ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಅಥ್ಲೆಟಿಕ್ : ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದ ಲಕ್ಷ್ಮಣ್

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಾರ್ಖಂಡ್‌ನ ಲಕ್ಷ್ಮಣ್ ಉಪಧ್ಯಾಯ ಗುರುವಾರ ಇಲ್ಲಿ ಆರಂಭವಾದ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಆಶ್ರಯದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 70 ವರ್ಷ ಮೇಲಿನವರ ವಿಭಾಗದ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ 80 ಮೀ. ಹರ್ಡಲ್ಸ್‌ನಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದಂತೆ ಲಕ್ಷ್ಮಣ್ ತಮ್ಮ ಗೆಳೆಯ ಆಂಧ್ರಪ್ರದೇಶದ ಪದ್ಮನಾಭನ್ ಅವರನ್ನು ಅಪ್ಪಿಕೊಂಡರು. ಕಾರಣ ಯುವಕರಾಗಿದ್ದ ಸಮಯದ್ಲ್ಲಲಿ ಇವರಿಬ್ಬರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಒಟ್ಟಾಗಿ ಸ್ಪರ್ಧಿಸುತ್ತಿದ್ದರಂತೆ. ಪದ್ಮನಾಭನ್ ಇಲ್ಲಿ ಎರಡನೇ ಸ್ಥಾನ ಪಡೆದರು.

75 ವರ್ಷ ಮೇಲಿನ ವಿಭಾಗದ 80 ಮೀ. ಹರ್ಡಲ್ಸ್‌ನಲ್ಲಿ ತಮಿಳುನಾಡಿನ ಪಿ.ವಿ.ಪಾರ್ಥಸಾರಥಿ ಪ್ರಥಮ ಸ್ಥಾನ ಗಳಿಸಿದರು. ಅವರು ಈ ದೂರವನ್ನು 16.26 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಎರಡನೇ ಸ್ಥಾನ ಪಡೆದ ಕೇರಳದ ವಿ.ಪಿ.ರಾಜನ್ 35.18 ಸೆಕೆಂಡ್ ತೆಗೆದುಕೊಂಡರು. ಮೂರನೇ ಸ್ಥಾನ ರಾಜಸ್ತಾನದ ಮೋಹನ್ ಸಿಂಗ್ ಸಹನ್‌ಲಾಲ್ ಪಾಲಾಯಿತು.

ಎರಡನೇ ಅಂತರರಾಷ್ಟ್ರೀಯ ಹಿರಿಯರ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಕೂಡ ಆರಂಭವಾಗಿದೆ. ಇದರಲ್ಲಿ ಶ್ರೀಲಂಕಾ, ಮಲೇಷ್ಯಾ ಹಾಗೂ ನೇಪಾಳದಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಗೃಹ ಸಚಿವ ಆರ್.ಅಶೋಕ್ ಮಧ್ಯಾಹ್ನ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಫಲಿತಾಂಶ (ಚಿನ್ನ ಗೆದ್ದವರು): ಪುರುಷರು: 80 ಮೀ. ಹರ್ಡಲ್ಸ್: 70 ವರ್ಷ ಮೇಲಿನವರ ವಿಭಾಗ: ಲಕ್ಷ್ಮಣ್ ಉಪಧ್ಯಾಯ (ಜಾರ್ಖಂಡ್); 75 ವರ್ಷ ಮೇಲಿನವರ ವಿಭಾಗ: ಪಿ.ವಿ.ಪಾರ್ಥಸಾರಥಿ (ತಮಿಳುನಾಡು; 16.26); 5 ಮೀ.

5 ಕಿ.ಮೀ. ನಡಿಗೆ: 85+ ವಿಭಾಗ: ಜಿ.ಸತ್ಯನಾರಾಯಣ (ಆಂಧ್ರಪ್ರದೇಶ; 45: 25. 7); 80+ ವಿಭಾಗ: ಎನ್.ಆರ್.ಶಂಕರ್ ರಾವ್ (ಕರ್ನಾಟಕ; 38: 29.7); 75+ ವಿಭಾಗ: ಹರಿಲಾಲ್ (ಹರಿಯಾಣ; 32: 54.7); 70+ ವಿಭಾಗ: ಆರ್.ಕೆ.ಸನ್ವಾರಾ (ಹರಿಯಾಣ; 32:54.1); 65+ ವಿಭಾಗ: ವೈ.ಟಿಕೆಮ್ ಮೀಟಿ (ಮಣಿಪುರ); 60+ ವಿಭಾಗ: ಕೆ.ಮಂಜುನಾಥ್ (ಕರ್ನಾಟಕ; 31: 05.6); 55+ ವಿಭಾಗ: ಶಂಶೇರ್ ಸಿಂಗ್ (ಹರಿಯಾಣ; 27: 50.0); 50+ ವಿಭಾಗ: ದುಲೇಶ್ವರ್ ಗೊಗೊಯ್ (ಅಸ್ಸಾಂ; 29: 29.4).

ಹ್ಯಾಮರ್ ಥ್ರೋ: 85+ ವಿಭಾಗ: ವಿ.ಜಿ.ಸೆವಾರಿಯಾರ್ (ತಮಿಳುನಾಡು; 17.39 ಮೀ.); 80+ ವಿಭಾಗ: ಅಪೂರ್ವ ರಂಜನ್ ಬಿಸ್ವಾಸ್ (ಪಶ್ಚಿಮ ಬಂಗಾಳ; 25.75 ಮೀ.); 75+ ವಿಭಾಗ: ಮೋಹನ್ ಸಿಂಗ್ ಭುಲ್ಲಾರ್ (ಪಂಜಾಬ್; 29.37 ಮೀ.); 70+ ವಿಭಾಗ: ಕೆ.ಎ.ವರ್ಗೀಸ್ (ಕೇರಳ; 32.2 ಮೀ.); 65+ ವಿಭಾಗ: ನಹಾರ್ ಸಿಂಗ್ (ಹರಿಯಾಣ; 36.68 ಮೀ.).

ಮಹಿಳೆಯರು: 5 ಕಿ.ಮೀ. ನಡಿಗೆ: 80+ ವಿಭಾಗ: ಕುಮುದಿನಿ ಬಿಸ್ವಾಸ್ (ಪಶ್ಚಿಮ ಬಂಗಾಳ; 48. 38.5); 75+ ವಿಭಾಗ: ಮನಿಲೆಮಿ ದೇವಿ (ಮಣಿಪುರ); 70+ ವಿಭಾಗ: ಇಬೆಮ್‌ನುಂಗ್ಸಿ ದೇವಿ (ಮಣಿಪುರ; 39: 13.9); 55+ ವಿಭಾಗ: ರಾಜಮ್ ಗೋಪಿ (ಕೇರಳ; 34: 24.6); 50+ ವಿಭಾಗ: ಇಲಾ ದತ್ತಾ ಸಿಂಗ್ (ಪಶ್ಚಿಮ ಬಂಗಾಳ; 36:45.7).

ಜಾವೆಲಿನ್ ಥ್ರೋ: 85+ ವಿಭಾಗ: ಜೆ.ಎಂ.ಸಿಬಿಲಾ (ಕೇರಳ; 10.37 ಮೀ.); 75+ ವಿಭಾಗ: ಮಂಗೋಲ್ ದೇವಿ (ಮಣಿಪುರ; 11.54 ಮೀ.); 70+ ವಿಭಾಗ: ಎಂ.ಪುಷ್ಪಕುಮಾರಿ (ಆಂಧ್ರಪ್ರದೇಶ; 11.5ಮೀ.);  65+ ವಿಭಾಗ: ಶಿವಗಾಮಿ ಬಾಲಸುಂದರಮ್ (ತಮಿಳುನಾಡು; 16.94); 60+ ವಿಭಾಗ: ಸುಬಾದಿನಿ ದೇವಿ (ಮಣಿಪುರ; 19.73 ಮೀ.); ಅನಿ ಆರ್.ಪೈ (ಕರ್ನಾಟಕ; 21.28 ಮೀ.); ಅಮೃತಾ ಭಂಡಾರಿ (ಕರ್ನಾಟಕ; 24.57); ರೀತ್ ಅಬ್ರಹಾಂ (ಕರ್ನಾಟಕ; 31.43 ಮೀ.).

ಟ್ರಿಪಲ್ ಜಂಪ್: 80+ ವಿಭಾಗ: ಡೈಸಿ ವಿಕ್ಟರ್ (ತಮಿಳುನಾಡು; 4.44 ಮೀ.); 75+ ವಿಭಾಗ: ವಿಜಯಲಕ್ಷ್ಮಿ ನಾಯರ್ (ಕೇರಳ; 5.85 ಮೀ.); 70+ ವಿಭಾಗ: ಸನಹಾನ್ಬಿ ದೇವಿ (ಮಣಿಪುರ; 5.83 ಮೀ.); 65+ ವಿಭಾಗ: ಸುನಿತಾ ದೇವಿ (ಮಣಿಪುರ; 5.60 ಮೀ.); 60+ ವಿಭಾಗ: ಅಹಿಬಾಮ್ ದೇವಿ (ಮಣಿಪುರ; 7.32 ಮೀ.); 55+ ವಿಭಾಗ: ಸರಸ್ವತಿ ರಾಜ್‌ಪುತ್ (ಗುಜರಾತ್; 7.68 ಮೀ.); 50+ ವಿಭಾಗ: ಕೆ.ಭಾರತಿ (ಆಂಧ್ರಪ್ರದೇಶ; 7.01 ಮೀ.); 45+ ವಿಭಾಗ: ಸ್ವಪ್ನಾ ಮೊಂಡಲ್ (ಪಶ್ಚಿಮ ಬಂಗಾಳ; 9.16 ಮೀ.).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT