ಚುನಾವಣಾ ಹಬ್ಬ: ಅಭ್ಯರ್ಥಿಯೊಂದಿಗೆ ಮತದಾರರ ಭೇಟಿ

ಶುಕ್ರವಾರ, ಏಪ್ರಿಲ್ 19, 2019
22 °C
ಬಿ–ಪ್ಯಾಕ್ ವಿಶೇಷ ಅಭಿಯಾನ

ಚುನಾವಣಾ ಹಬ್ಬ: ಅಭ್ಯರ್ಥಿಯೊಂದಿಗೆ ಮತದಾರರ ಭೇಟಿ

Published:
Updated:

ಬೆಂಗಳೂರು: 2019ರ ಲೋಕಸಭಾ ಚುನಾವಣಾ ಹಬ್ಬವನ್ನು ಬಿ–ಪ್ಯಾಕ್‌ ಸಂಸ್ಥೆ ಭಿನ್ನವಾಗಿ ಆಚರಿಸುತ್ತಿದೆ. ಈ ಲೋಕತಂತ್ರದ ಉತ್ಸವದಲ್ಲಿ ಎಲ್ಲರೂ ಸಕ್ರಿಯವಾಗಿ, ಉತ್ಸಾಹದಿಂದ ಭಾಗವಹಿಸಬೇಕೆಂಬ ಸದುದ್ದೇಶದಿಂದ ‘ಎಲೆಕ್ಷನ್‌ ಹಬ್ಬ’ ಎಂಬ ವಿಶೇಷ ಅಭಿಯಾನ ಆರಂಭಿಸಿದೆ.

ಇದರ ಭಾಗವಾಗಿ ಈಗಾಗಲೇ ಮತದ ಮೌಲ್ಯ, ಮತದಾನದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಅದರಲ್ಲಿ ಆಮಿಷಗಳನ್ನು ತಿರಸ್ಕರಿಸಿ, ಸೂಕ್ತ ಎನಿಸಿದ ಅಭ್ಯರ್ಥಿಯನ್ನು ವಿವೇಚನೆ ಮತ್ತು ಸ್ವ–ಇಚ್ಛೆಯಿಂದ ಬೆಂಬಲಿಸುವ ಸಂದೇಶಗಳು ಇವೆ.

ಈ ಅಭಿಯಾನದಡಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮವೆಂದರೆ ‘ಅಭ್ಯರ್ಥಿಗಳೊಂದಿಗೆ ಮತದಾರರ ಭೇಟಿ’. ನಿಗದಿತ ದಿನ, ಸ್ಥಳ ಮತ್ತು ಸಮಯದಲ್ಲಿ ಈ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ಭವ್ಯ ಭಾರತದ ಭವಿಷ್ಯವನ್ನು ನಿರ್ಧರಿಸುವ ಶಾಸನಗಳನ್ನು ರಚಿಸುವ ಸಂಸದ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮತದಾರರು ತಮ್ಮನ್ನು ಯಾಕೆ ಬೆಂಬಲಿಸಬೇಕು. ಜನಕಲ್ಯಾಣಕ್ಕಾಗಿ ಈವರೆಗೂ ತಾವೇನು ಮಾಡಿದ್ದೇವೆ. ಮುಂದೇನು ಮಾಡಬೇಕು ಅಂದುಕೊಂಡಿದ್ದೇವೆ ಎಂಬುದನ್ನು ಅಭ್ಯರ್ಥಿಗಳು ಇಲ್ಲಿ ಬಿಚ್ಚಿಡಲಿದ್ದಾರೆ.

ಈ ವೇದಿಕೆಯಲ್ಲಿನ ಆರೋಗ್ಯಕರ ಚರ್ಚೆಗಳು ಮತದಾರರು ಮತ್ತು ಭಾವಿ ಜನಪ್ರತಿನಿಧಿಗಳ ನಡುವಿನ ಸಂವಹನ ಸೇತುವಾಗಬೇಕು ಎಂಬ ಇರಾದೆ ಸಂಸ್ಥೆಯದು. ಬಿ–ಪ್ಯಾಕ್‌ನ ಕಾರ್ಯದರ್ಶಿ ಕೆ.ಜೈರಾಜ್‌ ಅವರು ಸಂವಾದವನ್ನು ನಿರ್ವಹಿಸಲಿದ್ದಾರೆ.

ಸಂವಾದ ಕಾರ್ಯಕ್ರಮಕ್ಕೆ ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೋಂದಾಯಿತ ಸಭಿಕರಿಗೆ ಮಾತ್ರ ಪ್ರವೇಶ ಇರಲಿದೆ. ಗುರುತಿನ ಚೀಟಿಯೊಂದಿಗೆ ಕಾರ್ಯಕ್ರಮ ಸ್ಥಳಕ್ಕೆ ಅರ್ಧ ಗಂಟೆ ಮುಂಚೆ ಹಾಜರಾಗುವುದು ಕಡ್ಡಾಯ. 
ವಾಟ್ಸ್‌ಆ್ಯಪ್‌: 9663806688
ಇ–ಮೇಲ್‌: communication@bpac.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !