ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಖಾಸಗಿತನ ರಕ್ಷಣೆಯ ಖಾತರಿ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ71 ಮತ್ತು ಎ51 ಜೊತೆಗೆ ಅನುಭವಿಸಿ 'ಆಲ್ಟ್ ಝಡ್‌ ಲೈಫ್‌'

Last Updated 24 ಸೆಪ್ಟೆಂಬರ್ 2020, 17:35 IST
ಅಕ್ಷರ ಗಾತ್ರ

ಆಲ್ಟ್ ಝಡ್‌ ಲೈಫ್‌ನ ಭಾಗವಾಗಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಖಾಸಗಿತನದ ಸುರಕ್ಷತೆಗಾಗಿ 'ಕ್ವಿಕ್‌ ಸ್ವಿಚ್‌' ಹೆಸರಿನ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ನೀವು ಫೋನ್‌ನಲ್ಲಿ ಚಿತ್ರಗಳು, ಆ್ಯಪ್‌ಗಳು ಹಾಗೂ ಇನ್ನಷ್ಟು ಚಟುವಟಿಕೆಗಳಲ್ಲಿ ಇದ್ದಾಗ ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಕಾಣಬೇಕಾದ ಸ್ಕ್ರೀನ್‌ಗಳನ್ನು ಕ್ಷಣಾರ್ಧದಲ್ಲಿ ಬದಲಿಸಿಕೊಳ್ಳಬಹುದು. ಅದು ಸಹ ಪವರ್‌ ಬಟನ್‌ ಕೇವಲ ಎರಡು ಬಾರಿ ಒತ್ತುವ ಮೂಲಕ ಸಾಧ್ಯವಾಗುತ್ತದೆ.


ಸ್ಮಾರ್ಟ್‌ಫೋನ್‌ಗಳಂತೂ ನಮ್ಮ ಬದುಕಿನ ಅತ್ಯಮೂಲ್ಯ ಭಾಗವೇ ಆಗಿ ಹೋಗಿವೆ. ಅವುಗಳು ಇಲ್ಲದೆಯೇ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಹೊಸ ತಲೆಮಾರಿನವರು ಮತ್ತು ಮಿಲೇನಿಯಲ್ಸ್‌ಗಳು ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ತಮ್ಮ ಬಹುತೇಕ ಎಲ್ಲ ಕಾರ್ಯಗಳು ಹಾಗೂ ಆಟ ಎರಡನ್ನೂ ತೂಗಿಸಿಕೊಂಡು ಹೋಗಲು ಅವುಗಳಿಗೆ ಮೊರೆ ಹೋಗಿದ್ದಾರೆ.

ಊಹಿಸಿಕೊಳ್ಳಿ ನೀವು ದಿನದ ಸಮಯದಲ್ಲಿ ಪತ್ರಕರ್ತನಾಗಿರುತ್ತೀರಿ ಹಾಗೂ ಅನಂತರದ ಅವಧಿಯಲ್ಲಿ ಡಿಜೆ ಆಗಿರುವಿರಿ. ನಿಮ್ಮ ಫೋನ್‌ನಲ್ಲಂತೂ ಕಾರ್ಯಾಚರಣೆಗೆ ಸಂಬಂಧಿಸಿದ ಬಹಳ ಮುಖ್ಯವಾದ ಮಾಹಿತಿಗಳಿಂದ ಹಿಡಿದು ಖಾಸಗಿ ಫೋಟೊಗಳ ವರೆಗೂ ಸಾಕಷ್ಟು ಇರುತ್ತವೆ. ನಿಮ್ಮ ಫೋನ್‌ನನ್ನು ಮತ್ತೊಬ್ಬರು ಇಣುಕಿ ನೋಡಿ ಬಿಡುವ ಬಗ್ಗೆ ನೀವು ಎಷ್ಟು ತಳಮಳ ಅನುಭವಿಸಬಹುದು? ಆಗಲೇ ಖಾಸಗಿತನದ ಸುರಕ್ಷತೆಯ ವಿಚಾರ ಮುನ್ನೆಲೆಗೆ ಬರುತ್ತದೆ.

ಖಾಸಗಿತನದ ಸುರಕ್ಷತೆ ಎಂಬುದು ಕೇವಲ ಹೊರಗಿನವರೊಂದಿಗೆ ಮಾತ್ರವೇ ಸೀಮಿತವಾಗಿರುವುದಿಲ್ಲ; ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಂದಲೂ ಮಾಹಿತಿಯನ್ನು ಗೌಪ್ಯವಾಗಿಡುವುದೂ ಸೇರಿರುತ್ತದೆ. ನಾವು, ಮಿಲೇನಿಯಲ್ಸ್‌, ನಮ್ಮ ಫೋನ್‌ಗಳನ್ನು ಬೇರೆಯವರಿಗೆ ಕೊಡುವುದೆಂದರೆ ಬಹಳ ಎಚ್ಚರಿಕೆ ವಹಿಸುತ್ತೇವೆ. ಅಕಸ್ಮಾತ್‌ ನಾವು ಬೇರೆಯವರಿಗೆ ಫೋನ್‌ ಕೊಟ್ಟರೆ, ಅವರೇನಾದರೂ ನಮ್ಮ ಖಾಸಗಿ ಮಾಹಿತಿಯನ್ನು ನೋಡಿ ಬಿಡುವರೇ ಎಂದು ನಿರಂತರವಾಗಿ ಆತಂಕಕ್ಕೆ ಒಳಗಾಗಿರುತ್ತೇವೆ.

ಹಾಗಾಗಿಯೇ ಸ್ಯಾಮ್‌ಸಂಗ್‌ ಉದ್ಯಮದಲ್ಲಿಯೇ ಮೊದಲ ಬಾರಿಗೆ ಖಾಸಗಿತನದ ಸುರಕ್ಷತೆಗಾಗಿ ಅತ್ಯಾಧುನಿಕವಾದ ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಸೌಲಭ್ಯಗಳನ್ನು ಗ್ಯಾಲಕ್ಸಿ ಎ71 ಮತ್ತು ಗ್ಯಾಲಕ್ಸಿ ಎ51 ಮಾದರಿ ಫೋನ್‌ಗಳಲ್ಲಿ ಪರಿಚಯಿಸಿದೆ. ಗ್ರಾಹಕರಿಗೆ ಸದಾ ಹೊಸ ಸೌಲಭ್ಯಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್‌ ಕಂಪನಿಯು 'ಮೇಕ್‌ ಇನ್‌ ಇಂಡಿಯಾ' ಅಭಿಯಾನದ ಅಡಿಯಲ್ಲಿ ಈ ಅತ್ಯಾಧುನಿಕ ಗುಣಲಕ್ಷಣಗಳನ್ನು ಹೊರತಂದಿದೆ. ಅವುಗಳಿಂದಾಗಿ ಬಳಕೆದಾರರಲ್ಲಿ, ಅದರಲ್ಲೂ ಹೊಸ ತಲೆಮಾರಿನವರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಾಗ ಏಳುವ ತಳಮಳವನ್ನು ದೂರ ಮಾಡುತ್ತದೆ. ಆ ಮೂಲಕ ಅವರಿಗೆ ಆಲ್ಟ್‌ ಝಡ್‌ ಲೈಫ್‌ ಬದುಕಲು ಅವಕಾಶ ಮಾಡಿಕೊಡುತ್ತವೆ.

ಸಂಪೂರ್ಣ ಸ್ವತಂತ್ರರಾಗಿ ನೀವು ಬಯಸಿದಂತೆ ಇರುವುದು, ನಿಮ್ಮ ಖಾಸಗಿತನಕ್ಕೆ ಮತ್ತೊಬ್ಬರಿಂದ ತೊಂದರೆಯಾಗಬಹುದು ಎಂಬ ಆತಂಕಗಳು ಇಲ್ಲದಂತೆ ಬದುಕುವುದೇ ಆಲ್ಟ್‌ ಝಡ್‌ ಲೈಫ್‌. ಆ ಬಗ್ಗೆ ಇನ್ನಷ್ಟು ತಿಳಿಯೋಣ.

ನಿಮ್ಮ ಬೆರಳ ತುದಿಯಲ್ಲಿಯೇ ಖಾಸಗಿತನದ ಸುರಕ್ಷತೆ

ಮಿಲೇನಿಯನ್ಸ್‌ ಹಾಗೂ ಹೊಸ ತಲೆಮಾರಿನವರು ಬಹಳಷ್ಟು ಸೆಲ್ಫಿಗಳು ಹಾಗೂ ವಿಡಿಯೊಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದೆ. ಆದರೆ, ಅವುಗಳನ್ನು ಬೇರೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಅದಕ್ಕಾಗಿ ಮುಂಚೆ ಇದ್ದ ಒಂದೇ ಒಂದು ಆಯ್ಕೆ ಎಂದರೆ, ಗ್ಯಾಲರಿಯನ್ನು ಲಾಕ್‌ ಮಾಡುವುದು. ಅಕಸ್ಮಾತ್‌ ನಿಮ್ಮ ಸ್ನೇಹಿತ ಅದರ ಪಾಸ್‌ವರ್ಡ್‌ ಕೇಳಿದರೆ, ನೀವು ಏನು ಮಾಡುವಿರಿ? ನಿಮಗೆ ಇರುಸು ಮುರುಸು ಆದರೂ ಸಹ ಪಾಸ್‌ವರ್ಡ್‌ ಕೊಟ್ಟು ಬಿಡುವ ಸಾಧ್ಯತೆಯೇ ಹೆಚ್ಚು, ಅಲ್ಲಿಗೆ ನಿಮ್ಮ ಖಾಸಗಿ ಮಾಹಿತಿ ಹೊರಹೋದಂತೆಯೇ!

ಕ್ವಿಕ್‌ ಸ್ವಿಚ್‌ ಇರುವಾಗ ಆ ಬಗ್ಗೆ ನೀವು ಯೋಚಿಸಬೇಕಿಲ್ಲ. ಪವರ್‌ ಬಟನ್‌ ಎರಡು ಬಾರಿ ಒತ್ತುವ ಮೂಲಕ ಬಳಸುತ್ತಿರುವ ಆ್ಯಪ್‌ಗಳು, ಚಿತ್ರಗಳು ಅಥವಾ ಇನ್ನಾವುದನ್ನೂ ಖಾಸಗಿ ಸ್ಕ್ರೀನ್‌ನಿಂದ ಸಾರ್ವಜನಿಕವಾಗಿ ಕಾಣಬಹುದಾದ ಸ್ಕ್ರೀನ್‌ಗೆ ಬದಲಿಸಿಕೊಳ್ಳಬಹುದು.

ಈಗೊಂದು ಉದಾಹರಣೆ ತೆಗೆದುಕೊಳ್ಳೋಣ. ನೀವು ಕಚೇರಿಯಲ್ಲಿದ್ದೀರ ಹಾಗೂ ಸಹೋದ್ಯೋಗಿಗೆ ಫೋನ್‌ನಲ್ಲಿ ನಿಮ್ಮ ಬಾಸ್‌ ಬಗ್ಗೆ ನೀವೇ ಮಾಡಿರುವ ಮೀಮ್‌ ತೋರಿಸುತ್ತಿರುವಿರಿ. ಆದರೆ ಅದೇ ಸಮಯಕ್ಕೆ ಏನಾಗುತ್ತೆ ಗೊತ್ತ? ನಿಮ್ಮ ಬಾಸ್‌ ನಿಮ್ಮ ಕಡೆಗೇ ನಡೆದು ಬಂದಿರುತ್ತಾರೆ, ನಿಮ್ಮ ಫೋನ್‌ ನೋಡಲು ಕೇಳುತ್ತಾರೆ. ಆಗ ನೀವೇನು ಮಾಡುವಿರಿ?

ಏನು ಮಾಡಬೇಕೆಂದು ನಟಿ ರಾಧಿಕಾ ಮದನ್‌ ಅವರಿಂದ ತಿಳಿಯಿರಿ, ಅವರು ಅಂಥದ್ದೇ ಒಂದು ಸಂದರ್ಭದಲ್ಲಿ ಕ್ವಿಕ್‌ ಸ್ವಿಚ್‌ ಬಳಸುವ ಮೂಲಕ ಸಂಕಷ್ಟದಿಂದ ಪಾರಾಗುತ್ತಾರೆ.

ರಾಧಿಕಾ ತನ್ನ ಗೆಳೆಯ ಮತ್ತು ಸೋದರಿಯೊಂದಿಗೆ ಇದ್ದ ಸಮಯದಲ್ಲಿ ಈ ಅತ್ಯಾಧುನಿಕ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಖಾಸಗಿ ಮಾಹಿತಿ ರಕ್ಷಿಸಿಕೊಳ್ಳುತ್ತಾರೆ. ನಮಗೆಲ್ಲ ತಿಳಿದೇ ಇದೆ, ಇಣುಕಿ ನೋಡುವ ಮೂಲಕ ನಾವು ನಮ್ಮ ಫೋನ್‌ಗಳಲ್ಲಿ ಮಾಡುತ್ತಿರುವುದು ಏನೆಂದು ತಿಳಿಯುವುದು ಕೆಲವರಿಗೆ ಬಹಳ ಮುದ ನೀಡುವ ಸಂಗತಿಯಾಗಿರುತ್ತದೆ, ಅಲ್ಲವೇ? ಇನ್ನಷ್ಟು ತಿಳಿಯಲು ವಿಡಿಯೊ ನೋಡಿ.

ಯಾವತ್ತಿಗೂ ಕಂಡಿರದ ಹೊಸ ಅನ್ವೇಷಣೆಗಳನ್ನು ಪರಿಚಯಿಸುವುದರಿಂದಲೇ ಸ್ಯಾಮ್‌ಸಂಗ್‌ ಗುರುತಿಸಿಕೊಂಡಿದೆ, ಹಾಗೂ ಈಗ ಕ್ವಿಕ್‌ ಸ್ವಿಚ್‌ ಸೌಲಭ್ಯದ ಮೂಲಕ ಅದನ್ನು ಮತ್ತೆ ಸಾಬೀತು ಪಡಿಸಿಕೊಂಡಿದೆ. ಇದು ಅತ್ಯಂತ ಅನುಕೂಲಕರ, ನಾಜೂಕಾದ ಹಾಗೂ ವಿವೇಚನೆಯುತ ಅನುಭವವನ್ನು ನೀಡುತ್ತದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ71 ಮತ್ತು ಎ51 ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ 'ಕ್ವಿಕ್‌ ಸ್ವಿಚ್‌' ನಿಮಗೆ ಮತ್ತೆಲ್ಲೂ ಸಿಗದಂತಹ ಆಲ್ಟ್‌ ಝಡ್‌ ಲೈಫ್‌ನ ಅನುಭವ ನೀಡುತ್ತದೆ.

ಕ್ವಿಕ್‌ ಸ್ವಿಚ್‌ನ ಮುಂದುವರಿದ ಭಾಗವಾಗಿ ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಸಹ ಇದೆ. ಇದೊಂದು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಧನದೊಳಗೆ ಅಳವಡಿಸಲಾಗಿರುವ ವ್ಯವಸ್ಥೆಯಾಗಿದ್ದು, ಖಾಸಗಿ ಫೋಲ್ಡರ್‌ಗೆ ವರ್ಗಾಯಿಸಬೇಕಾದ ಚಿತ್ರಗಳನ್ನು ತಾನಾಗಿಯೇ ಗುರುತಿಸಿ ಸಲಹೆ ನೀಡುತ್ತದೆ. ಸ್ಯಾಮ್‌ಸಂಗ್‌ ನಾಕ್ಸ್‌ನಿಂದಾಗಿ ಖಾಸಗಿ ಫೋಲ್ಡರ್‌ ಸುರಕ್ಷಿತವಾಗಿದೆ. ನೀವು ವ್ಯಕ್ತಿ ಮತ್ತು ಅವರ ಮುಖ ಹಾಗೂ ಚಿತ್ರಗಳ ವಿಧಗಳನ್ನು ನಿಗದಿ ಪಡಿಸುವ ಮೂಲಕ ಅವುಗಳನ್ನು ಖಾಸಗಿ ಎಂದು ಟ್ಯಾಗ್‌ ಮಾಡಬಹುದು. ಅನಂತರ, ಕಂಟೆಂಟ್‌ ಸಜೆಷನ್ಸ್‌ ತಾನಾಗಿಯೇ ಫೋಟೊಗಳ ಪೈಕಿ ಖಾಸಗಿ ಗ್ಯಾಲರಿಗೆ ವರ್ಗಾಯಿಸಬೇಕಾದ ಚಿತ್ರಗಳನ್ನು ಗುರುತಿಸಿ ಸಲಹೆ ಮಾಡುತ್ತದೆ. ಆ ಫೋಲ್ಡರ್‌ಗೆ ನಿಮ್ಮನ್ನು ಬಿಟ್ಟು ಬೇರೆ ಯಾರೂ ಸಹ ಪ್ರವೇಶಿಸಲು ಸಾಧ್ಯವಿರುವುದಿಲ್ಲ.

ಒಳ್ಳೆಯ ಬೆಲೆಗೆ ಅತ್ಯಾಧುನಿಕ ಸೌಲಭ್ಯಗಳು

ಮತ್ತೊಮ್ಮೆ ಸ್ಯಾಮ್‌ಸಂಗ್‌ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಸೌಲಭ್ಯಗಳನ್ನು ಉತ್ತಮ ಬೆಲೆಗಳಲ್ಲಿ ಪರಿಚಯಿಸಿದೆ.

ಎರಡೂ ಮಾದರಿಯ ಫೋನ್‌ಗಳಲ್ಲಿಯೂ ಇನ್ಫಿನಿಟಿ–ಒ ಎಸ್‌ಅಮೊಲೆಡ್‌ ಪ್ಲಸ್‌ ಡಿಸ್‌ಪ್ಲೇ, ಸ್ಲೀಕ್‌ ಪ್ರಿಸಮ್‌ ಕ್ರಷ್‌ ವಿನ್ಯಾಸ, ಕ್ವಾಡ್‌ ಕ್ಯಾಮೆರಾ (ನಾಲ್ಕು ಕ್ಯಾಮೆರಾ) ಮಾದರಿ, ಸಿಂಗಲ್‌ ಟೇಕ್‌ ಮತ್ತು ನೈಟ್‌ ಹೈಪರ್‌ಲ್ಯಾಪ್ಸ್ ರೀತಿಯ ಅತ್ಯಾಧುನಿಕ ಕ್ಯಾಮೆರಾ ಗುಣಲಕ್ಷಣಗಳನ್ನು ಒಳಗೊಂಡ ಪ್ರೀಮಿಯಂ ಸೌಲಭ್ಯಗಳನ್ನು ಅಳವಡಿಸಲಾಗಿದೆ.

'ಸಿಂಗಲ್‌ ಟೇಕ್‌' ಸೌಲಭ್ಯದ ಮೂಲಕ ಕೇವಲ 3–10 ಸೆಕೆಂಡ್‌ಗಳ ವರೆಗೂ ರೆಕಾರ್ಡ್‌ ಮಾಡಿ ಒಂದೇ ಸಮಯಕ್ಕೆ 14 ರೀತಿಯ ಫೋಟೊಗಳು ಮತ್ತು ವಿಡಿಯೊಗಳನ್ನು (10 ಫೋಟೊಗಳು ಹಾಗೂ 4 ವಿಡಿಯೊಗಳು) ಸೆರೆ ಹಿಡಿಯಬಹುದಾಗಿದೆ. ಕಿರು ಚಿತ್ರಗಳು, ಜಿಫ್ ಆ್ಯನಿಮೇಷನ್‌ಗಳು ಹಾಗೂ ಸ್ಟೈಲೈಜ್ಡ್‌ ಇಮೇಜ್‌ಗಳು ಸೇರಿ ಇನ್ನಷ್ಟು ಬಗೆಯ ವಿಡಿಯೊ ಮತ್ತು ಚಿತ್ರಗಳನ್ನು ತೆಗೆಯಬಹುದಾಗಿದೆ. ಈ ಎಲ್ಲವೂ ಒಂದೇ ಆಲ್ಬಮ್‌ನಲ್ಲಿ ಕಾಣಲು ಸಿಗುವುದು ಮತ್ತೊಂದು ವೈಶಿಷ್ಟ್ಯವಾಗಿದೆ. ಆ ಆಲ್ಬಮ್‌ನಿಂದ ನೀವು ಆಯ್ಕೆ ಮಾಡಿ ಪ್ರಕಟಿಸಿದರೆ ಸಾಕು, ಸಾಮಾಜಿಕ ಮಾಧ್ಯಮಗಳಲ್ಲಿ ಆ ಚಿತ್ರಗಳೇ ಮಾತನಾಡುತ್ತವೆ.

'ನೈಟ್‌ ಹೈಪರ್‌ಲ್ಯಾಪ್ಸ್‌' ಮೂಲಕ ಕಡಿಮೆ ಬೆಳಕಿನಲ್ಲಿಯೂ ಉತ್ತಮವಾದ ಹೈಪರ್‌ಲ್ಯಾಪ್ಸ್‌ ವಿಡಿಯೊಗಳನ್ನು ಚಿತ್ರೀಕರಿಸಬಹುದಾಗಿದೆ. ಮಧ್ಯರಾತ್ರಿ ಸಂಚಾರ ಮಾಡುತ್ತ ಚಿತ್ರೀಕರಣ ಮಾಡಲು ಇಷ್ಟಪಡುವವರಿಗೆ ಈ ಸೌಲಭ್ಯವು ಉಪಯುಕ್ತವಾಗಲಿದೆ. ರಾತ್ರಿಯ ಬದುಕಿನಿಂದಲೇ ಜನಪ್ರಿಯವಾಗಿರುವ ನಗರಗಳಿಗೆ ಭೇಟಿ ನೀಡಲು ಯೋಜಿಸಿದ್ದರೆ, ಅಲ್ಲಿ ಈ ಫೋನ್‌ಗಳ ಮೂಲಕ ಚಿತ್ರೀಕರಿಸುವ ಇರುಳಿನ ನಗರ ಜೀವನದ ವಿಡಿಯೊಗಳು ಅತ್ಯದ್ಭುತವಾಗಿರಲಿವೆ.

ಗ್ಯಾಲಕ್ಸಿ ಎ71 ಫೋನ್‌ಗಳಲ್ಲಿ ಬ್ಯಾಟರಿ ಬಾಳಿಕೆ ಅವಧಿ ಸಹ ಪ್ರಮುಖ ಅಂಶಗಳಲ್ಲೊಂದು. 4,500 ಎಂಎಎಚ್‌ ಬ್ಯಾಟರಿಯು ದಿನಕ್ಕಿಂತಲೂ ಹೆಚ್ಚು ಅವಧಿ ಚಾರ್ಜ್‌ ಉಳಿಸಿಕೊಂಡಿರುತ್ತದೆ. ವಿಡಿಯೊ ನೋಡುವುದು, ಗೇಮ್ಸ್‌ ಆಡುವುದು– ಹೀಗೆ ನಿಮಗೆ ಅನಿಸುವ ಎಲ್ಲವನ್ನೂ ಯಾವುದೇ ಅಡಚಣೆ ಇಲ್ಲದೆ ಮಾಡಬಹುದು. ಫೋನ್‌ ಹಿಂಬದಿಯಲ್ಲಿ 64ಎಂಪಿ ಕ್ಯಾಮೆರಾ, 25 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಹಾಗೂ 6.7 ಇಂಚು ಅಮೊಲೆಡ್‌ ಡಿಸ್‌ಪ್ಲೇ ನೀಡಲಾಗಿದೆ.

ಗ್ಯಾಲಕ್ಸಿ ಎ51 ಸಹ ಎ71 ರೀತಿಯ ವಿನ್ಯಾಸವನ್ನೇ ಒಳಗೊಂಡಿದ್ದು, ಅಳತೆಯಲ್ಲಿ ಎ71 ಮಾದರಿಗಿಂತ ಚಿಕ್ಕದಾಗಿದೆ. 6.5 ಇಂಚು ಅಮೊಲೆಡ್‌ ಡಿಸ್‌ಪ್ಲೇ, 48ಎಂಪಿ ಕ್ಯಾಮೆರಾ, 4,000 ಎಂಎಎಚ್‌ ಬ್ಯಾಟರಿ ಜೊತೆಗೆ 15 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಹಾಗೂ ಒನ್‌ ಯುಐ 2.0 ಔಟ್‌ ಆಫ್‌ ದಿ ಬಾಕ್ಸ್‌ ಒಎಸ್‌ ವ್ಯವಸ್ಥೆ ಒಳಗೊಂಡಿದೆ.

ಹೆಚ್ಚುವರಿ ಸುರಕ್ಷತೆಗೆ ಸ್ಯಾಮ್‌ಸಂಗ್‌ ನಾಕ್ಸ್‌ (Knox)

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸಾಧನಗಳು ಸ್ಯಾಮ್‌ಸಂಗ್‌ ನಾಕ್ಸ್‌ ಮೂಲಕ ಸುರಕ್ಷಿತವಾಗಿವೆ.

ಹಲವು ಹಂತಗಳ ಡಿಫೆನ್ಸ್‌ ಗ್ರೇಡ್‌ ಸುರಕ್ಷತೆ ವ್ಯವಸ್ಥೆ 'ನಾಕ್ಸ್‌' ಮೂಲಕ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಹೆಚ್ಚುವರಿ ಸುರಕ್ಷತೆ ಒದಗಿಸುತ್ತಿದೆ. ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ ಚಿಪ್‌ನಲ್ಲಿಯೇ ಇದನ್ನು ಅಳವಡಿಸಲಾಗಿರುತ್ತದೆ. ನಾಕ್ಸ್‌ ಮಾಹಿತಿಯನ್ನು ಸುರಕ್ಷಿತವಾಗಿಡುತ್ತದೆ, ಎನ್‌ಕ್ರಿಪ್ಟ್‌ ಮಾಡುವುದು, ಗೌಪ್ಯವಾದ ಫೈಲ್‌ಗಳನ್ನು ಸುರಕ್ಷಿತವಾಗಿಡುವುದು, ಸ್ಯಾಮ್‌ಸಂಗ್‌ ಪೇ ವಹಿವಾಟುಗಳು, ಪಾಸ್‌ವರ್ಡ್‌ಗಳು, ಚಿತ್ರಗಳು, ವಿಡಿಯೊಗಳು ಹಾಗೂ ಫೋನ್‌ನ ಆರೋಗ್ಯವನ್ನು ಸುರಕ್ಷಿತವಾಗಿಡುತ್ತದೆ.

ಈ ಫೋನ್‌ಗಳು ಏನೇನೆಲ್ಲ ನೀಡಬಹುದೆಂದು ನಿಮಗೀಗ ತಿಳಿದಿದೆ, ನೀವೀಗ ಆಲ್ಟ್‌ ಝಡ್‌ ಲೈಫ್‌ ಅನುಭವಿಸಲು ಸಿದ್ಧವಿದ್ದೀರಾ? ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳು ರಿಟೇಲ್‌ ಮಳಿಗೆಗಳು, ಸ್ಯಾಮ್‌ಸಂಗ್‌.ಕಾಮ್‌, ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಈಗ ಕ್ಯಾಷ್‌ಬ್ಯಾಕ್‌ ಕೊಡುಗೆಗಳೂ ಸಹ ಅನ್ವಯವಾಗುತ್ತಿವೆ: ಗ್ಯಾಲಕ್ಸಿ ಎ71 ಫೋನ್‌ ಮೇಲೆ ₹2,600ರ ವರೆಗೂ ಹಾಗೂ ಗ್ಯಾಲಕ್ಸಿ ಎ51 ಫೋನ್‌ ಮೇಲೆ ₹1,500ರ ವರೆಗೂ ಕ್ಯಾಷ್‌ಬ್ಯಾಕ್‌ ಇದೆ.

ಇದು ಸೀಮಿತ ಅವಧಿಯ ಕೊಡುಗೆಯಾಗಿದೆ, ಹೀಗಾಗಿ ಇನ್ನಷ್ಟು ದಿನ ಕಾಯುವುದು ಬೇಡ!

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT