ನವದೆಹಲಿ: ದೇಶದ ನೋಟು ಮುದ್ರಣ ಕೇಂದ್ರಗಳಲ್ಲಿ ವಾರದ ಎಲ್ಲ ದಿನ, ನಿರಂತರವಾಗಿ 24 ಗಂಟೆ ನೋಟು ಮುದ್ರಿಸುವ ಕಾರ್ಯ ನಡೆಯುತ್ತಿದೆ.

₹70 ಸಾವಿರ ಕೋಟಿ ನಗದು ಕೊರತೆ ನೀಗಿಸುವ ಸಲುವಾಗಿ ದೇಶದಲ್ಲಿನ ನಾಲ್ಕು ಮುದ್ರಣಾಲಯಗಳಲ್ಲಿ ₹500 ಮತ್ತು ₹200 ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಪಿಎಂಸಿಐಎಲ್)ನ ಮುದ್ರಣಾಲಯಗಳು ಸಾಮಾನ್ಯವಾಗಿ ನಿತ್ಯ 18–19 ಗಂಟೆ ಕಾರ್ಯನಿರ್ವಹಿಸುತ್ತವೆ. ಇದೀಗ ತಲೆದೋರಿರುವ ನಗದು ಕೊರತೆಯಿಂದಾಗಿ ವಿರಾಮ ತೆಗೆದುಕೊಳ್ಳದೆ ಕಾರ್ಯಾಚರಿಸಲಿವೆ.

ಮುದ್ರಣಗೊಂಡ ನೋಟುಗಳು ಜನರಿಗೆ ತಲುಪಲು 15 ದಿನ ಬೇಕಾಗುತ್ತದೆ. ಅಂದರೆ, ಈಗ ಮುದ್ರಣಗೊಳ್ಳುತ್ತಿರುವ ನೋಟುಗಳು ತಿಂಗಳ ಅಂತ್ಯಕ್ಕೆ ವಹಿವಾಟಿಗೆ ಸಿಗಲಿವೆ.

ಈ ಹಿಂದೆ ₹1000, ₹500 ಮುಖಬೆಲೆಯ ನೋಟುಗಳು ರದ್ದುಗೊಂಡ ಬಳಿಕ ₹2000 ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕಾಗಿ ಎಸ್‌ಪಿಎಂಸಿಐಎಲ್ 24*7 ಕಾರ್ಯನಿರ್ವಹಿಸಿತ್ತು ಎಂದಿದ್ದಾರೆ.

ಇನ್ನಷ್ಟು: ಕೊರತೆ ನೀಗಲು ಬೇಕು ತಿಂಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.