ಪ್ರಕಟವಾಯಿತು.

ನೊಬೆಲ್ ಪ್ರಶಸ್ತಿಯ ಜೊತೆಗೆ 15 ಲಕ್ಷ ಅಮೆರಿಕ ಡಾಲರ್ ಬಹುಮಾನಕ್ಕೆ ಟ್ರಾನ್ಸ್‌ಟ್ರೋಮರ್ ಪಾತ್ರರಾಗಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಿಂದ ಸಾಹಿತ್ಯಕ್ಕಾಗಿನ ಬಹುಮಾನ ಘೋಷಣೆ ಆಗುವ ಸಂದರ್ಭದಲ್ಲೆಲ್ಲ ಸ್ವೀಡನ್‌ನ ಪತ್ರಕರ್ತರು ಅವರ ಅಪಾರ್ಟ್‌ಮೆಂಟ್‌ನ ಹೊರಗೆ ಕಾಯುತ್ತಿದ್ದರು.

1974ರಲ್ಲಿ ಬಂದ `ಬಾಲ್ಟಿಕ್ಸ್~ ಹಾಗೂ ಅವರ ಪ್ರವಾಸಗಳ ವರ್ಣನೆಯಾಗಿರುವ 1966ರಲ್ಲಿ ಬಂದ `ವಿಂಡೋಸ್ ಅಂಡ್ ಸ್ಟೋನ್ಸ್~ ಟ್ರಾನ್ಸ್‌ಟ್ರೋಮರ್ ಅವರ ಪ್ರಸಿದ್ಧ ಬರಹಗಳಾಗಿವೆ. ಜಗತ್ತಿನ 50ಕ್ಕೂ ಹೆಚ್ಚು ಭಾಷೆಗಳಿಗೆ ಅವರ ಬರಹಗಳು ಅನುವಾದಗೊಂಡಿವೆ. ಟ್ರೋಮರ್ ಕೃತಿಗಳಿಂದ ಅನೇಕ ಕವಿಗಳು ಪ್ರಭಾವಿತರಾಗಿದ್ದಾರೆ.

23ನೇ ವಯಸ್ಸಿನಲ್ಲಿ ಅವರು ತಮ್ಮ ಮೊದಲ ಕವನ ಸಂಗ್ರಹ `ಸೆವೆಂಟೀನ್ ಪೋಯಮ್ಸ~ ಪ್ರಕಟಿಸಿದ್ದರು.  ಥಾಮಸ್, ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT