ವಹಿವಾಟು ವಿಸ್ತರಣೆಗೆ ಆದೀಶ್ವರ ಕ್ರಮ

7
ಲಾಟರಿ ಮೂಲಕ ಬಹುಮಾನ ವಿಜೇತರ ಆಯ್ಕೆ

ವಹಿವಾಟು ವಿಸ್ತರಣೆಗೆ ಆದೀಶ್ವರ ಕ್ರಮ

Published:
Updated:
Deccan Herald

ಬೆಂಗಳೂರು: ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್‌ ಸರಕುಗಳ ಮಾರಾಟ ಸಂಸ್ಥೆ ಆದೀಶ್ವರ್ ಎಲೆಕ್ಟ್ರೊ ವರ್ಲ್ಡ್ ಸಂಸ್ಥೆಯು 2020ರ ವೇಳೆಗೆ ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು 100ಕ್ಕೆ ಏರಿಸಲು ಉದ್ದೇಶಿಸಿದೆ.

‘ಗ್ರಾಹಕರ ಮನ ಗೆಲ್ಲಲು ಮುಂದಿನ ಹಣಕಾಸು ವರ್ಷದಲ್ಲಿ ಇನ್ನಷ್ಟು ಆಕರ್ಷಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಸದ್ಯಕ್ಕೆ ಬೆಂಗಳೂರಿನಲ್ಲಿ 34 ಮಳಿಗೆಗಳು ಸೇರಿದಂತೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ 66 ಮಳಿಗೆಗಳು ಇವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾರಸ್‌ ಜೈನ್‌ ಹೇಳಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ನಡೆಸಿದ್ದ ವಿಶೇಷ ಮಾರಾಟದ ಅದೃಷ್ಟಶಾಲಿ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬಂಪರ್‌ ಬಹುಮಾನ ರೂಪದಲ್ಲಿ 1 ಕೆ.ಜಿ ಚಿನ್ನ  (ಕೂಪನ್‌ ಸಂಖ್ಯೆ 854684), ಹುಂಡೈ ಕ್ರಿಟಾ ಕಾರ್‌ (034514), 10 ಮಂದಿಗೆ ರೆನೊ ಕ್ವಿಡ್‌ ಕಾರ್‌, 100 ಮಂದಿಗೆ ಎಲ್‌ಇಡಿ ಟಿವಿ, ಒಂದು ಸಾವಿರ ಗ್ರಾಹಕರು ಮಿಕ್ಸರ್‌ ಗ್ರೈಂಡರ್‌ ಮತ್ತು 10 ಸಾವಿರ  ಗ್ರಾಹಕರು ₹ 1 ಸಾವಿರ ಬೆಲೆಯ ಗಿಫ್ಟ್‌ ಕಾರ್ಡ್‌ ಪಡೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !