ಮರಕ್ಕೆ ಬೈಕ್‌ ಡಿಕ್ಕಿ; ಯೋಧ ಸಾವು

ಭಾನುವಾರ, ಮೇ 26, 2019
27 °C

ಮರಕ್ಕೆ ಬೈಕ್‌ ಡಿಕ್ಕಿ; ಯೋಧ ಸಾವು

Published:
Updated:

ತಿಕೋಟಾ (ವಿಜಯಪುರ): ತಾಲ್ಲೂಕಿನ ಸೋಮದೇವರ ಹಟ್ಟಿ ಕ್ರಾಸ್ ಬಳಿ ಶುಕ್ರವಾರ ನಿಯಂತ್ರಣ ತಪ್ಪಿದ ಬೈಕ್‌, ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯೋಧರೊಬ್ಬರು ಮೃತಪಟ್ಟಿದ್ದಾರೆ.

ದಾಶ್ಯಾಳ ಗ್ರಾಮದ ಶರಣಯ್ಯ ಗುರುಪಾದಯ್ಯ ಮಠಪತಿ (29) ಮೃತಪಟ್ಟ ಯೋಧ.

‘12 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶರಣಯ್ಯ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಮದ್ಯದ ನಶೆಯಲ್ಲಿ ಬೈಕ್‌ ಚಲಾಯಿಸುತ್ತಿದ್ದ ಸಂದರ್ಭ, ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಲ್ಲಿ ಯೋಧನ ತಲೆಗೆ ಗಂಭೀರ ಗಾಯವಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ತಂದೆ, ಚಿಕ್ಕಪ್ಪ ಸಹ ಯೋಧರಾಗಿ ನಿವೃತ್ತಗೊಂಡಿದ್ದಾರೆ’ ಎಂದು ತಿಕೋಟಾ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !