ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನ ಮಹಿಳಾ ವಿಶ್ರಾಂತಿ ಕೊಠಡಿಯ ಕತೆಗಳು

Last Updated 23 ಜುಲೈ 2018, 17:42 IST
ಅಕ್ಷರ ಗಾತ್ರ

ಒಬ್ಳು ‘ಸ್ವಲ್ಪ ಟಚ್ ಅಪ್ ಮಾಡ್ಕೊಂಡು ಬರೋಣ’, ಮತ್ತೊಂದು ಗುಂಪಿನಲ್ಲಿ ‘ನಮ್ ಮನೇಲಿ ಇವತ್ತು ಅಣ್ಣ ಐಸ್ ಕ್ರೀಮ್ ತಂದುಕೊಟ್ಟ’, ಇನ್ನೊಬ್ಳು ‘ನನಗಿವತ್ತು ಅಮ್ಮ ಹೊಸ ಬಟ್ಟೆ ತಂದು ಕೊಡುತ್ತಾರಂತೆ ಕಣೇ’, ‘ಇವತ್ತು ನನ್ ಹುಡುಗ ಬರ್ತಿದ್ದಾನೆ, ಚೆನ್ನಾಗಿ ತಯಾರಾಗಿ ಹೋಗ್ಬೇಕು’ ಅಂತ ಬಾಚಣಿಗೆ ತೆಗೆದುಕೊಂಡು ಕೇಶಬಾಚಿಕೊಂಡು ಮೇಕಪ್ ಮಾಡಿಕೊಳ್ಳುವಳು.

ಹೀಗೆ ಹದಿಹರೆಯದ ಹೆಂಗಳೆಯರ ಸಮೂಹದೊಳಗೆ ಹರಟೆಯ ಮೆಲುಕು ಸಾಗುತ್ತಲಿರುತ್ತದೆ.ಇನ್ನೂ ಹೆಚ್ಚೆಂಬಂತೆ ಪರದೆಯೂ ನಾಚುವಂತೆ ವಯ್ಯಾರ ಮಾಡುತ್ತಾ, ಮೊಗ ತುಂಬಾ ಶ್ವೇತವರ್ಣದ ಅಲಂಕಾರದೊಡನೆ ಕೆಂಪನೆಯ ಬಣ್ಣವನ್ನು ಅಧರಕ್ಕೆ ಹಚ್ಚಿಕೊಳ್ಳುತ್ತಾ ಇರುವ ತರುಣಿಯರ ಗುಂಪು, ಕೇಶರಾಶಿಯ ಅಲಂಕಾರಕ್ಕಾಗಿ ಒಂದೆಡೆ ಸಾಲಾಗಿ ಕುಳಿತಿರುವ ತಂಡ, ಮತ್ತೊಂದೆಡೆ ಗುಂಪಾಗಿ ಕುಳಿತು ಬೇಕರಿ ತಿನಿಸುಗಳ ಲಕೋಟೆಯೊಂದಿಗೆ ಮೆಲುಕು ಹಾಕುತ್ತಾ ಮಾತನಾಡುವ ಸಮೂಹ, ಇನ್ನೂ ಸ್ವಲ್ಪ ಮುಂದೆ ಚಲಿಸಿದರೆ ‘ಅಯ್ಯೋ ರೆಕಾರ್ಡ್ ಆಗಿಲ್ಲ, ಕ್ಲಾಸ್ ಬೇರೆ ಇದೆ’ ಅಂತ ಗೊದಲಕ್ಕೊಳಗಾಗಿ ಮಾತನಾಡುವ ಗುಂಪು.

ಇದು ಸ್ತ್ರೀ ಕುಲದ ಕುಸುಮಗಳು ಒಂದೆಡೆ ಸೇರಿದಾಗ ಸಾಮಾನ್ಯವಾಗಿ ಕೇಳಿಬರುವ ಮಾತುಗಳು. ಆದರೆ ಮೇಲಿನ ಎಲ್ಲಾ ವಿಷಯಗಳು ಸಂಗಮಗೊಳ್ಳುವುದಾದರೂ ಎಲ್ಲಿ? ಎಂದು ಪ್ರಶ್ನೆ ಮೂಡಬಹುದು.

ಹೌದು! ಇದು ಹರೆಯದ ಉತ್ಸಾಹದ ಚಿಲುಮೆಗಳಾಗಿರುವ ಚೆಂದದ ತರುಣಿಯರ ಮಾತು-ಮಂಥನ-ಸೌಂದರ್ಯಪ್ರಜ್ಞೆಯ ರೀತಿಗಳು. ಅದೂ ಕೂಡಾ ಕಾಲೇಜಿನ ಮಹಿಳಾ ಕೊಠಡಿಗಳೆಂಬ ಸುಂದರ ವಾತಾವರಣದ ನಡುವೆ ಎಂಬುದು ಇನ್ನೂ ವಿಶೇಷತೆ.

ಶಾಲಾ ಶಿಕ್ಷಣದ ವ್ಯವಸ್ಥೆಯಲ್ಲಿ ಈ ಮಹಿಳಾ ಕೊಠಡಿಗಳ ಕಲ್ಪನೆಯೂ ಇರಲಿಲ್ಲ. ಪದವಿ ಶಿಕ್ಷಣಕ್ಕೆ ಕಾಲಿಟ್ಟ ಬಳಿಕ ತರುಣಿಯರಿಗೆ ಹೊಸ ಜಗತ್ತೊಂದು ಸೃಷ್ಟಿಯಾಗಿರುತ್ತದೆ. ಇಲ್ಲಿ ಖುಷಿಯಾಗಿರಬಹುದು. ಯಾವುದೇ ಹುಡುಗರ ಕಿತಾಪತಿಗಳಿಲ್ಲ, ಬೇಕೆನಿಸಿದಾಗ ಬಂದು-ಹೋಗಿ, ಸ್ವಲ್ಪ ಟಚ್ ಅಪ್ ಕೊಡುತ್ತಾ, ತುಸು ಹರಟೆ ಹೊಡೆಯುತ್ತಾ, ವಿಷಯಗಳೊಡನೆ ಬಗೆ ಬಗೆ ತಿನಿಸುಗಳ ಮೆಲುಕು ಹಾಕುತ್ತಾ ಇರಬಹುದಾದ ಕಾಲೇಜಿನ ಏಕೈಕ ಸ್ಥಳವಿದು. ಒಂದಷ್ಟಗಲದ ಕೊಠಡಿ, ಕೊಠಡಿಯೊಳಗೆ ಶುಭ್ರಕನ್ನಡಿ, ಜೊತೆಗೆ ಬೆಂಚುಗಳು-ಮೇಜುಗಳು, ಅದರೊಳಗಡೆ ಮತ್ತೆ ವಸ್ತ್ರಧಾರಣಾ ಕೊಠಡಿ, ಜೊತೆಗೆ ಕ್ಯಾಮರಾ ಅಳವಡಿಕೆ ಇಲ್ಲದ ಹೆಂಗಳೆಯರ ಅಚ್ಚುಮೆಚ್ಚಿನ ವಿಶ್ರಾಂತಿ ತಾಣ.

ಇಲ್ಲಿ ಕ್ಲಿಕ್ಕಾಗುವ ಸೆಲ್ಫಿಗಳೆಷ್ಟೋ...

ಮಹಿಳಾ ಕೊಠಡಿಗಳು ಕಾಲೇಜಿನಲ್ಲಿರುತ್ತದೆ ಎಂಬುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ವಿಚಾರಕ್ಕೆ ತರಲೆ ತರುಣರು ‘ಹೆಣ್ಣು ಮಕ್ಕಳಿಗೆ ಕೊಠಡಿ ವ್ಯವಸ್ಥೆಗಳಿವೆ, ನಮಗೆ ಯಾಕಿಲ್ಲ?’ ಎಂದು ಹೊಟ್ಟೆಕಿಚ್ಚು ಪಡುವ ವಿಚಾರವೂ ಅಷ್ಟೇ ನಿಜವಾದದ್ದು. ಹುಡುಗರಿಗೆ ಹೋಲಿಸಿದರೆ ಹುಡುಗಿಯರ ಮನಸ್ಸು ಆದಷ್ಟು ಶಾಂತಿಯುತ ವಾತಾವರಣದಲ್ಲಿ ಇರಬಯಸುತ್ತದೆ. ತಮ್ಮ ಭಾವನೆಗಳಿಗೆ ಭಾವನೆಯ ಬೆಸೆಯಲು ಸೂಕ್ತ ಸ್ಥಾನವನ್ನಾಗಿ ಕಾಲೇಜು ಕೊಠಡಿಗಳನ್ನೇ ಬಳಸಿಕೊಳ್ಳುತ್ತಾರೆ. ಅದಕ್ಕೇ ಹೆಂಗಳೆಯರು ಅತೀ ಹೆಚ್ಚು ಇಷ್ಟ ಪಡುವ ಸ್ಥಳ ಅದು ಲೇಡೀಸ್ ರೂಮ್ ಅಥವಾ ಮಹಿಳಾ ಕೊಠಡಿ ಎಂದರೆ ತಪ್ಪಾಗದು.

ಅಂದದ ಲಲನೆಯರ ಸೌಂದರ್ಯದ ತಾಣ, - ಮಾತಿನ ಬಾಣ-ಮೋಜಿನ ತನನದ ಮೀಟುವಿಕೆಗೆ ಕಲ್ಪಿತವಾಗಿರುವ ಈ ಹೊಸ ಮಹಿಳಾ ಲೋಕ ತರ್ಲೆ ತುಂಟರ ಅನುಪಸ್ಥಿತಿಯಲ್ಲಿ ಕೇವಲ ಹೆಣ್ಣು ವಯಸ್ಸು-ಮನಸುಗಳ ನಡುವೆಯೇ ಯಾವುದೇ ಅಂಜಿಕೆಯಿಲ್ಲದೆ-ನಾಚಿಕೆಯಲ್ಲದೆ ಬಲು ಮೋಜನ್ನೀಯುತ್ತಿರುವುದಂತೂ ನಿಜ. ವಿಭಿನ್ನ ಮನಸ್ಸುಗಳು ಇಲ್ಲಿ ಅರಳಿ ನಿಂತು ತಮ್ಮೆಲ್ಲಾ ಕನಸುಗಳ ಮಹಲುಗಳನ್ನು ಕಟ್ಟುತ್ತಿರುತ್ತವೆ. ನಿಜವಾಗಿಯೂ ಪ್ರಶಾಂತತೆಗೆ ಪೂರಕ-ಶಿಸ್ತು ಕಾಪಾಡಿಕೊಳ್ಳಲು ದ್ಯೋತಕ-ಹೆಣ್ತನದಲಿ ಮನದಲಿ ಮೂಡುವ ಅನೇಕ ತುಮುಲಗಳ ಯೋಚನೆ-ಯೋಜನೆಗೆ ಪ್ರೋತ್ಸಾಹಕ-ಸೌಂದರ್ಯ ಆರಾಧಕರಿಗೆ ಪ್ರೀತಿಯ ಸೂತ್ರಧಾರ ಆಗಿ ತರುಣಿಯರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT