ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ

ಬುಧವಾರ, ಮಾರ್ಚ್ 27, 2019
26 °C

ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ

Published:
Updated:
Prajavani

ಬೆಂಗಳೂರು: ವೈಟ್‌ಫೀಲ್ಡ್‌ ಇಮ್ಮಡಿಹಳ್ಳಿಯ ಪ್ರಸನ್ನ ವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು.

ರಥೋತ್ಸವದ ಅಂಗವಾಗಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವರಿಗೆ ಒಂದು ವಾರದಿಂದ ಅಂಕುಧಾ
ರ್ಪಣ ಮತ್ತು ಧ್ವಜಾರೋಹಣ, ಸಿಂಹವಾಹನೋತ್ಸವ, ಹನುಮಂತೋತ್ಸವ, ಶೇಷವಾಹನೋತ್ಸವ, ಕಲ್ಯಾ
ಣೋತ್ಸವ ಮತ್ತು ರಾತ್ರಿ ಗರುಡೋತ್ಸವ ಸೇರಿದಂತೆ ವಿಶೇಷ ಪೂಜೆಗಳು ನಡೆದವು.

ಬುಧವಾರ ದೇವರಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳು ನಡೆದವು, ತಮಟೆ, ನಾದಸ್ವರದೋಂದಿಗೆ ಇಮ್ಮಡಿಹಳ್ಳಿ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥೋತ್ಸವ ಸಾಗಿತು.

ವೈಟ್‌ಫೀಲ್ಡ್‌, ರಾಮಗೊಂಡನಹಳ್ಳಿ, ನಾಗೋಂಡನಹಳ್ಳಿ, ಹಗದೂರು, ಚನ್ನಸಂದ್ರ  ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.

ತಹಶೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿ ರಾಮಲಕ್ಷ್ಮಯ್ಯ, ಧರ್ಮದರ್ಶಿ ಹನುಮಂತೇಗೌಡ, ಪಾಲಿಕೆ ಸದಸ್ಯ ಎಸ್. ಉದಯ್ ಕುಮಾರ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !