ಸೋಮವಾರ, ನವೆಂಬರ್ 18, 2019
23 °C

ಬೆಂಗಳೂರು | ವರ್ತೂರು– ಗುಂಜೂರು ರಸ್ತೆ ದುರಸ್ತಿ ಮಾಡದ ಎಂಜಿನಿಯರ್‌ ಅಮಾನತು

Published:
Updated:

ಬೆಂಗಳೂರು: ವರ್ತೂರು– ಗುಂಜೂರು ರಸ್ತೆಯ ಗುಂಡಿಯಲ್ಲಿ ಸಿಲುಕಿ ತಾಯಿ ಮಗಳು ಗಾಯಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ಈ ರಸ್ತೆಯನ್ನು ದುರಸ್ತಿ ಮಾಡದ ಕಾರಣ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ಬುಧವಾರ ಅಮಾನತು ಮಾಡಿದ್ದಾರೆ.

ಜಲಮಂಡಳಿಯವರು ಪೈಪ್‌ಲೈನ್‌ ಅಳವಡಿಸಲು ರಸ್ತೆಯನ್ನು ಅಗೆದಿತ್ತು. ಅದನ್ನು ಮುಚ್ಚಿರಲಿಲ್ಲ. ರಸ್ತೆಯ ಗುಂಡಿ ಮುಚ್ಚಲು ತಕ್ಷಣವೇ ಡಾಂಬರೀಕರಣ ನಡೆಸುವಂತೆಯೂ ಆಯುಕ್ತರು ಸೂಚಿಸಿದ್ದಾರೆ. ‘ನಾಳೆ ಬೆಳಿಗ್ಗೆ ಒಳಗೆ ರಸ್ತೆ ವಾಹನ ಸಂಚಾರಯೋಗ್ಯವಾಗಿರುತ್ತದೆ’ ಎಂದು ಅವರು ಬುಧವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ.

ರಸ್ತೆ ಗುಂಡಿಯನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳದ 10 ಎಂಜಿನಿಯರ್‌ಗಳಿಗೆ ಬಿಬಿಎಂಪಿ ಇತ್ತೀಚೆಗೆ ತಲಾ ₹ 1ಸಾವಿರದಿಂದ ₹ 3 ಸಾವಿರ ದಂಡ ವಿಧಿಸಿತ್ತು.

ಪ್ರತಿಕ್ರಿಯಿಸಿ (+)