ಆರ್‌ಎಂಕೆವಿ ಫ್ಯಾಷನ್‌ ಷೋದಲ್ಲಿ ಸುಶ್ಮಿತಾ ಸೇನ್

7

ಆರ್‌ಎಂಕೆವಿ ಫ್ಯಾಷನ್‌ ಷೋದಲ್ಲಿ ಸುಶ್ಮಿತಾ ಸೇನ್

Published:
Updated:
Deccan Herald

ಬಾಲಿವುಡ್‌ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್‌ ಅದ್ದೂರಿ ವಿನ್ಯಾಸದ ರೇಷ್ಮೆ ಸೀರೆಯನ್ನು ದುಪ್ಪಟ್ಟಾದಂತೆ ಸುತ್ತಿಕೊಂಡು, ವೈಯಾರದಿಂದ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿ ನೆರೆದಿದ್ದವರ ಮೊಗದಲ್ಲಿ ಹರ್ಷ. ನಾಲ್ಕು ಪಲ್ಲು, 4 ಮ್ಯಾಚಿಂಗ್‌ ಬಾರ್ಡರ್‌ಗಳುಳ್ಳ ‘ಗ್ರಾಂಡ್‌ ರಿವರ್ಸಿಬಲ್‌’ ಸೀರೆಯನ್ನು ಆಕರ್ಷಕವಾಗಿ ತೊಟ್ಟಿದ್ದರಿಂದೇನೋ ಅವರ ಸೌಂದರ್ಯ ಇಮ್ಮಡಿಗೊಂಡಿತ್ತು.

ಈಚೆಗೆ ನಡೆದ ಲ್ಯಾಕ್ಮಿ ಫ್ಯಾಷನ್‌ ಷೋದಲ್ಲಿ ಆರ್‌ಎಂಕೆವಿಯ ಬಗೆ ಬಗೆ ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಹೊಸ ಮಾದರಿಗಳನ್ನು ಸುಶ್ಮಿತಾ ಜೊತೆ ಇತರ ರೂಪದರ್ಶಿಯರೂ ಪ್ರದರ್ಶಿಸಿದರು. ಈ ಸೀರೆಗಳನ್ನು ಪ್ರಖ್ಯಾತ ಡಿಸೈನರ್‌ ಸುನಿತಾ ಶಂಕರ್‌ ವಿನ್ಯಾಸಗೊಳಿಸಿದ್ದರು. 

ಈ ಷೋದಲ್ಲಿ ರೂಪದರ್ಶಿಯರು ಗುಲಾಬಿ, ಕಿತ್ತಳೆ ಬಣ್ಣದ ಉಡುಗೆಗಳಿಗೆ ಡ್ರೇಪ್ಸ್‌ ಹಾಗೂ ಸಿಲ್ಹೌಟ್‌ಗಳಿಂದ ಪ್ರಯೋಗ ಮಾಡಿ ಉಟ್ಟಿದ್ದರು. ಹಾಗೇ ಸಾಧಾರಣ ಬ್ಲೌಸ್‌ ಬದಲಾಗಿ ಶ್ರಗ್ಸ್‌, ಕೇಪ್ಸ್‌ ಬಳಸಿ ಪ್ರತಿ ಸೀರೆಯನ್ನು ವಿಭಿನ್ನವಾಗಿ ಜಂಪ್‌ಸೂಟ್‌, ಕ್ರಷ್ಡ್‌ ಟ್ರೌಸರ್ಸ್‌, ಸ್ಕರ್ಟ್ಸ್‌, ಪ್ಲೇಟೆಡ್‌ ಡ್ರೆಸೆಸ್‌ನಂತೆ ವಿನ್ಯಾಸ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !