ಗುರುವಾರ , ಅಕ್ಟೋಬರ್ 21, 2021
29 °C

2 ವರ್ಷಗಳಲ್ಲಿ ಕಾನೂನು, ವೃತ್ತಿಪರ ಶುಲ್ಕವಾಗಿ ₹ 8,546 ಕೋಟಿ ಪಾವತಿಸಿದ ಅಮೆಜಾನ್!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆಜಾನ್ ಕಂಪನಿಯು 2018ರಿಂದ 2020ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಕಾನೂನು ಮತ್ತು ವೃತ್ತಿಪರ ಸೇವಾ ಶುಲ್ಕವಾಗಿ ₹ 8,546 ಕೋಟಿ ವಿನಿಯೋಗಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮೆಜಾನ್ ಕಂಪನಿಯು 2018–19ರಲ್ಲಿ ₹ 3,420 ಕೋಟಿ ಹಾಗೂ 2019–20ರಲ್ಲಿ ₹ 5,126 ಕೋಟಿಯನ್ನು ಕಾನೂನು ಹಾಗೂ ವೃತ್ತಿಪರ ಸೇವಾ ಶುಲ್ಕದ ರೂಪದಲ್ಲಿ ಪಾವತಿ ಮಾಡಿದೆ ಎನ್ನಲಾಗಿದೆ. ಅಮೆಜಾನ್ ಕಂಪನಿಯ ಫ್ಯೂಚರ್ ಸಮೂಹದ ವಿಚಾರವಾಗಿ ಕಾನೂನು ಸಮರದಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ, ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ತನಿಖೆಯನ್ನು ಎದುರಿಸುತ್ತಿದೆ.

ಕಾನೂನು ಶುಲ್ಕದ ಬಗ್ಗೆ ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಅಲ್ಲಿರುವುದು ಕಾನೂನು ಶುಲ್ಕದ ವಿವರ ಮಾತ್ರವೇ ಅಲ್ಲ; ಅಲ್ಲಿ ವೃತ್ತಿಪರ ಸೇವೆಗಳಾದ ಹೊರಗುತ್ತಿಗೆ, ತೆರಿಗೆ ಸಮಾಲೋಚನೆ, ಗ್ರಾಹಕ ಸಂಶೋಧನೆ, ಗ್ರಾಹಕ ಸೇವಾ ವೆಚ್ಚಗಳು ಕೂಡ ಸೇರಿವೆ ಎಂದು ವಕ್ತಾರರು ಹೇಳಿದ್ದಾರೆ.

ಅಮೆಜಾನ್ ಕಂಪನಿಯು, ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಅಡಿಯಲ್ಲಿ ತನ್ನ ಕಾನೂನು ಪ್ರತಿನಿಧಿಗಳ ವಿರುದ್ಧ ತನಿಖೆ ಆರಂಭಿಸಿದೆ ಎಂದು ಡಿಜಿಟಲ್ ಮಾಧ್ಯಮ ‘ಮಾರ್ನಿಂಗ್ ಕಂಟೆಕ್ಸ್ಟ್‌’ ಸೋಮವಾರ ವರದಿ ಮಾಡಿದೆ. ಈ ಆರೋಪವನ್ನು ಅಮೆಜಾನ್ ಒಪ್ಪಿಕೊಂಡಿಲ್ಲ, ಅಲ್ಲಗಳೆದೂ ಇಲ್ಲ. ಆದರೆ, ‘ಭ್ರಷ್ಟಾಚಾರವನ್ನು ಸಹಿಸುವುದಿಲ್ಲ’ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು