ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ನೌಕರರ ಮುಷ್ಕರ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವೇತನ ಪರಿಷ್ಕರಣೆಗೆ ಒತ್ತಾಯಿಸಿ   ಇದೇ ಬುಧ­ವಾರ (ಡಿ. 18) ಬ್ಯಾಂಕ್‌ ನೌಕರರ ಮುಷ್ಕರವನ್ನು ಹಮ್ಮಿಕೊ­ಳ್ಳಲಾಗಿದೆ’ ಎಂದು ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆಯ ರಾಜ್ಯ ಘಟಕದ ಜಂಟಿ ಸಂಚಾಲಕ ಅ.ನ.ಕೃಷ್ಣಮೂರ್ತಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಇದೇ ಬುಧವಾರ (ಡಿ. 18) ರಾಜ್ಯ ಘಟಕದ ವತಿಯಿಂದ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗುವುದು ಎಂದರು.

ಡಿಸೆಂಬರ್‌, 2012ರಿಂದಲೇ ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆ­ಯಾ­ಗಬೇಕಿದೆ. ಆದರೆ, ವೇತನ ಪರಿಷ್ಕ­ರಣೆ­ಯಲ್ಲಿ ಭಾರತೀಯ ಬ್ಯಾಂಕುಗಳ ಸಂಘವು ವಿಳಂಬ ನೀತಿಯನ್ನು ಅನುಸರಿ­ಸುತ್ತಿದೆ. ಇದರಿಂದಾಗಿ ಮುಷ್ಕರ ಅನಿವಾ­ರ್ಯವಾಗಿದೆ ಎಂದು ಹೇಳಿದರು.

ವೇತನ ಪರಿಷ್ಕರಣೆ ಕುರಿತಂತೆ ಭಾರ­ತೀಯ ಬ್ಯಾಂಕುಗಳ ಸಂಘದ ಜೊತೆಗೆ ಡಿ.14 ರಂದು ನಡೆಸಿದ ಸಭೆಯು ವಿಫಲವಾ­ಗಿದೆ. ಬ್ಯಾಂಕ್‌­ಗಳಲ್ಲಿ  ಕೆಲಸದ ಒತ್ತಡದಿಂದಾಗಿ ನೌಕರರು ಆರೋಗ್ಯ ಸಮಸ್ಯೆಯನ್ನು ಎದುರಿಸು­ತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ­ಯಿಂದಾಗಿ ನೌಕರರ ಜೀವನ ನಿರ್ವಹಣೆ ಕಷ್ಟವಾ­ಗಿದೆ.  ಶೀಘ್ರ ವೇತನ ಪರಿಷ್ಕ­ರಣೆಗೆ ಮುಂದಾ­­ಗಬೇಕು. ಸಾರ್ವ­ಜನಿಕ ಕ್ಷೇತ್ರದ ಬ್ಯಾಂಕು­ಗಳನ್ನು ಮಟ್ಟ­ಹಾ­ಕಲು ಕೇಂದ್ರ ಸರ್ಕಾ­ರವು ಜನ ವಿರೋಧಿ ಬ್ಯಾಂಕಿಂಗ್‌ ಕ್ಷೇತ್ರದ ಸುಧಾ­ರಣೆಗೆ ಮುಂದಾಗಿದೆ. ಸರ್ಕಾರ ಕೂಡಲೇ ಈ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT