ಪೌರಕಾರ್ಮಿಕರಿಂದ ರಕ್ತದಾನ

ಶುಕ್ರವಾರ, ಮೇ 24, 2019
26 °C

ಪೌರಕಾರ್ಮಿಕರಿಂದ ರಕ್ತದಾನ

Published:
Updated:
Prajavani

ಕೆ.ಆರ್.ಪುರ: ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಹಾಗೂ ಕೆ.ಆರ್‌.ಪುರ ತಾಲ್ಲೂಕು ಆಸ್ಪತ್ರೆ ಸಹಯೋಗದಲ್ಲಿ ಜಯ
ಕರ್ನಾಟಕ ಸಂಘಟನೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 30ಕ್ಕೂ ಹೆಚ್ಚು ಪೌರಕಾರ್ಮಿಕರು ರಕ್ತದಾನ ಮಾಡಿದರು.

ಪೌರಕಾರ್ಮಿಕರೊಂದಿಗೆ ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. 

ಮಧುಮೇಹ, ರಕ್ತದೊತ್ತಡ ಹಾಗೂ ಹಲ್ಲಿನ ಪರೀಕ್ಷೆ ನಡೆಸಿದ ವೈದ್ಯರ ತಂಡ ಆರೋಗ್ಯ ಸಮಸ್ಯೆ ಇರುವ ಪೌರಕಾರ್ಮಿಕರಿಗೆ ಉಚಿತ ಔಷಧ ವಿತರಿಸಿದರು. 

‘ಕಸ ಗುಡಿಸುವಾಗ ಕೈ ಗವಸು, ಬೂಟು ಧರಿಸಬೇಕು’ ಎಂದು ಡಾ.ಶಾಂತಾ ಪೌರಕಾರ್ಮಿಕರಿಗೆ ಕಿವಿಮಾತು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !