ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಲಕ್ಷ ಹೂಡಿಕೆದಾರರಿಗೆ ಹಣ ಮರುಪಾವತಿ: ಸೆಬಿ

Published 15 ಫೆಬ್ರುವರಿ 2024, 16:00 IST
Last Updated 15 ಫೆಬ್ರುವರಿ 2024, 16:00 IST
ಅಕ್ಷರ ಗಾತ್ರ

ನವದೆಹಲಿ:‌ ಹಣ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಭಾಗಿಯಾಗಿರುವ ಪರ್ಲ್ಸ್‌ ಆಗ್ರೊಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ನಲ್ಲಿ (ಪಿಎಸಿಎಲ್‌) ಹೂಡಿಕೆ ಮಾಡಿದ್ದ 21 ಲಕ್ಷ ಹೂಡಿಕೆದಾರರಿಗೆ ₹1,022 ಕೋಟಿ ಮೊತ್ತವನ್ನು ಮರು‍ಪಾವತಿ ಮಾಡಲಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಗುರುವಾರ ತಿಳಿಸಿದೆ.

‘ಪಿಎಸಿಎಲ್‌’ ಕಾನೂನುಬಾಹಿರವಾದ ಹೂಡಿಕೆ ಯೋಜನೆಗಳಲ್ಲಿ ತೊಡಗಿತ್ತು. ಕೃಷಿ ಮತ್ತು ರಿಯಲ್‌ ಎಸ್ಟೇಟ್‌ ವಹಿವಾಟಿನ ಹೆಸರಿನಡಿ ಸಾರ್ವಜನಿಕರಿಂದ ₹60 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿರುವುದನ್ನು ಸೆಬಿ ಪತ್ತೆ ಹಚ್ಚಿತ್ತು.  ಹೂಡಿಕೆದಾರರಿಗೆ ಹಣ ಹಿಂದಿರುಗಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ನೇತೃತ್ವದಡಿ ಸಮಿತಿ ರಚಿಸಿತ್ತು. 

ಒಟ್ಟು ₹19 ಸಾವಿರ ಕೋಟಿ ಮೊತ್ತದಲ್ಲಿ ಅರ್ಹರಿಗೆ ಹಣ ಮರುಪಾವತಿ ಮಾಡುವಲ್ಲಿ ಸಮಿತಿಯ ಯಶಸ್ವಿಯಾಗಿದೆ ಎಂದು ಸೆಬಿ ತಿಳಿಸಿದೆ. 

ಸಕಾಲದಲ್ಲಿ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವಲ್ಲಿ ಪಿಎಸಿಎಲ್‌ ಮತ್ತು ಅದರ 9 ಪ್ರವರ್ತಕರು, ನಿರ್ದೇಶಕರು ವಿಫಲರಾಗಿದ್ದರು. ಹಾಗಾಗಿ, 2015ರಲ್ಲಿ ಅವರಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡಲು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT