ಅಮೆಜಾನ್‌:10ರಿಂದ ಶಾಪಿಂಗ್ ಉತ್ಸವ

7

ಅಮೆಜಾನ್‌:10ರಿಂದ ಶಾಪಿಂಗ್ ಉತ್ಸವ

Published:
Updated:

ಬೆಂಗಳೂರು: ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ಇಂಡಿಯಾ, ಇದೇ 10ರಿಂದ 15ರವರೆಗೆ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಹೆಸರಿನ ಖರೀದಿ ಉತ್ಸವ ಆಯೋಜಿಸಿದೆ.

ಪ್ರೈಮ್ ಸದಸ್ಯರಿಗೆ ಅ. 9ರಂದೇ ಮಧ್ಯಾಹ್ನ 12 ಗಂಟೆಯಿಂದ ಖರೀದಿ ಉತ್ಸವಕ್ಕೆ ಅವಕಾಶ ಮಾಡಿಕೊಡಲಾಗುವುದು.

ಈ ಖರೀದಿ ಉತ್ಸವ ಸಂದರ್ಭದಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್‌, ಟಿವಿ, ಗೃಹೋಪಯೋಗಿ ಸಲಕರಣೆ, ಫ್ಯಾಷನ್‌, ದಿನಸಿ, ಸೌಂದರ್ಯ ಪ್ರಸಾಧನ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ವ್ಯಾಪಕ ಶ್ರೇಣಿಯ ಸರಕುಗಳನ್ನು ಆಕರ್ಷಕ ದರಗಳಲ್ಲಿ ಖರೀದಿಸಬಹುದು. ನೂರಾರು ಪ್ರಮುಖ ಬ್ರ್ಯಾಂಡ್‌ಗಳು, 4 ಲಕ್ಷಕ್ಕೂ ಹೆಚ್ಚು ಮಾರಾಟಗಾರರ ವೈವಿಧ್ಯಮಯ ಉತ್ಪನ್ನಗಳು ಅಮೆಜಾನ್ ಡಾಟ್‌ ಇನ್‌ (Amazon.in) ತಾಣದಲ್ಲಿ ಲಭ್ಯವಾಗಿರಲಿವೆ.

ಎಸ್‌ಬಿಐ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುವವರಿಗೆ ಶೇ 10ರಷ್ಟು ರಿಯಾಯ್ತಿ ನೀಡಲಾಗುವುದು.

ಅಮೆಜಾನ್‌ ಫೆಸ್ಟಿವ್‌ ಹೋಂ: ಅಭಿರುಚಿ ಮತ್ತು ಬಜೆಟ್‌ಗೆ ತಕ್ಕಂತೆ ಮನೆಯ ಪ್ರತಿಯೊಬ್ಬ ಸದಸ್ಯರ ಅಗತ್ಯಗಳನ್ನೂ ‘ಫೆಸ್ಟಿವ್‌ ಹೋಂ’ ಹೆಸರನಲ್ಲಿ ಒದಗಿಸಲಾಗುವುದು. 100ಕ್ಕೂ ಹೆಚ್ಚು ಬ್ರ್ಯಾಂಡ್‌ನ ಒಂದು ಸಾವಿರಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ ಇರಲಿವೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !