ಬುಧವಾರ, ಅಕ್ಟೋಬರ್ 28, 2020
18 °C

ಫೋರ್ಡ್‌ನಿಂದ ಮನೆ ಬಾಗಿಲಿಗೆ ಸೇವೆ: ಬೆಂಗಳೂರಿನಲ್ಲಿಯೂ ಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫೋರ್ಡ್‌ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ‘ಮನೆ ಬಾಗಿಲಿಗೆ ಸೇವೆ’ ವ್ಯವಸ್ಥೆ ಆರಂಭಿಸಿದೆ. ಬೆಂಗಳೂರಿನಲ್ಲಿಯೂ ಇದು ಲಭ್ಯವಿದೆ. ಹೆಚ್ಚುವರಿ ಶುಲ್ಕವಿಲ್ಲದೆಯೇ ಗ್ರಾಹಕರು ತಮ್ಮ ವಾಹನಗಳಿಗೆ ಬೇಕಿರುವ ಸೇವೆಯನ್ನು ಮನೆ ಅಥವಾ ಕಚೇರಿ ಆವರಣದಲ್ಲಿಯೇ ಪಡೆಯಬಹುದು.

ಫೋರ್ಡ್‌ ಇಂಡಿಯಾದ ಸಹಾಯವಾಣಿ‌ ಮೂಲಕ ಮಾರಾಟ ಮತ್ತು ಸೇವೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು. ವಾಹನಗಳ ಅಗತ್ಯ ತಪಾಸಣೆ, ಬಿಡಿಭಾಗಗಳ ಬದಲಾವಣೆ, ಡ್ರೈ ವಾಷ್‌ ಇತ್ಯಾದಿ ಈ ಸೇವೆಯಲ್ಲಿ ಅಡಕವಾಗಿದೆ. ಸೇವೆ ಪಡೆದ ಬಳಿಕ ಗ್ರಾಹಕರು ಆನ್‌ಲೈನ್‌ ಮೂಲಕ ಹಣ ಪಾವತಿಸಬಹುದು ಎಂದು ಕಂಪನಿ ಹೇಳಿದೆ.

ಮೊದಲ ಹಂತದಲ್ಲಿ ಬೆಂಗಳೂರು ಮಾತ್ರವಲ್ಲದೆ ದೆಹಲಿ, ಗುರುಗ್ರಾಮ, ನೊಯಿಡಾ, ಜೈಪುರ ಮತ್ತಿತರ ನಗರಗಳಲ್ಲಿಯೂ ಈ ಸೇವೆ ಸಿಗಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು