4,944 ರಸ್ತೆ ಗುಂಡಿಗಳಿಗೆ ಮುಕ್ತಿ

7
ಮಾಹಿತಿ ಹಂಚಿಕೊಂಡ ಡಿಸಿಎಂ ಡಾ.ಜಿ.ಪರಮೇಶ್ವರ

4,944 ರಸ್ತೆ ಗುಂಡಿಗಳಿಗೆ ಮುಕ್ತಿ

Published:
Updated:
ನಗರದ ಹಲಸೂರು ಮುಖ್ಯರಸ್ತೆಯಲ್ಲಿ ಡಬ್ಲ್ಯೂ.ಎಚ್‌.ಹನುಮಂತಪ್ಪ ಲೇಔಟ್‌ ಸಮೀಪ ಕಂಡ ಗುಂಡಿ

ಬೆಂಗಳೂರು: ನಗರದ ರಸ್ತೆ ಗುಂಡಿ ಗಳನ್ನು ಮುಚ್ಚಲು ಬಿಬಿಎಂಪಿ ಕಾಳಜಿ ವಹಿಸಿದೆ.

‘ನಗರದಲ್ಲಿ 7,537 ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದವು. ಅವುಗಳ ಪೈಕಿ 4,944 ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಟ್ವಿಟರ್‌ ಮೂಲಕ ತಿಳಿಸಿದ್ದಾರೆ. 

ಕಳೆದ ವರ್ಷ ನಗರದಲ್ಲಿ ರಸ್ತೆ ಗುಂಡಿಗಳಿಂದ ಸರಣಿ ಸಾವು ಸಂಭವಿಸಿದ್ದವು. ಈ ಮಳೆಗಾಲದಲ್ಲಿ ಮತ್ತಷ್ಟು ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ಇಂಥ ಘಟನೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಪರಮೇಶ್ವರ ಅವರು, ‘ಗುಂಡಿಗಳು ಕಂಡಲ್ಲಿ ಚಿತ್ರ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ಸಹಿತ ಕಳುಹಿಸಿ’ ಎಂದು ಜೂನ್‌ 15ರಂದು ಕೋರಿದ್ದರು. ಜೂನ್‌ 24ರವರೆಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ 080–2266000ಕ್ಕೆ 202 ಕರೆಗಳು ಬಂದಿದ್ದವು. ವಾಟ್ಸ್‌ ಆ್ಯಪ್‌ ಸಂಖ್ಯೆಗೆ(94806 85700) 101 ಹಾಗೂ ವೆಬ್‌ಸೈಟ್‌ ಮೂಲಕ 343 ದೂರುಬಂದಿದ್ದವು. ದೂರುಗಳು ಬಂದಾಕ್ಷಣ ಆಯಾ ವಲಯ, ವಾರ್ಡ್‌ಗಳ ಎಂಜಿನಿಯರ್‌ಗಳಿಗೆ ಮಾಹಿತಿ ನೀಡುತ್ತಿದ್ದೆವು. ಪೈಥಾನ್‌ ಯಂತ್ರಗಳ ಬಳಕೆ ಮಾಡಿ ಪಾಲಿಕೆಯು ಗುಂಡಿ ಮುಚ್ಚುವ ಕೆಲಸ ಆರಂಭಿಸಿದ್ದೇವೆ ಎಂದು ಬಿಬಿಎಂಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. 

ಜನರ ಒತ್ತಡ, ಮಾಧ್ಯಮಗಳಲ್ಲಿ ನಿತ್ಯವೂ ರಸ್ತೆ ಸಮಸ್ಯೆ ಬಿತ್ತರವಾಗುತ್ತಿರುವುದರ ಪರಿಣಾಮ ಬಿಬಿಎಂಪಿ ಗುಂಡಿ ಮುಚ್ಚಲು ಮುಂದಾಗಿದೆ. ಸಾಧಾರಣ ಮಳೆಗೂ ರಸ್ತೆಯ ಡಾಂಬರು ಕಿತ್ತು ಹೋಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆ ಹಗಲು ರಾತ್ರಿ ಶ್ರಮಿಸುತ್ತಿದೆ. ಗುಂಡಿ ಕಂಡಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇವೆ.
– ಆರ್‌. ಸಂಪತ್‌ರಾಜ್‌ ಮೇಯರ್‌ ಬಿಬಿಎಂಪಿ

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !