ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಸೆಸ್‌ ಇಂಡಿಯಾ ಕರ್ನಾಟಕ’

misses india
Last Updated 28 ಜನವರಿ 2019, 20:00 IST
ಅಕ್ಷರ ಗಾತ್ರ

ಮದುವೆಯಾಯಿತು, ಮಕ್ಕಳೂ ಆದವು ಇನ್ನೇನು ಮುಗೀತು ಅಂತ ಕೂತರೆ ಏನೂ ಆಗಲ್ಲ ಬೊಜ್ಜು ಬೆಳೆಯುತ್ತದೆ. ಇವರನ್ನು ನೋಡಿರ‍್ಯಾಂಪ್‌ ಮೇಲೆ ಹೆಜ್ಜೆಯನ್ನೂ ಹಾಕಬಹುದು, ಮಿಸೆಸ್‌ ಇಂಡಿಯಾ ಕೂಡ ಆಗಬಹುದು ಎನ್ನುವ ಉತ್ಸಾಹ ಮೆರೆದಿದ್ದಾರೆ.

ಸ್ವಲ್ಪ ಜೀವನೋತ್ಸಾಹ ಹೆಚ್ಚಿಸಿಕೊಂಡರೆ, ಬದುಕನ್ನು ಭಿನ್ನವಾಗಿ ಕಾಣುವ ಪ್ರಯತ್ನ ಮಾಡಿದರೆ ವಯಸ್ಸು, ದೇಹ ಸೌಂದರ್ಯವಷ್ಟೇ ಎಲ್ಲವೂ ಅಲ್ಲ ಅನಿಸುತ್ತದೆ. ಇದರಾಚೆಗೂ ಬದುಕಿನ ನಿಜ ಸೌಂದರ್ಯ ಕಾಣಲು ಒಂದು ಮಜವಾದ ಪಯಣವೂ ಇದೆ ಅನ್ನಿಸುತ್ತದೆ. ಅಲ್ಲವೇ? ರ‍್ಯಾಂಪ್‌ ಮೇಲೆ ಹೆಜ್ಜೆಹಾಕಿದ ಅಮ್ಮನನ್ನು ಚಿಯರ್ ಮಾಡಲು, ಮಕ್ಕಳು ಉತ್ಸಾಹ ಹೆಚ್ಚಿಸಿದರು, ಪತಿ ಹಾಗೂ ಕುಟುಂಬದವರೂ ಹಿಂದೆ ಉಳಿಯಲಿಲ್ಲ.

‘ಮಿಸೆಸ್‌ ಇಂಡಿಯಾ ಆ್ಯಮ್‌ ಪವರ್‌ಫುಲ್‌ ಕರ್ನಾಟಕ’ ಶೋ ಆಡಿಷನ್‌ನಲ್ಲಿ 102 ಮಹಿಳೆಯರು ರ‍್ಯಾಂಪ್‌ ಮೇಲೆ ಹೆಜ್ಜೆಹಾಕಿದರು. ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಭಾನುವಾರ ಆಡಿಷನ್‌ ಆಯೋಜನೆಗೊಂಡಿತ್ತು. 18ರಿಂದ 55 ವರ್ಷದೊಳಗಿನ ಮಹಿಳೆಯರು ಕುಟುಂಬದೊಂದಿಗೆ ಬಂದು ಉತ್ಸಾಹದಿಂದ ಪಾಲ್ಗೊಂಡರು.

ಮನೆ, ಮಗು ಎಂದುಕೊಂಡು ಆಚೆ ಬರದ ಗೃಹಿಣಿಯರು ಫ್ಯಾಷನ್‌ ಜಗತ್ತಿಗೆ ಕಾಲಿಡಲು ಇಷ್ಟಪಡುತ್ತಿರುವುದು ಹೊಸ ಬೆಳವಣಿಗೆ. ಅಂತಿಮವಾಗಿ 30 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಮದುವೆಯಾದವರು, ವಿಧವೆ ಅಥವಾ ವಿವಾಹ ಬದುಕಿನಿಂದ ಹೊರ ಬಂದವರೂ ಶೋನಲ್ಲಿ ಪಾಲ್ಗೊಳ್ಳಲು ಅವಕಾಶ ಇತ್ತು.

ಪ್ರತಿಭೆ, ಆತ್ಮವಿಶ್ವಾಸ, ಪ್ಯಾಷನ್‌ನ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆಯೇ ಹೊರತು ಅವರ ದೇಹಸಿರಿ, ತೂಕ, ಸೌಂದರ್ಯದ ಆಧಾರದಲ್ಲಿ ಆಯ್ಕೆ ಮಾಡಲಾಗಿಲ್ಲ.

ಮಹಿಳಾ ಸಬಲೀಕರಣದ ಅವಕಾಶವನ್ನು ಈ ಸ್ಪರ್ಧೆ ನೀಡಿದೆ. ಅಂತಿಮ ಸ್ಪರ್ಧೆ ಮಾರ್ಚ್‌ ತಿಂಗಳಿನಲ್ಲಿ ಶಾಂಗ್ರಿಲಾ ಹೋಟೆಲ್‌ನಲ್ಲಿಯೇ ನಡೆಯಲಿದೆ. ಇಲ್ಲಿ ಗೆದ್ದವರು ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ‘ಮಿಸೆಸ್‌ ಇಂಡಿಯಾ ಆ್ಯಮ್‌ ಪವರ್‌ಫುಲ್‌’ನಲ್ಲಿ ಭಾಗಿಯಾಗುತ್ತಾರೆ.

ಅಲ್ಲಿ ಗೆದ್ದ ಮೂವರು ಸ್ಪರ್ಧಿಗಳು ಮಿಸೆಸ್‌ ಗ್ಲೋಬಲ್‌ ಯೂನಿವರ್ಸ್‌, ಮಿಸೆಸ್‌ ಏಷ್ಯಾ ಪೆಸಿಫಿಕ್‌, ಮಿಸೆಸ್‌ಇಂಡಿಯಾ ವರ್ಲ್ಡ್‌ ವೈಡ್‌ ಸ್ಪರ್ಧೆಗಳಲ್ಲಿ ರ‍್ಯಾಂಪ್‌ ಹತ್ತಲಿದ್ದಾರೆ. ಈ ಸ್ಪರ್ಧೆಗಳು ಸಿಂಗಪುರ, ಮಲೇಷ್ಯಾ, ಲಂಡನ್‌ನಲ್ಲಿ ನಡೆಯಲಿವೆ.

‘ಎಲ್ಲಾ ರಾಜ್ಯಗಳಿಂದ ಆಯ್ಕೆಯಾದ ಮಹಿಳೆಯರೊಂದಿಗೆಮೊದಲು ಪೈಪೋಟಿ ನೀಡಬೇಕಾಗಿರುವುದರಿಂದ ನಮ್ಮ ತಯಾರಿ ಚೆನ್ನಾಗಿರಬೇಕು. ಹಾಗಾಗಿ ಆಯ್ಕೆ ಕಠಿಣವಾಗಿಯೇ ಇರುತ್ತದೆ‘ ಎಂಬುದು ಆಯೋಜಕಿ ನಂದಿನಿ ನಾಗರಾಜ್‌ ಅವರ ಅಭಿಪ್ರಾಯ.

**

ಶಾಂಗ್ರಿಲಾ ಹೋಟೆಲ್‌ನಲ್ಲಿ ಅಂತಿಮ ಸ್ಪರ್ಧೆ ಮಾರ್ಚ್‌ ತಿಂಗಳಿನಲ್ಲಿ ನಡೆಯಲಿದೆ. ಗೆದ್ದವರು ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ‘ಮಿಸಸ್‌ ಇಂಡಿಯಾ ಆ್ಯಮ್‌ ಪವರ್‌ಫುಲ್‌’ನಲ್ಲಿ ಭಾಗಿ. ಅಲ್ಲಿ ಗೆದ್ದ ಮೂವರು ಸ್ಪರ್ಧಿಗಳು ಮಿಸಸ್‌ ಗ್ಲೋಬಲ್‌ ಯೂನಿವರ್ಸ್‌, ಮಿಸಸ್‌ ಏಷ್ಯಾ ಪೆಸಿಫಿಕ್‌, ಮಿಸಸ್‌ ಇಂಡಿಯಾ ವರ್ಲ್ಡ್‌ ವೈಡ್‌ ಸ್ಪರ್ಧೆಗಳಲ್ಲಿ ರ‍್ಯಾಂಪ್‌ ಹತ್ತಲಿದ್ದಾರೆ. ಈ ಸ್ಪರ್ಧೆಗಳು ಸಿಂಗಪುರ, ಮಲೇಷ್ಯಾ, ಲಂಡನ್‌ನಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT