ಚೆಲುವಿಗೆ ಅನ್ವರ್ಥ ಪ್ರಾಟಿನ್ ಕೋಲ್
ಕೆಲ ತಿಂಗಳ ಹಿಂದಿನ ಮಾತು. ತುಮಕೂರಿನಿಂದ ಶಿರಾ ಪಟ್ಟಣಕ್ಕೆ ಹೋಗುತ್ತಿದ್ದೆ. ಶಿರಾ ಅಮಾನಿಕೆರೆಯ ಅಂಗಳ ಕಣ್ಣಿಗೆ ಬಿತ್ತು. ಅಲ್ಪ ನೀರಿನಲ್ಲಿ ದೊಡ್ಡ ದೊಡ್ಡ ಪಕ್ಷಿಗಳ ಗುಂಪು ನನ್ನನ್ನು ಆಕರ್ಷಿಸಿತು. ಮನೆಗೆ ಹೋಗಿ ಕ್ಯಾಮೆರಾದೊಂದಿಗೆ ಕೆರೆಯಂಗಳಕ್ಕೆ ಕಾಲಿಟ್ಟೆ. ಅಂಗಳದ ತುಂಬ ಕೊಳೆಯುತ್ತಿರುವ ಸೀಮೆ ಜಾಲಿ ಮುಳ್ಳುಗಳು ನನ್ನನ್ನು ಸ್ವಾಗತಿಸಿದವು. ನೆಲ ಹುಡುಕಿಕೊಂಡು ನಿಧಾನವಾಗಿ ಕಾಲಿಡುತ್ತ ಪಕ್ಷಿಗಳಿರುವ ಸಮೀಪಕ್ಕೆ ಬಂದೆ.Last Updated 10 ಫೆಬ್ರುವರಿ 2014, 19:30 IST