ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗೀರ ಕಾಲೇಜಲ್ಲಿ ಮದುವೆ ಆಟ!

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ನಗರದ ಕಾಲೇಜುಗಳಲ್ಲಿ ದಿಢೀರನೆ ಸಂಸ್ಕೃತಿಯ ನದಿ ಹರಿಯತೊಡಗಿದೆ. ಕಪಾಟಲ್ಲಿ ಇಟ್ಟ ಅಜ್ಜಿ ಸೀರೆಗೆ ಈಗ ಮೊಮ್ಮಗಳಿಂದ ಬೇಡಿಕೆ. ಯಾವುದೋ ಗಲ್ಲಿಯಿಂದ ತಂದ ಮಡಿಕೆ ಗೆರೆಗಳನ್ನು ಮೂಡಿಸಿಕೊಂಡು ನಳನಳಿಸುತ್ತಿದೆ.

ಮದುವೆಗೆ ಮದುಮಗ ಸಿಂಗಾರಗೊಳ್ಳುವುದು ಹೇಗೆ, ಮದುಮಗಳಿಗೆ ಅಲಂಕಾರ ಹೇಗಾಗಬೇಕು ಎಂಬುದರ ಪ್ರಾತ್ಯಕ್ಷಿಕೆ. ಹುಡುಗಿಯೇ ಇಲ್ಲಿ ಗಂಡು. ಇಬ್ಬರ `ಮದುವೆ ನಟನೆ~ಯಲ್ಲೂ ನಾಚಿಕೆಯ ಲಾಸ್ಯ.

ಪಾಠ ಹೇಳುವ ಮೇಡಂಗಳು ಹಂಚ ಮೇಲೆ ದೋಸೆ ಹೊಯ್ಯುವ ಸಡಗರದಲ್ಲಿದ್ದರೆ, ವಿದ್ಯಾರ್ಥಿನಿಯರಲ್ಲಿ ಕುಣಿಯುವ ಉತ್ಸಾಹ. ಹಳ್ಳಿ ಆಟಗಳು ಹೇಗಿರುತ್ತವೆ, ಹಳ್ಳಿಗರು ತರಕಾರಿ ಹೇಗೆ ಮಾರುತ್ತಾರೆ, ಮದುವೆ ಎಂದರೆ ಏನೆಲ್ಲಾ ಶಾಸ್ತ್ರಗಳಿರುತ್ತವೆ, ಎಳ್ಳು ಬೀರುವುದು ಹೇಗೆ- ಎಲ್ಲವುಗಳ ಚೆಲ್ಲಾಪಿಲ್ಲಿ ದರ್ಶನ ಅಲ್ಲಿ. ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲಿ ಗುರುವಾರ `ಜಾನಪದ ಮೇಳ~ ನಡೆಯಿತು. ಆ ಕ್ಷಣಗಳು ಇದೋ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT