ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ಕೇಂದ್ರ ಬಜೆಟ್‌ನ ಸಂಪೂರ್ಣ ಮಾಹಿತಿ
LIVE

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಲಿದ್ದಾರೆ.ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ ಅನ್ನು ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಎದುರು ನೋಡುತ್ತಿದೆ. ಭಾರತ ಮೊದಲು, ನಾಗರಿಕರು ಮೊದಲು' ಎಂಬ ಚಿಂತನೆಯೊಂದಿಗೆ ಬಜೆಟ್‌ ಅಧಿವೇಶನವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹೊಸ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣವು ಶೇಕಡ 6 ರಿಂದ ಶೇ 6.8ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯು ಅಂದಾಜಿಸಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇಕಡ 8.7ರಷ್ಟು ಬೆಳವಣಿಗೆ ಕಂಡಿತ್ತು. ಮಾರ್ಚ್‌ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 7ರಷ್ಟು ಇರುವ ನಿರೀಕ್ಷೆ ಇದೆ.
Last Updated 1 ಫೆಬ್ರುವರಿ 2023, 10:13 IST
ಅಕ್ಷರ ಗಾತ್ರ
10:1101 Feb 2023

ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ... 

08:5601 Feb 2023

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ

07:2701 Feb 2023
07:1001 Feb 2023

ಸ್ಟಾರ್ಟ್‌ಅಪ್‌ಗಳ ನಷ್ಟದ ಪರಿಹಾರವನ್ನು 10 ವರ್ಷಗಳವರೆಗೆ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. 

ಪ್ರಯೋಗಾಲಯದಲ್ಲಿ ಬೆಳೆದ ಹವಳಕ್ಕೆ ಬಳಸಲಾಗುವ ಬೀಜಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. 
 

07:0801 Feb 2023
07:0501 Feb 2023

ಸಿಗರೇಟ್ ಮೇಲಿನ ತೆರಿಗೆ ಶೇ 16ಕ್ಕೆ

ತಾಮ್ರದ ತ್ಯಾಜದ ಮೇಲಿನ ಶೇ 2.5 ರಿಯಾಯಿತಿಯ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರ ಮುಂದುವರಿಸಲಿದೆ. 

ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿದೆ. 

ಸಿಗರೇಟ್ ಮೇಲಿನ ತೆರಿಗೆಯನ್ನು ಶೇ 16ಕ್ಕೆ ಹೆಚ್ಚಿಸಲಾಗಿದೆ.

ರಬ್ಬರ್ ಮೇಲಿನ ಮೂಲ ಆಮದು ಸುಂಕವನ್ನು 10 ಪಿಸಿಯಿಂದ 25 ಪಿಸಿಗೆ ಹೆಚ್ಚಿಸಲಾಗಿದೆ.

ಚಿನ್ನದಿಂದ ತಯಾರಿಸಿದ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ. 

06:5801 Feb 2023

ಮೊಬೈಲ್‌ ಬಿಡಿಭಾಗಗಳ ಮೇಲಿನ ತೆರಿಗೆ ಕಡಿತ

ಅಡುಗೆಮನೆಯ ಎಲೆಕ್ಟ್ರಿಕ್ ಚಿಮಣಿ ಮೇಲಿನ ಕಸ್ಟಮ್ಸ್ ಸುಂಕ ಶೇ 7.5 ರಿಂದ ಶೇ 15ಕ್ಕೆ  ಏರಿಕೆ

ಮೊಬೈಲ್ ಫೋನ್ ಉತ್ಪಾದನೆಯು 2014-15ರಲ್ಲಿ 5.8 ಕೋಟಿ ಯುನಿಟ್‌ಗಳಿಂದ ಕಳೆದ ಹಣಕಾಸು ವರ್ಷದಲ್ಲಿ 31 ಕೋಟಿ ಯೂನಿಟ್‌ಗಳಿಗೆ ಏರಿಕೆಯಾಗಿದೆ

ಟಿವಿ ಪ್ಯಾನಲ್‌ಗಳ ತೆರೆದ ಸೆಲ್‌ಗಳ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ. 2.5ಕ್ಕೆ ಇಳಿಕೆ. 

ಮೊಬೈಲ್ ಫೋನ್ ತಯಾರಿಕೆಗೆ ಬೇಕಾದ ವಸ್ತುಗಳ ಮೇಲಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿದೆ. 

‘ಇವಿ’ಗಳನ್ನು ಪ್ರೋತ್ಸಾಹಿಸಲು ಹೆಚ್ಚಿಸಲು ಪರೋಕ್ಷ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆ. 

ಮುಂದಿನ ಹಣಕಾಸು ವರ್ಷಕ್ಕೆ 23.3 ಲಕ್ಷ ಕೋಟಿ ರೂಪಾಯಿ ತೆರಿಗೆ ಸ್ವೀಕೃತಿ ಲೆಕ್ಕಾಚಾರ 

– ನಿರ್ಮಲಾ ಸೀತಾರಾಮಾನ್‌

06:5101 Feb 2023

ಶೇ 7.5  ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಮಾಡಲು ಮಹಿಳಾ ಸಮ್ಮಾನ್‌ ಅಡಿ ಅವಕಾಶ

‘ಕಂಪನಿ ಕಾಯ್ದೆ’ಯಡಿ ಅರ್ಜಿಗಳನ್ನು ಸಲ್ಲಿಸುವ ಕಂಪನಿಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಸಂಸ್ಕರಣಾ ಕೇಂದ್ರ’ವನ್ನು ಸ್ಥಾಪಿಸಲಾಗುವುದು

ಸಾಲದ ಹರಿವನ್ನು ಸುಗಮಗೊಳಿಸಲು, ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. 

ಕ್ಲೈಮ್ ಮಾಡದ ಷೇರುಗಳು ಮತ್ತು ಡಿವಿಡೆಂಡ್‌ಗಳನ್ನು ಮರುಪಡೆಯಲು ‘ಇಂಟಿಗ್ರೇಟೆಡ್ ಐಟಿ ಪೋರ್ಟಲ್’ ಅನ್ನು ಸ್ಥಾಪಿಸಲಾಗುವುದು. 

ಶೇ 7.5  ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಇಡಲು ‘ಮಹಿಳಾ ಸಮ್ಮಾನ್’ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದನ್ನು 2025ರ ವರೆಗೆ ವಿಸ್ತರಿಸಲಾಗುತ್ತದೆ. 

–ನಿರ್ಮಲಾ ಸೀತಾರಾಮನ್‌ 

06:4601 Feb 2023
06:4501 Feb 2023

ನಿಯಮಗಳ ಮರುಪರಿಶೀಲನೆಗೆ ಸೂಚಿಸಲಾಗುವುದು– ಕೇಂದ್ರ

ಹಣಕಾಸು ವಲಯದ ನಿಯಂತ್ರಕರಿಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಸಮಗ್ರವಾಗಿ ಮರುಪರಿಶೀಲನೆ ಮಾಡುವಂತೆ ತಿಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.