ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ಜ್ಯುವೆಲ್ಸ್‌ ಬ್ರ್ಯಾಂಡ್‌ ರಾಯಭಾರಿಯಾಗಿ ನಟ ರಾಮ್ ಚರಣ್‌

Published 10 ಏಪ್ರಿಲ್ 2024, 22:30 IST
Last Updated 10 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಭೀಮಾ ಜ್ಯುವೆಲ್ಸ್‌ನ ಬ್ರ್ಯಾಂಡ್‌ ರಾಯಭಾರಿಯಾಗಿ ನಟ ರಾಮ್ ಚರಣ್ ನೇಮಕವಾಗಿದ್ದಾರೆ.

ಭೀಮಾ ಜ್ಯುವೆಲ್ಸ್‌ ಒಂದು ಶತಮಾನದ ಇತಿಹಾಸ ಹೊಂದಿದ್ದು, ತನ್ನ ಅಸಾಧಾರಣ ಕರಕುಶಲತೆ ಮತ್ತು ನಾವೀನ್ಯಕ್ಕೆ ಪ್ರಸಿದ್ಧಿ ಪಡೆದಿದೆ. ರಾಮ್ ಚರಣ್ ಅವರು ತಮ್ಮ ಕ್ರಿಯಾತ್ಮಕ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಭೀಮಾ ಜ್ಯುವೆಲ್ಸ್‌ನೊಂದಿಗಿನ ಅವರ ಒಡನಾಟವು ಎರಡು ಪರಂಪರೆಗಳ ಸಾಮರಸ್ಯದ ಸಂಗಮವಾಗಿದೆ ಎಂದು ಕಂಪನಿ ತಿಳಿಸಿದೆ.

‘ರಾಮ್ ಚರಣ್ ಅವರಂತಹ ಕ್ರಿಯಾತ್ಮಕ ನಟರೊಂದಿಗೆ ಕೈಜೋಡಿದ್ದೇವೆ. ಈ ಪಾಲುದಾರಿಕೆಯು ಗುಣಮಟ್ಟ ಮತ್ತು ಶ್ರೇಷ್ಠತೆಗೆ ಬಗೆಗಿನ ನಮ್ಮ ಬದ್ಧತೆ ಕುರಿತು ಹೇಳುತ್ತದೆ. ಅವರೊಟ್ಟಿಗಿನ ಒ‍ಪ್ಪಂದವು ಮಾರುಕಟ್ಟೆಯಲ್ಲಿ ನಮ್ಮ ಬ್ರ್ಯಾಂಡ್‌ ಅನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ’ ಎಂದು ಭೀಮಾ ಜ್ಯುವೆಲ್ಸ್ ಅಧ್ಯಕ್ಷರಾದ ಬಿ. ಬಿಂದುಮಾಧವ್ ಹೇಳಿದ್ದಾರೆ.

‘ಭೀಮಾ ಜ್ಯುವೆಲ್ಸ್‌ನ ಮೂರನೇ ತಲೆಮಾರಿನ ಬ್ರ್ಯಾಂಡ್‌ ರಾಯಭಾರಿಯಾಗಿ ರಾಮ್ ಚರಣ್ ಅವರನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಒಪ್ಪಂದವು ಭಾರತ ಮತ್ತು ಯುಎಇಯಲ್ಲಿ ನಮ್ಮ ಗ್ರಾಹಕರ ನೆಲೆಯನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ಭೀಮಾ ಜ್ಯುವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಬಿಂದುಮಾಧವ್ ಹೇಳಿದ್ದಾರೆ.

‌‘ಸಂಪ್ರದಾಯ ಮತ್ತು ಕರಕುಶಲತೆಗೆ ಸಮಾನಾರ್ಥಕವಾದ ಭೀಮಾ ಜ್ಯುವೆಲ್ಸ್‌ ರಾಯಭಾರಿಯಾಗಿರುವುದು ನನಗೆ ಖುಷಿಯಾಗುತ್ತಿದೆ. ಇದು ಯುವಪೀಳಿಗೆಯ ನಂಬಿಕೆ ಮತ್ತು ಉನ್ನತ ಕಲೆಗಾರಿಕೆಯನ್ನು ಸಂಕೇತಿಸುತ್ತದೆ’ ಎಂದು ನಟ ರಾಮ್ ಚರಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT