ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಲಹೆಗಾರ ಸುಬ್ರಮಣಿಯನ್‌ ನಿರ್ಗಮನಕ್ಕೆ ಕಾರಣಗಳು ಏನಿರಬಹುದು?

ಮೋದಿ ಸರ್ಕಾರದ ಅವಧಿಯಲ್ಲಿ ಮೂವರು ಉನ್ನತ ಅರ್ಥಿಕ ತಜ್ಞರ ನಿರ್ಗಮನ
Last Updated 21 ಜೂನ್ 2018, 13:31 IST
ಅಕ್ಷರ ಗಾತ್ರ

ನವದೆಹಲಿ: ಮೋದಿ ಸರ್ಕಾರದ ಅವಧಿಯಲ್ಲಿವಿಶ್ವದ ಉನ್ನತ ಅರ್ಥಿಕ ತಜ್ಞರು ಎಂದು ಗುರುತಿಸಿಕೊಂಡಿರುವ ರಘುರಾಮ್ ರಾಜನ್‌ ಮತ್ತು ಅರವಿಂದ್ ಪನಗರಿಯಾ ಬಳಿಕಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ಹಣಕಾಸು ಸಚಿವಾಲಯದಿಂದ ಹೊರ ಹೋಗುತ್ತಿದ್ದಾರೆ.

ಸುಬ್ರಮಣಿಯನ್ ಅವರನ್ನು 2014ರ ಅಕ್ಟೋಬರ್‌ ತಿಂಗಳಲ್ಲಿ ಮೂರು ವರ್ಷಗಳ ಅವಧಿಗಾಗಿ ಈ ಹುದ್ದೆಗೆ ನೇಮಿಸಲಾಗಿತ್ತು. 2017ರಲ್ಲಿ ಅವರ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷದವರೆಗೆ ಮುಂದುವರೆಸಲಾಗಿತ್ತು. ಅರವಿಂದ ಸುಬ್ರಮಣಿಯನ್‌ ಅವರ ನಿರ್ಧಾರವನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದರು.

ಕೆಲ ದಿನಗಳ ಹಿಂದೆ ಅರವಿಂದ್‌ ಅವರು ನನ್ನ ಜತೆ ವಿಡಿಯೊ ಸಂವಾದದ ಮೂಲಕ ಸಂ‍ಪರ್ಕಿಸಿ, ಕೌಟುಂಬಿಕ ಕಾರಣಗಳಿಗಾಗಿ ತಾವು ಅಮೆರಿಕೆಗೆ ಮರಳಲು ನಿರ್ಧರಿಸಿರುವುದನ್ನು ನನ್ನ ಗಮನಕ್ಕೆ ತಂದಿದ್ದರು. ವೈಯಕ್ತಿಕ ಕಾರಣಗಳು ಅವರಿಗೆ ತುಂಬ ಮಹತ್ವವಾಗಿದ್ದವು. ಅವರ ನಿರ್ಧಾರಕ್ಕೆ ಸಮ್ಮತಿಸದೇ ನನಗೆ ಬೇರೆ ದಾರಿಯೇ ಇದ್ದಿರಲಿಲ್ಲ’ ಎಂದು ಜೇಟ್ಲಿ ಬರೆದು ಕೊಂಡಿದ್ದರು.

ಸುಬ್ರಮಣಿಯನ್‌ ನಿರ್ಗಮನಕ್ಕೆ ಕಾರಣಗಳು ಏನಿರಬಹುದು?

ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್‌ ತಿಂಗಳಲ್ಲಿ ₹ 500 ಮತ್ತು ₹1000 ಮುಖಬೆಲೆಯ ನೋಟುಗಳ ರದ್ದು ಮಾಡುವ ವಿಚಾರವನ್ನು ಸುಬ್ರಮಣಿಯನ್‌ ಅವರ ಗಮನಕ್ಕೆ ತಂದಿರಲಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ದಿ ಪ್ರಿಂಟ್‌ ಸುದ್ದಿ ತಾಣ ವರದಿ ಮಾಡಿದೆ.

ಅರವಿಂದ ಸುಬ್ರಮಣಿಯನ್‌ ಅವರು ವಿಶ್ವಬ್ಯಾಂಕ್‌ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ ಎಂದುಹಣಕಾಸು ಇಲಾಖೆಯ ಮೂಲಗಳ ತಿಳಿಸಿವೆ. ಸುಬ್ರಮಣಿಯನ್‌ ಅವರ ಹೆಸರು ವಿಶ್ವಬ್ಯಾಂಕ್‌ ಅಂಗಳದಲ್ಲಿ ಹರಿದಾಡುತ್ತಿದ್ದು ಅವರು ನೇಮಕವಾಗುವುದು ಖಚಿತವಾಗಿರುವುದರಿಂದ ಅವರುಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯನ್ನು ತೊರೆಯುತ್ತಿದ್ದಾರೆ ಎಂದು ಅವರ ಅಪ್ತರೊಬ್ಬರು ಹೇಳಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಜೆಂಡಾರಘುರಾಮ್‌ ರಾಜನ್‌ ಮತ್ತು ಅರವಿಂದ್ ಪನಗರಿಯಾ ಅವರಂತೆ ಅರವಿಂದ ಸುಬ್ರಮಣಿಯನ್‌ ಅವರಿಗೂ ಕೂಡಮುಕ್ತವಾಗಿ ಕೆಲಸ ಮಾಡಲು ಬಿಟ್ಟಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇತ್ತೀಚೆಗೆ ಸುಬ್ರಮಣಿಯನ್ ಅವರ ಹೇಳಿಕೆಗಳನ್ನು ಖಂಡಿಸಿ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ರಾಜಿನಾಮೆಗೆ ಒತ್ತಾಯಿಸಿದ್ದರು. ಈ ಬೆಳವಣಿಗೆಗಳುಆರ್ಥಿಕ ಸಲಹೆಗಾರ ಹುದ್ದೆ ತೊರೆಯಲು ಕಾರಣ ಎನ್ನಲಾಗಿದೆ.

ಅರವಿಂದ ಸುಬ್ರಮಣಿಯನ್‌ ಅವರು ನಿರ್ಗಮನವನ್ನು ಆರ್‌ಎಸ್‌ಎಸ್ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್‌ (ಎಸ್‌ಜೆಎಂ) ಸ್ವಾಗತಿಸಿ ಬುಧವಾರ ಹೇಳಿಕೆ ನೀಡಿತ್ತು.ಎಸ್‌ಜೆಎಂ ಮುಖ್ಯಸ್ಥರಾದ ಅಶ್ವನಿ ಮಹಾಜನ್‌ ಅವರು ನಮಗೆ ’ಅಮದು ತಜ್ಞರು’ ಬೇಕಿಲ್ಲ, . ಸುಬ್ರಮಣಿಯನ್‌ ಅವರಿಗೆ ಈ ದೇಶದ ಪರಿಸ್ಥಿತಿ ಬಗ್ಗೆ ಅರಿವಿಲ್ಲ ಹಾಗೇ ಅವರಲ್ಲಿ ಐಡಿಯಾಗಳ ಕೊರತೆ ಇದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಜನ್‌ಧನ್‌, ಆಧಾರ್‌ ಯೋಜನೆಗಳನ್ನು ಕಾರ್ಯಗತ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರ ಹೊಡಿಕೆಗೂ ಬೆಂಬಲ ನೀಡಿದ್ದರು. ಹಾಗೇ ಕಾರ್ಪೋರೇಟ್‌ ವಲಯ ಹಾಗೂ ಸಾಲಗಾರರ ನಡುವಿನ ಲೆಕ್ಕ ಪತ್ರ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದರು ಎಂದುಆರ್ಥಿಕ ಸಮೀಕ್ಷೆಯೊಂದು ತಿಳಿಸಿದೆ.

ಅರವಿಂದ ಸುಬ್ರಮಣಿಯನ್‌ ಅವರು ಬಡತನ ನಿರ್ಮೂಲಗೆ ಹಲವಾರು ಸಲಹೆಗಳನ್ನು ನೀಡಿದ್ದರು, ಹಾಗೇ ಸರ್ಕಾರಿ ಯೋಜನೆಯ ಹಣ ಗ್ರಾಹಕರ ಬ್ಯಾಂಕ್‌ ಖಾತೆಗೆ ನೇರವಾಗಿ ಸಂದಾಯವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮತ್ತೊಂದು ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT