ಮೌಲ್ಯದ ಲೆಕ್ಕದಲ್ಲಿ ವಸೂಲಾಗದ ಸಾಲ ₹ 61,430 ಕೋಟಿಯಿಂದ ₹ 1.02 ಲಕ್ಷ ಕೋಟಿಗೆ ಭಾರಿ ಏರಿಕೆ ಕಂಡಿದೆ. ತೆರಿಗೆ ರಹಿತ ವರಮಾನ ಶೇ 29.75 ರಷ್ಟು ಇಳಿಕೆ ಕಂಡಿದ್ದು, ₹ 11,507 ಕೋಟಿಗಳಿಂದ ₹ 8,084 ಕೋಟಿಗಳಿಗೆ ತಗ್ಗಿದೆ. ಶುಲ್ಕ ರಹಿತ ವರಮಾನ ಶೇ 18.38 ರಷ್ಟು ಕಡಿಮೆ ಆಗಿದ್ದು, ₹ 14,401 ಕೋಟಿಗಳಿಂದ ₹ 11,755 ಕೋಟಿಗೆ ಇಳಿಕೆ ಕಂಡಿದೆ. ಶುಲ್ಕದಿಂದ ಬಂದಿರುವ ವರಮಾನ ₹ 4,710 ಕೋಟಿಗಳಿಂದ ₹ 4,979 ಕೋಟಿಗೆ ಶೇ 5.71 ರಷ್ಟು ಹೆಚ್ಚಾಗಿದೆ.